ನಾಡ: ಸಂವಿಧಾನದತ್ತ ಹಕ್ಕುಗಳನ್ನು ಪಡೆದು ಸರ್ವಾಂರ್ಗೀಣ ಅಭಿವೃದ್ಧಿಯತ್ತ ಸಾಗಲು ದಲಿತರಿಗೆ ದಲಿತರೇ ಇಂದು ಅಡ್ಡಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ದಲಿತರಲ್ಲಿನ ಒಗ್ಗಟ್ಟನ್ನು ಮುರಿದು ದಲಿತ ಚಳವಳಿಯನ್ನು ಬಲಿತರು ಹತ್ತಿಕ್ಕುವಂತಾಗಿದೆ. ದಲಿತ ಸಂಘರ್ಷ ಸಮಿತಿ ಎಂದರೆ ಕೇವಲ ಗಲಾಟೆ-ಗದ್ದಲ, ಕೇಸು, ಕೋರ್ಟು-ಕಚೇರಿ ಎಂದಷ್ಟೇ ತಪ್ಪುತಿಳಿಯುವಂತಾಗಿದೆ. ದಲಿತ ಸಂಘಟನೆ ಎಂದರೆ ದಲಿತರ ಸ್ವಾಭಿಮಾನ ಜಾಗೃತಿಯೇ ವಿನಾ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ, ಗೊಂದಲವನ್ನು ಸೃಷ್ಟಿಸುವುದಲ್ಲ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ರಿ) ಉಡುಪಿ ಜಿಲ್ಲಾ ಸಮಿತಿ ಸಂಚಾಲಕ ಶ್ಯಾಮರಾಜ್ ಬಿರ್ತಿ ಅವರು ಹೇಳಿದರು.