ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಶ್ರೀ ಮೂಕಾಂಬಿಕಾ ದೇವಳದಲ್ಲಿರುವವರೇ ಚಿನ್ನಾಭರಣ ಕಳವು ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿ, ದೇವಳಕ್ಕಷ್ಟೇ ಅಲ್ಲದೇ ಇಡೀ ಊರಿಗೆ ಕಳಂಕ ತಂದಿಟ್ಟಿದ್ದಾರೆ. ಈ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗಿ ಮಾನ ಹರಾಜಾಗುತ್ತಿದ್ದರೂ, ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯ ಧೋರಣೆ ಹೊಂದಿ ತಪ್ಪಿತಸರಿಗೆ ರಕ್ಷಣೆ ನೀಡುತ್ತಿರುವುದು ವಿಷಾದನೀಯ. ಇನ್ನಾದರೂ ದೇವಳದ ಆಡಳಿತ ವ್ಯವಸ್ಥೆಯಲ್ಲಿನ ಲೋಪಗಳನ್ನು ಬಗೆಹರಿಸದಿದ್ದರೇ ಗ್ರಾಮಸ್ಥರು ಉಗ್ರ ಪ್ರತಿಭಟನೆಗೂ ಸಿದ್ದ.
ಇದು ಕೊಲ್ಲೂರು ಸ.ಹಿ.ಪ್ರಾ. ಶಾಲೆಯ ಸಭಾಗಂಣನಲ್ಲಿ ನಡೆದ ಎರಡನೇ ಸುತ್ತಿನ ಗ್ರಾಮಸಭೆಯ ಕೇಳಿಬಂದ ಒಕ್ಕೊರಲ ಆಗ್ರಹ.
ಗ್ರಾಮಸ್ಥ ಹರೀಶ್ ತೋಳಾರ್ ಮಾತನಾಡಿ ಕಳ್ಳತನದ ಆರೋಪದ ಮೇಲೆ ಬಂಧಿತರಾಗಿ ಜಾಮೀನಿನ ಮೇಲೆ ಬಿಡುಗಡೆಗೊಂಡ ಆರೋಪಿಗಳು ಮತ್ತೆ ದೇವಸ್ಥಾನದಲ್ಲಿಯೇ ತಿರುಗಾಡುತ್ತಿದ್ದಾರೆ. ಅಪರಾಧ ಎಸಗಿದವರೇ ಇಷ್ಟು ರಾಜಾರೋಷವಾಗಿರುವುದು ತಿರುಗಾಡುತ್ತಿರುವುದು, ಇತರರಿಗೂ ತಪ್ಪು ಮಾಡಿದರೆ ಏನೂ ಆಗದೆಂಬ ಭಾವನೆ ಮೂಡಿಸುತ್ತಿದೆ. ಅಲ್ಲದೇ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಾಧಾರಗಳನ್ನು ನಾಶಪಡಿಸದೇ ಇರಲಾರರು. ತಪ್ಪಿತಸ್ಥರನ್ನು ಕೂಡಲೇ ಕೆಲಸದಿಂದ ವಜಾಗೊಳಿಸಿ ಭಕ್ತರ ಭಾವನೆಗಳಿಗೂ ಬೆಲೆ ಕೊಡಬೇಕಾಗಿದೆ ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಇದಕ್ಕೆ ಕೊಲ್ಲೂರು ಠಾಣಾಧಿಕಾರಿ ಶೇಖರಪ್ಪ ಉತ್ತರಿಸಿ, ಆರೋಪ ಸಾಬೀತಾದರೇ ಶಿಕ್ಷೆಯಾಗಲಿದೆ. ಜಾಮೀನು ಪಡೆದ ಆರೋಪಿಗಳು ಮತ್ತೆ ದೇವಳಕ್ಕೆ ತೆರಳಿರುವ ಬಗ್ಗೆ ಮಾಹಿತಿ ಇಲ್ಲ. ದೇವಳದಲ್ಲಿ ಕಳ್ಳತನದಂತಹ ಪ್ರಕರಣಗಳು ನಡೆದಲ್ಲಿ ಕಾರ್ಯನಿರ್ವಹಣಾಧಿಕಾರಿಗಳ ಕೂಡಲೇ ಮಾಹಿತಿ ನೀಡುವಂತೆ ತಿಳಿಸಿದ್ದೇವೆ. ದೇವಳದ ಅಧಿಕಾರಿಗಳಿಂದ ಹೇಳಿಕೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದರು.
ಗ್ರಾಮಸ್ಥ ಸಂದೀಪ್ ಮಾತನಾಡಿ ತಪ್ಪಿತಸರಿಗೆ ತಕ್ಕ ಶಿಕ್ಷೆಯಾಗಬೇಕು. ದೇವಳದ ವಸತಿಗೃಹ ಖಾಸಗಿಕರಣ, ಅನ್ನದಾಸೋಹ ಸ್ಭೆರಿದಂತೆ ಹಲವಾರು ಸಮಸ್ಯೆಗಳಿದ್ದು ಅದು ಬಗೆಹರಿಯಬೇಕಿದೆ. ದೇವಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಜನರ ಅಹವಾಲು ಕೇಳದೇ ರಥೋತ್ಸವದ ಪೂರ್ವಸಿದ್ಧತಾ ಸಭೆಯಲ್ಲಿ ಭಾಗಹಿಸಿ ತೆರಳಿದ್ದಾರೆ. ಊರಿನ ಜಾತ್ರೆಗೆ ಸ್ಥಳೀಯರಿಗೆ ಆಹ್ವಾನ ನೀಡದೇ ಸಭೆ ನಡೆಸಿರುವುದು ಸರಿಯಲ್ಲಿ ಎಂದವರು ಆಕ್ರೋಶ ವ್ಯಕ್ತಪಡಿಸಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಸ್ಥಳೀಯ ಚಂದ್ರ ಬಳೆಗಾರ ಮಾತನಾಡಿ ಚಿನ್ನಾಭರಣ ಕಳವು ಪ್ರಕರಣದಲ್ಲಿ ಯಾರೇ ಭಾಗಿಯಾಗಿರಲಿ, ಅವರಿಗೆ ಶಿಕ್ಷೆಯಾಗಬೇಕು. ಇದರೊಂದಿಗೆ ಮುಜರಾಯಿ ಇಲಾಖೆಯ ಅಧಿಕಾರಿಗಳನ್ನು ಇದೇ ದೇವಳದಲ್ಲಿ ಖಾಯಂಗೊಳಿಸದೇ ಇತರೇ ಮುಜರಾಯಿ ದೇವಳಕ್ಕೆ ವರ್ಗಾಯಿಸಬೇಕು ಎಂದವರು ಆಗ್ರಹಿಸಿದರು.
ರಥೋತ್ಸವದಂದೇ ಪ್ರತಿಭಟನೆಯ ಎಚ್ಚರಿಕೆ: ಕೊಲ್ಲೂರಿಗೆ ಕಳಂಕವನ್ನು ತಂದೊಡ್ಡಿರುವ ಪ್ರಕರಣದಲ್ಲಿ ಅಪರಾಧಿಗಳನ್ನು ರಕ್ಷಿಸುವ ಷಡ್ಯಂತ್ರ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಇದು ಸರಿಯಲ್ಲ. ಭಕ್ತರ ಧಾರ್ಮಿಕ ಭಾವನೆಗೆ ಚ್ಯುತಿ ತರುವ ಕೆಲಸವನ್ನು ದೇವಳದ ಅಧಿಕಾರಿಗಳು ಹಾಗೂ ಅರ್ಚಕರು ನಿರಂತರವಾಗಿ ಮಾಡುತ್ತಲೇ ಬರುತ್ತಿದ್ದಾರೆ. ಇದು ಹೀಗೆಯೇ ಮುಂದುವರಿದು, ತಪ್ಪಿತಸರಿಗೆ ಶಿಕ್ಷೆಯಾಗದಿದ್ದರೇ ಊರವರೆಲ್ಲರೂ ಒಂದಾಗಿ ರಥೋತ್ಸವದ ದಿನವೇ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ಅತಿಕ್ರಮಣ ತೆರವುಗೊಳಿಸಿ: ಕೊಲೂರಿನ ಬೀದಿಗಳನ್ನು ಅಂಗಡಿ ಹಾಗೂ ವಸತಿಗೃಹಗಳು ಅತಿಕ್ರಮಿಸುತ್ತಲೇ ಇವೆ. ಅಂಗಡಿ ಮುಂಗಟ್ಟುಗಳಲ್ಲಿ ದಿನದಿಂದ ದಿನಕ್ಕೆ ರಸ್ತೆಯ ಇಕ್ಕೆಲದವರೆಗೂ ವಿಸ್ತರಿಸುತ್ತಲೇ ಇದ್ದಾರೆ. ವಸತಿಗೃಹಗಳ ಪಾರ್ಕಿಂಗ್, ಗಾರ್ಡನ್ ರಸ್ತೆಯ ಅಂಚಿಗೆ ಬಂದು ಚರಂಡಿ ಅಸ್ಥವ್ಯಸ್ಥಗೊಂಡಿದೆ ಎಂದು ಗ್ರಾಮಸ್ಥರೋರ್ವರು ಆರೋಪಿಸಿದರು.
ಕೊಲ್ಲೂರು ಗ್ರಾಪಂ ಅಧ್ಯಕ್ಷ ವಿಶ್ವನಾಥ ಅಡಿಗ ಮಾತನಾಡಿ ದೇವಳ ಪ್ರಕರಣದಿಂದ ಭಕ್ತರ ಭಾವನೆಗೆ ನೋವಾಗಿರುವುದಲ್ಲದೇ ಊರಿನ ಪ್ರತಿಷ್ಠೆಯ ವಿಷಯವಾಗಿ ಪರಿಣಮಿಸಿದೆ. ಹಾಗಾಗಿ ಪ್ರಕರಣದಲ್ಲಿ ಯಾರೇ ಭಾಗಿಯಾಗಿರಲೀ ಅವರಿಗೆ ಶಿಕ್ಷೆಯಾಗಲೇಬೇಕು. ಸಭೆಯ ನಿರ್ಣಯ ಪ್ರತಿಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಿ ಕ್ರಮ ಕೈಗೊಳ್ಳುವಂತೆ ತಿಳಿಸಲಾಗುವುದು ಎಂದರು. ಮಾರ್ಗದರ್ಶಿ ಅಧಿಕಾರಿಯಾಗಿ ತಾಪಂ ಸಹಾಯಕ ನಿರ್ದೇಶಕ ರಾಜೇಶ್, ಕೊಲ್ಲೂರು ಗ್ರಾಪಂ ಉಪಾಧ್ಯಕ್ಷೆ ಗಿರಿಜಾ, ತಾಪಂ ಸದಸ್ಯೆ ಗ್ರೀಷ್ಮಾ ಭಿಡೆ. ಗ್ರಾಪಂ ಸದಸ್ಯರುಗಳು, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಪಿಡಿಓ ನವೀನಕುಮಾರ್ ವಂದಿಸಿದರು.