ಎ.1: ಎನ್‌ಪಿಎಸ್ ಯೋಜನೆ ವಿರೋಧಿಸಿ ಕರಾಳ ದಿನಾಚರಣೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ನೂತನ ಪಿಂಚಣಿ ಯೋಜನೆ ಸರಕಾರಿ ನೌಕರರ ಮತ್ತು ಅವರ ಕುಟುಂಬಕ್ಕೆ ಮಾರಕವಾಗಿದ್ದು, ಈ ಯೋಜನೆ ರದ್ದು ಮಾಡುವಂತೆ ಆಗ್ರಹಿಸಿ ಹಾಗೂ ನಿಶ್ಚಿತ ಪಿಂಚಣಿಗೆ ಒತ್ತಾಯಿಸಿ ಎ.೧ ರಂದು ರಾಜ್ಯಾದ್ಯಂತ ಕರಾಳ ದಿನಾಚರಣೆ ನಡೆಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಸರಕಾರಿ ಎನ್‌ಪಿಎಸ್ ನೌಕರರ ಸಂಘ ಜಿಲ್ಲಾ ಸಂಚಾಲಕ ರವಿ ಎಸ್.ಬೈಕಾಡಿ ತಿಳಿಸಿದ್ದಾರೆ.

Call us

Click Here

ರಾಜ್ಯದಲ್ಲಿ ೧,೫೧,೫೬೫ ಮತ್ತು ಜಿಲ್ಲೆಯಲ್ಲಿ ೩ ಸಾವಿರ ಎನ್‌ಪಿಎಸ್ ನೌಕರರಿದ್ದು, ನೂತನ ಪಿಂಚಣಿ ಯೋಜನೆ ನೌಕರರಿಗೆ ಮರಣ ಶಾಸನವಾಗಿದೆ. ಇದನ್ನು ವಿರೋಧಿಸಿ ಕರಾಳ ದಿನಾಚರಣೆ ಜೊತೆ ಶಾಸಕರಿಗೆ, ಸಚಿವರಿಗೆ, ಸಂಸದರಿಗೆ ಪತ್ರ ಚಳವಳಿ ಆರಂಭಿಸಲಾಗುತ್ತದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನೌಕರರು ನಿವೃತ್ತಿ ನಂತರ ಅವರಿಗೆ ಲಭ್ಯವಿರುವ ಉಪಧನಗಳಿಗಾಗಿ ಷೇರು ಮಾರುಕಟ್ಟೆ ಅವಲಂಭಿಸಬೇಕಾಗುತ್ತದೆ. ಈ ಯೋಜನೆ ಖಾಸಗಿ ಭಂಡವಾಳಶಾಯಿಗಳನ್ನು ಓಲೈಸಲು ಜಾರಿಗೆ ತಂದಿದ್ದು, ನೌಕರರ ಹಿತಾಸಕ್ತಿಗೆ ವಿರೋಧವಾಗಿದೆ ಎಂದು ಅವರು ಆರೋಪಿಸಿದರು.

ಎನ್‌ಪಿಎಸ್ ಯೋಜನೆ ತಕ್ಷಣ ರದ್ದು ಮಾಡಬೇಕು. ನಿಶ್ಚಿತ ಪಿಂಚಣಿ ಯೋಜನೆ ಜಾರಿಗೆ ತರಬೇಕು. ಈಗಾಗಲೇ ಮೃತಪಟ್ಟ ಎನ್‌ಪಿಎಸ್ ನೌಕರರ ಅವಲಂಭಿತರಿಗೆ ಹಿಂದಿನ ಪಿಂಚಣಿ ಯೋಜನೆ ಸವಲತ್ತು ನೀಡಬೇಕು. ಪಿಎಫ್‌ಆರ್‌ಡಿಎ ಕಾಯಿದೆ ಕೇಂದ್ರ ಸರಕಾರ ಹಿಂದಕ್ಕೆ ಪಡೆಯುವಂತೆ ಅವರು ಆಗ್ರಹಿಸಿದರು.

ಕೇಂದ್ರ ಸರಕಾರ ೭ನೇ ವೇತನ ಆಯೋಗದ ಶಿಪಾರಸ್ಸು ಜಾರಿಗೆ ತರಲು ತೀರ್ಮಾಸಿದೆ. ಆದರೆ ರಾಜ್ಯ ಸರಕಾರ ನೌಕರರು ದೇಶದಲ್ಲೇ ಅತೀ ಕಡಿಮೆ ಸಂಬಳದಲ್ಲಿ ಕೆಲಸ ಮಾಡುತ್ತಿದ್ದು, ಪ್ರಸಕ್ತ ಕೇಂದ್ರ ಮತ್ತು ರಾಜ್ಯ ಸರಕಾರ ವೇತನ ತಾರತಮ್ಯ ಶೇ.೬೪ರಷ್ಟಿದೆ. ರಾಜ್ಯ ಸರಕಾರ ಬಜೆಟ್ ಮುನ್ನಾ ವೇತನ ತಾರತಮ್ಯ ಸರಿಪಡಿಸುವ ಭರವಸೆ ನೀಡಿತ್ತು. ಆದರೆ ರಾಜ್ಯ ಸರಕಾರ ನೌಕರರ ವಿರೋಧಿ ದೋರಣೆ ಅನುಸರಿಸುತ್ತಿದ್ದು, ಎನ್‌ಪಿಎಸ್ ಯೋಜನೆ ಸಂಸತ್ ಅನುಮೋಧಿಸುವ ಮೊದಲೇ ರಾಜ್ಯ ಸರಕಾರ ನೌಕರರಿಗೆ ಅಳವಡಿಸಿದೆ ಎಂದು ದೂರಿದರು.

Click here

Click here

Click here

Click Here

Call us

Call us

ಎನ್‌ಪಿಎಸ್ ರಾಜ್ಯ ಸರಕಾರಿ ನೌಕರರು ಅತ್ಯಂತ ಕಡಿಮೆ ವೇತನ ಪಡೆಯುತ್ತಿದ್ದು, ಅದರಲ್ಲಿ ಶೇ.೧೦ರಷ್ಟು ವಂತಿಗೆಯಾಗಿ ನೀಡಬೇಕಿದೆ. ೭ನೇ ವೇತನ ಆಯೋಗ ಅಧ್ಯಯನ ನಡೆಸಿ, ಮಾರುಕಟ್ಟೆ ದರಗಳನ್ವಯ ವೇತನ ನಿರ್ಧರಿಸಿದ್ದು, ಇದನ್ನು ರಾಜ್ಯ ಸರಕಾರಿ ನೌಕರರಿಗೆ ಅನ್ವಯಸದೇ ಇರುವುದು ಅವೈಜ್ಞಾನಿಕ ಕ್ರಮ. ಈ ಎಲ್ಲಾ ಹಿನ್ನೆಲೆಯಲ್ಲಿ ಎ.೬ ರಂದು ಕುಂದಾಪುರಕ್ಕೆ ಆಗಮಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವರಿಕೆ ಮಾಡಲು ಮನವಿ ಸಲ್ಲಿಸಲಾಗುತ್ತದೆ ಎಂಬ ಮಾಹಿತಿ ನೀಡಿದರು.

ಕರ್ನಾಟಕ ರಾಜ್ಯ ಸರಕಾರ ಎನ್‌ಪಿಎಸ್ ನೌಕರರ ಸಂಘ ಜಿಲ್ಲಾಧ್ಯಕ್ಷ ರಘು ಶೆಟ್ಟಿ, ಕುಂದಾಪುರ ತಾಲೂಕ್ ಅಧ್ಯಕ್ಷ ಹರೀಶ್ ಶೆಟ್ಟಿ, ಉಡುಪಿ ತಾಲೂಕ್ ಅಧ್ಯಕ್ಷ ರವಿ ಕುಮಾರ್, ಕಾರ್ಕಳ ತಾಲೂಕ್ ಅಧ್ಯಕ್ಷ ಸಂತೋಷ್ ಕುಮಾರ್, ಜಿಲ್ಲಾ ಉಪಾಧ್ಯಕ್ಷೆ ಸರಸ್ವತಿ, ಗೌರವ ಸಲಹೆಗಾರ ಸಂತೋಷ್ ಇದ್ದರು.

Leave a Reply