ಹೊಸಾಡು: ಬಾಲವೃಂದ ಧ್ವನಿಮುದ್ರಣ ಸಂಪನ್ನ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಆಕಾಶವಾಣಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳು ಇಂದಿಗೂ ಜನಪ್ರಿಯವಾಗಿವೆ. ಗ್ರಾಮೀಣ ಮಕ್ಕಳ ಸಾಂಸ್ಕೃತಿಕ ಮತ್ತು ಕಲಾ ಪ್ರತಿಭೆಯನ್ನು ಆಕಾಶವಾಣಿಯ ಮೂಲಕ ಕೇಳುಗರಿಗೆ ತಲುಪಿಸುವ ನಿಟ್ಟಿನಲ್ಲಿ ಸ್ಥಳೀಯರ ಸಹಕಾರ ಆವಶ್ಯಕ ಎಂದು ಮಂಗಳೂರು ಆಕಾಶವಾಣಿ ಬಾಲವೃಂದ ವಿಭಾಗದ ನಿರ್ದೇಶಕಿ ಶುಭದಾ ಅವರು ಹೇಳಿದರು.

Call us

Click Here

ಮಂಗಳೂರು ಆಕಾಶವಾಣಿ ಸಹಯೋಗದೊಂದಿಗೆ ಹೊಸಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಜರಗಿದ ಸಮುದಾಯದತ್ತ ಶಾಲೆ ಮತ್ತು ಆಕಾಶವಾಣಿಯಲ್ಲಿ ಪ್ರತೀ ರವಿವಾರ ಪ್ರಸಾರವಾಗುವ ಚಿಣ್ಣರ ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮ ಬಾಲವೃಂದ ಧ್ವನಿಮುದ್ರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಸುಕುಮಾರ ದೇವಾಡಿಗ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾಮೀಣ ಮಕ್ಕಳ ಪ್ರತಿಭೆಯನ್ನು ಬೆಳಕಿಗೆ ತಂದು ಪ್ರಸಾರಗೊಳಿಸುವ ಆಕಾಶವಾಣಿಯ ಕಾರ್ಯ ಪ್ರಶಂಸನೀಯ ಎಂದರು.

ಮುಖ್ಯ ಅತಿಥಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸುಮಲತಾ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಮೂಹ ಸಂಪನ್ಮೂಲ ವ್ಯಕ್ತಿ ನಾರಾಯಣ ದೇವಾಡಿಗ, ಸುರೇಂದ್ರ, ಶಿಕ್ಷಕರ ಸಂಘದ ಸದಸ್ಯೆ ಗಿರಿಜಾ, ಸಮುದಾಯದತ್ತ ಶಾಲಾ ಕಾರ್ಯಕ್ರಮದ ಮೇಲ್ವಿಚಾರಕ ಕೃಷ್ಣಮೂರ್ತಿ, ಹಕ್ಲಾಡಿ ಶಾಲಾ ಶಿಕ್ಷಕ ಸಂಜೀವ, ಪತ್ರಕರ್ತ ಚಂದ್ರ ಕೆ. ಹೆಮ್ಮಾಡಿ, ಶಿಕ್ಷಕಿ ಉಷಾ ಕಾರಂತ ಮೊದಲಾದವರು ಉಪಸ್ಥಿತರಿದ್ದರು.

ಮುಖ್ಯಶಿಕ್ಷಕಿ ನಿರ್ಮಲಾದೇವಿ ಅವರು ಸ್ವಾಗತಿಸಿದರು. ಬಾರಂದಾಡಿ ಶಾಲಾ ಸಹಶಿಕ್ಷಕ ಕೇಶವ ಶ್ಯಾನುಭೋಗ್ ಎಲ್ಲಂಗಳ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕ ಜಯರಾಮ ಪಟಗಾರ ಅವರು ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕ ಸಂತೋಷ ಖಾರ್ವಿ ಅವರು ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಬಾರಂದಾಡಿ, ಹಕ್ಲಾಡಿ, ಹೊಸಾಡು ಮತ್ತು ಕಟ್ಟಿನಮಕ್ಕಿ ಸರಕಾರಿ ಪ್ರಾಥಮಿಕ ಶಾಲಾ ಮಕ್ಕಳ ಬಾಲವೃಂದ ಧ್ವನಿಮುದ್ರಣ ನಡೆಯಿತು.

Leave a Reply