ಕುಂದಾಪುರ: ಶ್ರೀ ಸೀತಾರಾಮಚಂದ್ರ ಕಲ್ಯಾಣೋತ್ಸವ ಸಂಪನ್ನ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ರಾಮಕ್ಷತ್ರಿಯ ಯುವಕ ಮಂಡಳಿ ರಾಮಕ್ಷತ್ರಿಯ ಸಂಘ ಸುವರ್ಣ ಸಂಭ್ರಮದ ಅಂಗವಾಗಿ ಆಯೋಜಿಸಿದ್ದ ಶ್ರೀ ಸೀತಾರಾಮಚಂದ್ರ ಕಲ್ಯಾಣೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜ್ರಂಭಣೆಯಿಂದ ಜರುಗಿತು.

Call us

Click Here

ಕುಂದಾಪುರದಲ್ಲಿ ಪ್ರಥಮ ಬಾರಿ ಹೊಸನಗರ ಶ್ರೀ ರಾಮಚಂದ್ರಾಪುರ ಮಠ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಆಶಿರ್ವಾದದೊಂದಿಗೆ ಶ್ರೀ ರಾಮಚಂದ್ರಾಪುರ ಮಠ ವೈದಿಕ ತಂಡ ಕಲ್ಯಾಣೋತ್ಸವ ನೆರವೇರಿತು.

ಕಲ್ಯಾಣೋತ್ಸವ ಬೆಳಿಗ್ಗೆ ಕುಂದಾಪುರ ಶಾಸ್ತ್ರಿವೃತ್ತದಿಂದ ಶ್ರೀ ಸೀತಾರಾಮಚಂದ್ರ ಉತ್ಸವ ಮೂರ್ತಿ ಮೆರವಣಿಗೆಯಲ್ಲಿ ಶ್ರೀ ಸೀತಾರಾಮಚಂದ್ರ ದೇವಸ್ಥಾನಕ್ಕೆ ತರಲಾಯಿತು. ಬೆಳಗ್ಗೆ 10:30ಕ್ಕೆ ಪೂಜಾ ಸಂಕಲ್ಪ ಮತ್ತು ರಾಮ ತಾರಕ ಹೋಮ ಜರುಗಿತು. ಅಪರಾಹ್ನ 12:30ಕ್ಕೆ ವಿಸೇಷ ಪೂಜೆ ಮತ್ತು ಪ್ರಸಾದ ವಿತರಣೆ ನಡೆದು, ಸರಿಯಾಗಿ 5:30ಕ್ಕೆ ಸೀತಾರಾಮಚಂದ್ರ ಕಲ್ಯಾಣೋತ್ಸವ ಆರಂಭವಾಯಿತು. ಈ ಸಂದರ್ಭದಲ್ಲಿ ಆಶೀರ್ವಚನೆ, ಭಜನೆ, ಭರತನಾಟ್ಯ, ಭಕ್ತಿಗೀತೆಗಳ ಕಾರ್ಯಕ್ರಮವೂ ಇತ್ತು.

ಶಾಸ್ತ್ರೋಕ್ತವಾಗಿ ನಡೆದ ವಿವಾಹ ಸಂದರ್ಭದಲ್ಲಿ ಗಂಡು ಹೆಣ್ಣಿನ ಕಡೆಯವರು ವಧೂ-ವರರನ್ನು ಶೃಂಗರಿಸಿ ದಾರೆ ಮಂಟಕ್ಕೆ ತರಲಾಯಿತು. ಪುರೋಹಿತರ ವೇಧಘೋಷಗಳ ನಡುವೆ ಗಟ್ಟಿಮೇಳದ ಅಬ್ಬರದಲ್ಲಿ ಹಾರ ವಿನಿಮಯ ನಡೆಯಿತು. ನಂತರ ಮಂಗಳಸೂತ್ರ ಧಾರಣೆ ನಡೆಯಿತು. ವಿವಾಹದ ನಂತರ ಮಹಾ ಪ್ರಸಾದ ವಿತರಿಸಲಾಯಿತು.

Read this: ಕುಂದಾಪುರ: ಶ್ರೀ ಸೀತಾರಾಮಚಂದ್ರ ಕಲ್ಯಾಣೋತ್ಸವ. ಉತ್ಸವಮೂರ್ತಿಯ ಪುರಮೆರವಣಿಗೆ – http://kundapraa.com/?p=13002

Click here

Click here

Click here

Click Here

Call us

Call us


Sitaramachandra Kalyanotsava kundapura -ramakshatriya yuvaka mandali (6) Sitaramachandra Kalyanotsava kundapura -ramakshatriya yuvaka mandali (7)

Sitaramachandra Kalyanotsava kundapura -ramakshatriya yuvaka mandali (1)
Sitaramachandra Kalyanotsava kundapura -ramakshatriya yuvaka mandali (3) Sitaramachandra Kalyanotsava kundapura -ramakshatriya yuvaka mandali (4)

Shri Sitaramachandra Kalyanotsava Pura Meravanige - Ramakshatriya Yuvaka mandali Kundapura (8) Shri Sitaramachandra Kalyanotsava Pura Meravanige - Ramakshatriya Yuvaka mandali Kundapura (6) - Copy

Sitaramachandra Kalyanotsava kundapura -ramakshatriya yuvaka mandali (5)

Leave a Reply