ಯಕ್ಷಗಾನ ಅಭಿರುಚಿ ಮೌಲ್ಯ ಗಳಿಸಿಕೊಡುತ್ತದೆ: ಪ್ರಸಂಗಕರ್ತ ಬಸವರಾಜ ಶೆಟ್ಟಿಗಾರ್

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಪ್ರಾಚೀನ ಕಲದಿಂದಲೂ ನಮ್ಮ ಜನರಿಗೆ ಮೌಲ್ಯಗಳನ್ನುಗಳಿಸಿಕೊಡುವಲ್ಲಿ ಯಕ್ಷಗಾನದ ಪಾತ್ರ ಹಿರಿದು ಯಕ್ಷಗಾನ ಅಭಿರುಚಿ ಉಳ್ಳವನು ಆರ್ಥಿಕವಾಗಿ ಪ್ರಾಭಲ್ಯರಾಗುವುದಿಲ್ಲ. ಅದರೆ ಮೌಲ್ಯಯುತನಾಗುತ್ತಾನೆ. ಕಲಾಭಿರುಚಿಯೇ ಹಾಗೆ. ಬದುಕನ್ನು ಗಟ್ಟಿಗೊಳಿಸುವ ಮಾಧ್ಯಮ. ಕೋಟೆಶ್ವರದ ಜನರಿಗೆ ಈ ಹಬ್ಬದ ವಾತಾವರಣ ನಿಜಕ್ಕೂ ಪ್ರಶಂಸನೀಯ ಎಂದು ಖ್ಯಾತ ಪ್ರಸಂಗಕರ್ತ ಬಸವರಾಜ ಶೆಟ್ಟಿಗಾರ್ ಹೇಳಿದರು.

Call us

Click Here

ಕೋಟೇಶ್ವರ ರಥಬೀದಿಯಲ್ಲಿ ನಮ್ಮ ಕಲಾಕೇಂದ್ರದವರು ಆಯೋಜಿಸಿದ ಯಕ್ಷಹಬ್ಬ ೨೦೧೬ ರ ಎರಡನೇದಿನದ ಯಕ್ಷನುಡಿ ವೇದಿಕೆಯ ಗೌರವ ಅತಿಥಿಯಾಗಿ ಆಗಮಿಸಿ ಮಾತನಾಡಿದರು. ಕಲಾಕೇಂದ್ರದ ಅದ್ಯಕ್ಷ ವಕ್ವಾಡಿ ರಂಜಿತ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ಸಮಿತಿ ಅಧ್ಯಕ್ಷ ಕೆ.ರವಿರಾಜ ಶೆಟ್ಟಿ ಸ್ವಾಗತಿಸಿದರು. ಗೌರವಾಧ್ಯಕ್ಷ ಮಾರ್ಕೋಡು ಗೋಪಾಲ ಕೃಷ್ಣ ಶೆಟ್ಟಿ ವಂದಿಸಿದರು ಶ್ರೀರಾಜ್ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.ಕಾರ್ಯಕ್ರಮದ ಬಳಿಕ ಬಡಗುತಿಟ್ಟಿನ ಪ್ರಖ್ಯಾತ ಹವ್ಯಾಸಿ ಮತ್ತು ವೃತ್ತಿ ಕಲಾವಿದರ ಕೂಡುವಿಕೆಯಿಂದ ಶ್ರೀ ರಾಮ ಪಟ್ಟಾಭಿಷೇಕ ಎಂಬ ಯಕ್ಷಗಾನ ನಡೆಯಿತು.

Leave a Reply