ಕುಂದಾಪುರ: ವಿದ್ಯುತ್ ಉತ್ಪಾದನೆಯಲ್ಲಿ ಸ್ವಯತ್ತತೆ ಸಾಧಿಸಿದ ಗುರುಕುಲ ಶಿಕ್ಷಣ ಸಂಸ್ಥೆ

Call us

Call us

Call us

Call us

ಸೋಲಾರ್ ನೆಟ್ ಮೀಟರಿಂಗ್ ಸಿಸ್ಟಮ್ ಮೂಲಕ ಸೌರಶಕ್ತಿಯ ಸಮರ್ಪಕ ಬಳಕೆ.

Call us

Click Here

Click here

  • ಸುನಿಲ್ ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ.

ಕುಂದಾಪುರ: ಒಂದೆಡೆ ಪವರ್‌ಕಟ್. ಮತ್ತೊಂದೆಡೆ ಏರುತ್ತಿರುವ ಕರೆಂಟ್ ಬಿಲ್. ಇದಕ್ಕೊಂದು ಮುಕ್ತಿ ದೊರಕಿಸುವ ನಿಟ್ಟಿನಲ್ಲಿ ಕೈಗೊಂಡದ್ದು ಮಾತ್ರ ಮಾದರಿ ಯೋಜನೆ. ಅದು ಸೋಲಾರ್ ನೆಟ್ ಮೀಟರಿಂಗ್ ಸಿಸ್ಟಮ್. ಹೇರಳವಾಗಿ ದೊರೆಯುವ ಸೌರಶಕ್ತಿಯನ್ನು ಉಪಯೋಗಿಸಿಕೊಂಡು ಇಡಿ ಕ್ಯಾಂಪಸ್‌ಗೆ ಬೇಕಾದಷ್ಟು ವಿದ್ಯುತ್ತನ್ನು ಬಳಸಿಕೊಳ್ಳುವುದಲ್ಲದೇ ಮಿಕ್ಕಿದ್ದನ್ನು ಮೆಸ್ಕಾಂಗೆ ಮಾರಾಟ ಮಾಡುವ ಈ ವಿನೂತನ ಯೋಜನೆಯನ್ನು ರಾಜ್ಯದಲ್ಲಿಯೇ ಮೊದಲ ಬಾರಿಗೆ ಅಳವಡಿಸಿಕೊಂಡದ್ದು, ಬಾಂಡ್ಯ ಎಜುಕೇಶನಲ್ ಟ್ರಸ್ಟ್ ಆಡಳಿತಕ್ಕೊಳಪಟ್ಟ ಗುರುಕುಲ ಪಬ್ಲಿಕ್ ಸ್ಕೂಲ್ ಹಾಗೂ ಪಿಯುಸಿ ಶಿಕ್ಷಣ ಸಂಸ್ಥೆಗಳು.

ಸೋಲಾರ್ ನೆಟ್ ಮೀಟರಿಂಗ್ ಸಿಸ್ಟಮ್: ಏನು, ಹೇಗೆ?
ಗುರುಕುಲ ಸಂಸ್ಥೆಯ ಮೇಲ್ಛಾವಣಿಯಲ್ಲಿ ಸುಮಾರು 5 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ 225 ಸೋಲಾರ್ ಪ್ಯಾನಲ್ ಅಳವಡಿಸಲಾಗಿದೆ. ಇದರ ಮೂಲಕ ದಿನವೊಂದಕ್ಕೆ ಸರಾಸರಿ 250 ಯೂನಿಟ್ ಸೌರವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಆದರೆ ಇಲ್ಲಿನ ಉತ್ಪಾದನೆಯಾಗುವ ವಿದ್ಯುತ್ತನ್ನು ನೇರವಾಗಿ ಬಳಕೆ ಮಾಡಲಾಗದು. ಸೌರಶಕ್ತಿಯಿಂದ ಉತ್ಪಾದನೆಯಾದ ವಿದ್ಯುತ್‌ನ್ನು ನೇರವಾಗಿ ಮೆಸ್ಕಾಂ ಗ್ರೀಡ್‌ಗೆ ವರ್ಗಾವಣೆಯಾಗುತ್ತದೆ. ಆ ಬಳಿಕವಷ್ಟೇ ಮೆಸ್ಕಾಂನಿಂದ ಬರುವ ವಿದ್ಯುತ್ತನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ. ಹೀಗೆ ತಿಂಗಳಿಗೆ 6,500ರಿಂದ 7,000 ಸಾವಿರ ಯುನಿಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಕುಂದಾಪ್ರ ಡಾಟ್ ಕಾಂ ವರದಿ.

ವಿದ್ಯುತ್ ಬಿಲ್ ಇಲ್ಲ:
ಇಡಿ ಕ್ಯಾಂಪಸ್‌ಗೆ ಪ್ರತಿದಿನ ಸುಮಾರು 150-160 ಯುನಿಟ್ ವಿದ್ಯುತ್ ಬಳಕೆಯಾಗಿ ಮಿಕ್ಕ ಯುನಿಟ್‌ನ್ನು 9.56ರೂ ದರದಲ್ಲಿ ಮೆಸ್ಕಾಂಗೆ ಮಾರಾಟ ಮಾಡಲಾಗುತ್ತದೆ. ನೆಟ್ ಮೀಟರಿಂಗ್ ಸಿಸ್ಟಮ್‌ನಲ್ಲಿ ದಿನವೊಂದಕ್ಕೆ ಎಷ್ಟು ಯುನಿಟ್ ಉತ್ಪಾದನೆಯಾಗುತ್ತದೆ, ಎಷ್ಟು ಬಳಕೆಯಾಗುತ್ತಿದೆ ಎಂಬ ಸಂಪೂರ್ಣ ಮಾಹಿತಿ ಮೀಟರ್‌ನಲ್ಲಿ ಲಭ್ಯವಾಗುತ್ತದೆ. ಪ್ರತಿ ತಿಂಗಳು ಸುಮಾರು 30 ಸಾವಿರ ವಿದ್ಯುತ್ ಬಿಲ್ ಪಾವತಿಸುತ್ತಿದ್ದ ಶಿಕ್ಷಣ ಸಂಸ್ಥೆ, ಒಂದೇ ಬಾರಿ 40 ಲಕ್ಷ ರೂ. ವೆಚ್ಚಮಾಡಿ ಒಂದು ಖಾಯಂ ಪರಿಹಾರ ಕಂಡುಕೊಂಡಿದೆ. ಅಂದಹಾಗೆ ಈ ಆರಂಭಿಕ ಬಂಡವಾಳ 8 ರಿಂದ 9 ವರ್ಷಗಳಲ್ಲಿ ವಿದ್ಯುತ್ ಮಾರಾಟದ ಆದಾಯದಿಂದಲೇ ವಾಪಾಸ್ ಬರಲಿದೆ.

[quote font_size=”15″ bgcolor=”#ffffff” bcolor=”#dd2727″ arrow=”yes” align=”right”]●ನಮ್ಮ ಸಂಸ್ಥೆಯ ಸಲುವಾಗಿ ಮಾತ್ರವಲ್ಲದೇ ಸಾಮಾಜಿಕ ಬದ್ಧತೆಯನ್ನಿಟ್ಟುಕೊಂಡು ಸೋಲಾರ್ ನೆಟ್ ಮೀಟರಿಂಗ್ ಸಿಸ್ಟಮ್ ಅಳವಡಿಸಕೊಳ್ಳಲಾಗಿದೆ. ನಮ್ಮ ಬಳಕೆಗೆ ಮಿಕ್ಕಿದ ವಿದ್ಯುತ್ ಇತರರಿಗೆ ಉಪಯೋಗವಾಗುತ್ತಿದೆ. ಆದರೆ ಇಂತಹ ಯೋಜನೆಗಳಿಗೆ ಸರಕಾರದಿಂದ ಪ್ರೋತ್ಸಾಹ ದೊರಕುತ್ತಿಲ್ಲ. ದುಬಾರಿ ಉಪಕರಣಗಳನ್ನು ಅಳವಡಿಸಿಕೊಳ್ಳಬೇಕಿದೆ. ಹಗಲಿನ ವೇಳೆಯಲ್ಲಿ ಪವರ್‌ಕಟ್ ಮಾಡಿದರೇ ಇಲ್ಲಿ ಸೌರವಿದ್ಯುತ್ ಉತ್ಪಾದಿಸಲು ಸಾಧ್ಯವಿಲ್ಲ. ಸರಕಾರ ಇಂತಹ ಯೋಜನೆಗಳಿಗೆ ಪ್ರೋತ್ಸಾಹಿಸಿ ಪವರ್‌ಕಟ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದಾಗಿದೆ. – ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ, ಆಡಳಿತ ನಿರ್ದೇಶಕ, ಬಾಂಡ್ಯ ಎಜುಕೇಶನಲ್ ಟ್ರಸ್ಟ್.[/quote]

Click here

Call us

Call us

Click Here

Visit Now

ಮಾದರಿ ಸಂಸ್ಥೆಯಲ್ಲಿ ರಾಜ್ಯದಲ್ಲಿಯೇ ಮೊದಲ ಅನುಷ್ಠಾನ:
ಬಾಂಡ್ಯ ಎಜುಕೇಶನಲ್ ಟ್ರಸ್ಟ್ ಮೂಲಕ ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ ಅವರ ನೇತೃತ್ವದಲ್ಲಿ, ಆಡಳಿತ ನಿರ್ದೇಶಕ ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ ಹಾಗೂ ಜಂಟಿ ಕಾರ್ಯದರ್ಶಿ ಅನುಪಮಾ ಎಸ್. ಶೆಟ್ಟಿ ಅವರ ಕನಸಿನ ಕೂಸಾಗಿ 2006ರಲ್ಲಿ ಸ್ಥಾಪನೆಗೊಂಡ ಗುರುಕುಲ ಪಬ್ಲಿಕ್ ಸ್ಕೂಲ್ ಹಾಗೂ ಪದವಿಪೂರ್ವ ಶಿಕ್ಷಣ ಸಂಸ್ಥೆಗಳು ಹಿಂದಿನ ಕಾಲದ ಗುರುಕುಲ ಮಾದರಿಯ ಜೊತೆಗೆ ಉತ್ಕೃಷ್ಟ ಶೈಕ್ಷಣಿಕ ವಾತಾವರಣವನ್ನು ನಿರ್ಮಿಸಿ ಮನೆಮಾತಾಗಿದೆ. ಅಷ್ಟೇ ಅಲ್ಲದೇ ಆರಂಭದಿಂದಲೂ ಸತತವಾಗಿ ನೂರು ಪ್ರತಿಶತ ಫಲಿತಾಂಶವನ್ನು ದಾಖಲಿಸುತ್ತಲೇ ಬಂದಿದೆ. ಕುಂದಾಪ್ರ ಡಾಟ್ ಕಾಂ ವರದಿ.

ಸಂಸ್ಥೆಯು ಹತ್ತನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ವಿದ್ಯುತ್ ಸಮಸ್ಯೆಗೊಂದು ಪರಿಹಾರ ಕಂಡುಕೊಳ್ಳಬೇಕು ಮತ್ತು ಅದರೊಂದಿಗೆ ಒಂದಿಷ್ಟು ಸಾಮಾಜಿಕ ಕಳಕಳಿಯೂ ಇರಬೇಕು ಎಂಬ ಉದ್ದೇಶದಿಂದ ಬೃಹತ್ ಮೊತ್ತದ ಸೋಲಾರ್ ನೆಟ್ ಮೀಟರಿಂಗ್ ಸಿಸ್ಟಮ್ ಅಳವಡಿಸಿಕೊಳ್ಳಲು ಸಂಸ್ಥೆ ಯೋಚಿಸಿತ್ತು. ಸೋಲಾರ್ ಉತ್ಪನ್ನಗಳ ಕ್ಷೇತ್ರದಲ್ಲಿ ಮುಚೂಣಿಯಲ್ಲಿರುವ ಬಂಟ್ ಸೋಲಾರ್ ಅವರ ಮುಂದಾಳತ್ವದಲ್ಲಿ ಕಳೆದ ಸೆ.3ರಂದು ರಾಜ್ಯದಲ್ಲಿಯೇ ಮೊದಲ ಬಾರಿಗೆ ಸೋಲಾರ್ ನೆಟ್‌ಮೀಟರಿಂಗ್ ಸಿಸ್ಟ್‌ಮ್ ಅಳವಡಿಸಿಕೊಂಡಿತು. ಇದರಿಂದ ಕೇವಲ ಶಿಕ್ಷಣ ಸಂಸ್ಥೆಗಷ್ಟೇ ಅಲ್ಲದೇ ಸುತ್ತಲಿನ ಪರಿಸರಕ್ಕೂ ಒಂದಿಷ್ಟು ವಿದ್ಯುತ್ ಉತ್ಪಾದಿಸಿಕೊಡುವ ಮೂಲಕ ಮಾದರಿ ಎನಿಸಿಕೊಂಡಿದೆ. ಕುಂದಾಪ್ರ ಡಾಟ್ ಕಾಂ ವರದಿ.

ದುಬಾರಿ ಯೋಜನೆ, ಸರಕಾರದ ಪ್ರೋತ್ಸಾಹ ಬೇಕು:
ಗುರುಕುಲದಲ್ಲಿ ಅಳವಡಿಸಲಾಗಿರುವ ಸೋಲಾರ್ ನೆಟ್ ಮೀಟರಿಗೆ ಸಿಸ್ಟಮ್ ಸ್ವಲ್ಪ ದುಬಾರಿಯೇ. ಸೋಲಾರ್ ಉಪಕರಣಗಳಿಗೆ ಸರಕಾರದ ಸಬ್ಸಿಡಿ ಇಲ್ಲದ ಕಾರಣ ಅವುಗಳನ್ನು ಅಳವಡಿಕೊಳ್ಳುವವರ ಪ್ರಮಾಣವೂ ಕಡಿಮೆ. ನೆಟ್‌ಮೀಟರಿಂಗ್ ವಿಧಾನದ ಮೂಲಕ ವಿದ್ಯುತ್ ಸೋಲಾರ್ ವಿದ್ಯುತ್ ಉತ್ಪಾದನೆಯಾಗಬೇಕಿದ್ದರೇ ಅದಕ್ಕೆ ಪೂರಕವಾಗಿ ವಿದ್ಯುಚ್ಛಕ್ತಿಯೂ ಬೇಕು. ಆದರೆ ಅನಿಯಮಿತ ಪವರ್‌ಕಟ್‌ನಿಂದಾಗಿ ಉತ್ಪಾದನೆಯ ಮೇಲೆ ಹೊಡೆತ ಬೀಳುತ್ತಿದೆ. ಉತ್ಪಾದನೆಯಾದ ವಿದ್ಯುತ್ ಸಂಗ್ರಹಿಸಿಟ್ಟುಕೊಳ್ಳಲಾಗದ ಕಾರಣ ಅವುಗಳನ್ನು ಮೆಸ್ಕಾಂ ವರ್ಗಾಯಿಸುವುದು ಅನಿವಾರ್ಯ. ಸರಕಾರದ ಪ್ರೋತ್ಸಾಹ ದೊರೆತರೆ ಇಂತಹ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಬಹುದು. ನೈಸರ್ಗಿಕ ಸಂಪನ್ಮೂಲವನ್ನು ಯಾವುದೇ ಹಾನಿಯಿಲ್ಲದೇ ಬಳಸಿಕೊಳ್ಳುವ ಮೂಲಕ ವಿದ್ಯುತ್ ಕ್ಷಾಮಕ್ಕೂ ಒಂದು ಪರಿಹಾರ ಕಂಡುಕೊಳ್ಳಬಹುದಾಗಿದೆ.

ಒಟ್ಟಿನಲ್ಲಿ ಶಿಕ್ಷಣ ಸಂಸ್ಥೆಯೊಂದು ಇಂತಹ ಮಾದರಿ ಯೋಜನೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಪರಿಸರ ಸ್ನೇಹಿ ಪರಿಕಲ್ಪನೆಗೆ ತೆರೆದುಕೊಳ್ಳುತ್ತಿರುವುದು ಸ್ವಾಗತಾರ್ಹ.

ಇದನ್ನೂ ಓದಿ: ಗುರುಕುಲದಲ್ಲಿ ಸೋಲಾರ್ ನೆಟ್ ವೀಟರಿಂಗ್ ಸಿಸ್ಟೆಮ್ ಗೆ ಚಾಲನೆ – http://kundapraa.com/?p=4958 .

First time in state kundapura Gurukula School adapted Solar net metering system (1)_MG_8364 First time in state kundapura Gurukula School adapted Solar net metering system (4) First time in state kundapura Gurukula School adapted Solar net metering system (2) First time in state kundapura Gurukula School adapted Solar net metering system (3)_MG_8356First time in state kundapura Gurukula School adapted Solar net metering system (5)

One thought on “ಕುಂದಾಪುರ: ವಿದ್ಯುತ್ ಉತ್ಪಾದನೆಯಲ್ಲಿ ಸ್ವಯತ್ತತೆ ಸಾಧಿಸಿದ ಗುರುಕುಲ ಶಿಕ್ಷಣ ಸಂಸ್ಥೆ

Leave a Reply

Your email address will not be published. Required fields are marked *

four × one =