ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಉಡುಪಿ ಜಿಲ್ಲಾ ಪಂಚಾಯತ್, ಕುಂದಾಪುರ ತಾಲೂಕ್ ಪಂಚಾಯತ್, ತ್ರಾಸಿ ಮತ್ತು ಹೊಸಾಡು ಗ್ರಾಮ ಫಂಚಾಯತ್ ಆಶ್ರಯದಲ್ಲಿ ತ್ರಾಸಿ ಅಂಬೇಡ್ಕರ್ ಭವನದಲ್ಲಿ ತಾಲೂಕು ಮಟ್ಟದ ಸ್ವಚ್ಛತಾ ಸಪ್ತಾಹ ಮತ್ತು ಅರಿವು ಕಾರ‍್ಯಕ್ರಮ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ ಸ್ವಚ್ಛತಾ ಆಂದೋಲನಾ ಪ್ರತಿಯೊಬ್ಬರ ಮನೆಯಿಂದಲೇ ಆರಂಭವಾಗಬೇಕು.ಅಂv ರಂಗ ಬಹಿರಂಗ ಶುದ್ಧಿಗೆ ಕೊಡುವಷ್ಟೇ ಪ್ರಾಮುಖ್ಯತೆ ಪರಿಸರದ ಸ್ವಚ್ಛತೆಗೂ ನೀಡಿದರೆ ಸ್ವಚ್ಛತಾ ಆಂದೋಲನಕ್ಕೊಂದು ಬೆಲೆ ಬರುತ್ತದೆ ಎಂದು ಬೈಂದೂರು ಶಾಸಕ ಹೇಳಿದರು.
ತ್ರಾಸಿ ಗ್ರಾಪಂ. ಅಧ್ಯಕ್ಷ ವೆಂಕಟ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ತ್ರಾಸಿ ಜಿಪಂ. ಸದಸ್ಯೆ ಶೋಭಾ ಜಿ. ಪುತ್ರನ್, ತ್ರಾಸಿ ತಾಪಂ. ಸದಸ್ಯ ನಾರಾಯಣ ಕೆ.ಗುಜ್ಜಾಡಿ, ಹೆಮ್ಮಾಡಿ ತಾಪಂ. ಸದಸ್ಯ ರಾಜು ದೇವಾಡಿಗ, ಹೊಸಾಡು ಗ್ರಾಪಂ. ಅಧ್ಯಕ್ಷ ಚಂದ್ರಶೇಖರ ಪೂಜಾರಿ ಆರಾಟೆ, ತ್ರಾಸಿ ಗ್ರಾಪಂ. ಉಪಾದ್ಯಕ್ಷೆ ಜೀತಾ ಡಿಸಿಲ್ವಾ, ಹೊಸಾಡು ಗ್ರಾಪಂ. ಉಪಾಧ್ಯಕ್ಷ ವಂದನಾ ಖಾರ್ವಿ, ಹೊಸಾಡು ಗ್ರಾಪಂ. ಸದಸ್ಯ ಸೀತಾರಾಮ ಶೆಟ್ಟಿ, ತ್ರಾಸಿ ಗ್ರಾಪಂ ಸದಸ್ಯ ವಿಜಯ ಪೂಜಾರಿ ಹೊಸಾಡು ಮತ್ತು ತ್ರಾಸಿ ಗ್ರಾಪಂ ಸದಸ್ಯರು ಇದ್ದರು.
ಇದೇ ಸಂದರ್ಭದಲ್ಲಿ ಸ್ವಚ್ಛತಾ ಸಪ್ತಹಾ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿವಿಧ ಶಾಲಾ ಮಕ್ಕಳು ತ್ರಾಸಿಯಲ್ಲಿ ಜಾಥಾ ನಡೆಸಿದರು. ತ್ರಾಸಿ ಗ್ರಾಪಂ. ಅಭಿವೃದ್ಧಿ ಅಧಿಕಾರಿ ಶೋಭಾ ಸ್ವಾಗತಿಸಿ, ನಿರೂಪಿಸಿದರು.