ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಜನ್ಮದಿನದ ಪ್ರಯುಕ್ತ ಅಭಿಮಾನಿಗಳಿಂದ ವಿವಿಧೆಡೆ ಸೇವಾ ಕಾರ್ಯ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಅವರ ಜನ್ಮದಿನದ ಅಂಗವಾಗಿ ಭಾನುವಾರ ಶಾಸಕ ಗಂಟಿಹೊಳೆ ಅವರ ಅಭಿಮಾನಿಗಳು ಕ್ಷೇತ್ರದ ವಿವಿಧ ಭಾಗಗಳಲ್ಲಿ ಹತ್ತಾರು ಸೇವಾ ಕಾರ್ಯಗಳನ್ನು ಹಮ್ಮಿಕೊಂಡಿದ್ದರು.

Call us

Click Here

ಕುಂದಾಪುರ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದೊಂದಿಗೆ ಅಭಿಮಾನಿ ಬಳಗದಿಂದ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಬೆಳಿಗ್ಗೆ ಉಪ್ಪುಂದದಲ್ಲಿ ಸಮೃದ್ಧ ಹಸಿರು ಕಾರ್ಯಕ್ರಮದಡಿಯಲ್ಲಿಗಿಡಗಳನ್ನು ನೆಡಲಾಯಿತು. ಸಿದ್ಧಾಪುರದಲ್ಲಿ ಜರುಗಿದ ಸಮೃದ್ಧ ಹಸಿರು ಕಾರ್ಯಕ್ರಮದಲ್ಲಿ ಸ್ವತಃ ಶಾಸಕ ಗುರುರಾಜ ಗಂಟಿಹೊಳೆ ಅವರು ಪಾಲ್ಗೊಂಡರು. ಚಿತ್ತೂರು, ಆಲಂದೂರು, ವಂಡ್ಸೆ, ನೆಂಪು, ಯಡ್ತರೆ ಗುಲ್ವಾಡಿ, ತ್ರಾಸಿ ಮೊದಲಾದೆಡೆ ಗೀಡಗಳನ್ನು ನೆಡಲಾಯಿತು. ಬೈಂದೂರಿನಲ್ಲಿ ರಥೋತ್ಸವಕ್ಕೆ ತೆರಳುವ ಭಕ್ತಾಧಿಗಳಿಗೆ ತಂಪುಪಾನೀಯಗಳನ್ನು ವಿತರಿಸಲಾಯಿತು.

ಮಧ್ಯಾಹ್ನ ಕುಂದಾಪುರ ಚೈತನ್ಯ ವೃದ್ಧಾಶ್ರಮಕ್ಕೆ ಊಟದ ವ್ಯವಸ್ಥೆ ಹಾಗೂ ಹಣ್ಣುಹಂಪಲುಗಳನ್ನು ವಿತರಿಸಲಾಯಿತು. ಮಂಕಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಚಾವಣಿಯನ್ನು ಮಂಕಿಯ ಯುವಕರ ತಂಡ ಶ್ರಮದಾನದ ಮೂಲಕ ದುರಸ್ತಿ ಮಾಡಿತು. ವಸ್ರೆ ಭಾಗದಲ್ಲಿ ಯುವಕರ ತಂಡ ಬಡಕುಟುಂಬದ ಮನೆಯ ಮಾಡು ನಿರ್ಮಿಸಿಕೊಡಲು ಶ್ರಮಿಸಿತು.

ಈ ನಡುವೆ ಶಾಸಕ ಗುರುರಾಜ ಗಂಟಿಹೊಳೆ ಅವರು ಬೈಂದೂರು ಕ್ಷೇತ್ರದ ತೊಂಬಟ್ಟು ಹಾಗೂ ಯಡಮೊಗೆಯಲ್ಲಿ ಸಮೃದ್ಧ ಬೈಂದೂರು ಟ್ರಸ್ಟ್ ಮತ್ತು ಅರುಣಾಚಲಂ ಟ್ರಸ್ಟ್ ಸಹಯೋಗದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಾಲುಸಂಕ ಕಾಮಗಾರಿಯನ್ನುವೀಕ್ಷಣೆ ಮಾಡಿದರು.

Leave a Reply