ಧರ್ಮದಲ್ಲಿನ ನಂಬುಗೆ ಮನುಷ್ಯನನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುತ್ತದೆ: ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಧರ್ಮವೆಂಬುದು ಎಲ್ಲರನ್ನೂ ಒಳ್ಳೆಯತನದಲ್ಲಿ ಬದುಕುವಂತೆ ಮಾಡುವ ವ್ಯವಸ್ಥೆ. ಬೆಟ್ಟದಷ್ಟು ಆಶೋತ್ತರಗಳು ಈಡೇರಿಸಿಕೊಳ್ಳುವ ಆತುರದಲ್ಲಿ ಅನ್ಯಾಯ, ಅಧರ್ಮ ಮಿತಿಮೀರಬಾರದು ಎಂಬ ಕಾರಣಕ್ಕೆ ಧರ್ಮದ ಚೌಕಟ್ಟನ್ನು ಹಾಕಲಾಯಿತು. ಧರ್ಮದ ಹಿಂದೆ ದೈವಿಶಕ್ತಿ ಇದ್ದಾಗ ಮನುಷ್ಯ ಸನ್ಮಾರ್ಗದಲ್ಲಿ ನಡೆಯುತ್ತಾನೆ ಎಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

Call us

Click Here

ಹೇರಂಜಾಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ನೂತ ಶಿಲಾ ದೇಗುಲ ಸಮರ್ಪಣೆ, ಪುನರ್‌ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆರ್ಶಿವಚನವಿತ್ತು.

ಧರ್ಮ-ಅಧರ್ಮ, ಸುಖ-ದುಖಃಗಳ ಕಲ್ಪನೆಯೇ ಇಲ್ಲದ ಚಾರುವಾಕನ ಸಿದ್ಧಾಂತವನ್ನು ಒಪ್ಪಿ ನಡೆದರೇ ಸಮಾಜಲ್ಲಾಗುವ ಅನ್ಯಾಯಗಳನ್ನು ಸರಿ ಎನ್ನಬೇಕಾದಿತು. ಆಸ್ತಿಕನ ಬದುಕಿನ ನಡೆಯ ಹಿಂದಿನ ದೈವೀಶೃದ್ಧೆ ಹಾಗೂ ನಂಬಿಕೆ ತಪ್ಪು ಮಾಡಲು ಹಿಂಜರಿಯುವಂತೆ ಮಾಡುತ್ತದೆ. ಕೈಮೀರಿ ತಪ್ಪುಗಳಾದಗೂ ಆತ ಪಶ್ಚಾತಾಪ ಪಡುತ್ತಾನೆ. ಜೀವನದಲ್ಲಿ ಧರ್ಮ-ಅಧರ್ಮ, ಪುಣ್ಯ ಪಾಪದ ಕಲ್ಪನೆ ಇದ್ದರೆ ಮಾತ್ರ ನಾವು ಸನ್ಮಾರ್ಗದಲ್ಲಿ ನಡೆಯಲು ಸಾಧ್ಯ ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ನಮ್ಮನ್ನು ಮೀರಿದ ಶಕ್ತಿಯೊಂದು ಜಗತ್ತನ್ನು ನಿಯಂತ್ರಣ ಮಾಡುತ್ತಿದೆ ಎಂಬುದು ನಿತ್ಯನುಭವಕ್ಕೆ ಸಿದ್ಧವಾದ ಸಂಗತಿ. ನಮ್ಮ ಇಚ್ಛೆ ಈಡೇರಬೇಕಾದರೇ ಅದಕ್ಕೆ ಪೂರಕವಾಗಿ ದೈವಿಇಚ್ಛೆಯೂ ಕೂಡಿಬರಬೇಕು. ಇಚ್ಛೆ ಇತ್ತು ದೈವಿಚ್ಛೆ ವಿರುದ್ಧ ದಿಕ್ಕಿನಲ್ಲಿದ್ದಾಗ ಕಾರ್ಯಸಿದ್ಧಿ ಸಾಧ್ಯವಿಲ್ಲ ಎಂದರು.

ವೇ.ಮೂ. ಕೃಷ್ಣ ಸೋಮಾಯಾಜಿ ಅಧ್ಯಕ್ಷತೆ ವಹಿಸಿದ್ದರು. ಪೇರ್ಡೂರು ಮಹತೋಭಾರ ಶ್ರೀ ಅನಂತಪದ್ಮನಾಭ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಸದಾನಂದ ಸೇರ್ವೇಗಾರ್ ಉಪಸ್ಥಿತಿರಿದ್ದರು.

Click here

Click here

Click here

Click Here

Call us

Call us

ಶ್ರೀ ದುರ್ಗಾಪರಮೇಶ್ವರಿ ದೇವಳದ ಜೀಣೋದ್ಧಾರ ಕಾರ್ಯಕ್ಕೆ ಹೆಚ್ಚಿನ ದೇಣಿಗೆಯಿತ್ತ ದಾನಿಗಳನ್ನು ಗೌರವಿಸಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕ ಹಾಗೂ ಅನುವಂಶಿಯ ಮೊಕ್ತೇಸರ ಶ್ರೀಧರ ಉಡುಪ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಕ ವಿಶ್ವನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಇದನ್ನೂ ಓದಿ ►  ಹೇರಂಜಾಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ: ನೂತನ ಶಿಲಾದೇಗುಲ ಸಮರ್ಪಣೆ – http://kundapraa.com/?p=12635 .

Heranjalu Shri Durgapameshwari Temple - Brahma Kalashotsava (1) Heranjalu Shri Durgapameshwari Temple - Brahma Kalashotsava (2) Heranjalu Shri Durgapameshwari Temple - Brahma Kalashotsava (3) Heranjalu Shri Durgapameshwari Temple - Brahma Kalashotsava (4) Heranjalu Shri Durgapameshwari Temple - Brahma Kalashotsava (5)

Heranjalu Shri Durgapameshwari Temple - Brahma Kalashotsava (6) Heranjalu Shri Durgapameshwari Temple - Brahma Kalashotsava (10) Heranjalu Shri Durgapameshwari Temple - Brahma Kalashotsava (9) Heranjalu Shri Durgapameshwari Temple - Brahma Kalashotsava (8) Heranjalu Shri Durgapameshwari Temple - Brahma Kalashotsava (7)

DSCN3891

Heranjalu Shri Durgapameshwari Temple - Brahma Kalashotsava (11) Heranjalu Shri Durgapameshwari Temple - Brahma Kalashotsava (12) Heranjalu Shri Durgapameshwari Temple - Brahma Kalashotsava (13) Heranjalu Shri Durgapameshwari Temple - Brahma Kalashotsava (14) Heranjalu Shri Durgapameshwari Temple - Brahma Kalashotsava (15)

Heranjalu Shri Durgapameshwari Temple - Brahma Kalashotsava (16) Heranjalu Shri Durgapameshwari Temple - Brahma Kalashotsava (17)

Leave a Reply