ಬೈಂದೂರು: ಕುಂದಾಪುರ ವಲಯದ ವಿಶೇಷ ಶಿಲುಬೆಯ ಹಾದಿ ಕಾರ್ಯಕ್ರಮ ಖುರ್ಸಾಚೆ ವಾಟ್ ಬೈಂದೂರಿನ ಹೋಲಿಕ್ರಾಸ್ ಇಗರ್ಜಿ ಗುಡ್ಡೆಯಲ್ಲಿ ಜರುಗಿತು.
ವಲಯದ ಧರ್ಮಕೇಂದ್ರಗಳಾದ ಬೈಂದೂರು, ಪಡುಕೋಣೆ, ತ್ರಾಸಿ, ತಲ್ಲೂರು, ಗಂಗೊಳ್ಳಿ, ಕುಂದಾಪುರ, ಪಿಯೂಸ್ ನಗರ, ಬಸ್ರೂರು, ಕೋಟ, ಕೋಟೇಶ್ವರ ಮತ್ತು ಸಾಸ್ತಾನದಿಂದ ಬಂದಂತಹ ಭಕ್ತಾಧಿಗಳು ಉಡುಪಿಯ ಬಿಷಪ್ ಅತೀ ವಂದನೀಯ ರೆ. ಜೆರಾಲ್ಡ್ ಐಸಾಕ್ ಲೋಬೋ ರವರ ನೇತೃತ್ವದಲ್ಲಿ ಯೇಸು ಕ್ರಿಸ್ತನ ಶಿಲುಬೆಗೆ ಏರಿಸುವ ೧೪ ವಿಶೇಷ ಕಷ್ಟದ ಸಂದರ್ಭಗಳನ್ನು ನೆನಪಿಸಿಕೊಂಡು ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ದಿವ್ಯ ಬಲಿಪೂಜೆ ಜರುಗಿತು.
ಈ ಸಂದರ್ಭದಲ್ಲಿ ಕುಂದಾಪುರದ ಮುಖ್ಯ ಧರ್ಮಗುರು ರೆ.ಫಾ. ಅನಿಲ್ ಡಿಸೋಜಾ, ರೆ.ಫಾ. ಪ್ರಕಾಶ್ ಡಿಸೋಜಾ ಕುಂದಾಪುರ, ಗಂಗೊಳ್ಳಿಯ ರೆ.ಫಾ. ಆಲ್ಬರ್ಟ್ ಕ್ರಾಸ್ತಾ, ತ್ರಾಸಿಯ ಚಾರ್ಲ್ಸ್ ಲೂಯಿಸ್, ಪಡುಕೋಣೆಯ ರೆ.ಫಾ. ಜೊಸೆಪ್ ಮಚಾದೋ, ಸಾಸ್ತಾನದ ಜಾನ್ ಮೆಂಡೆನ್ಸೊರವರು ಉಪಸ್ಥಿತರಿದ್ದರು. ಬೈಂದೂರಿನ ಧರ್ಮಗುರುಗಳಾದ ರೆ.ಫಾ. ರೊನಾಲ್ಡ್ ಮಿರಾಂದ್ ರವರ ಉಸ್ತುವಾರಿಯಲ್ಲಿ ಈ ಕಾರ್ಯಕ್ರಮ ಜರುಗಿತು.