ಕಳವಾಡಿ ಶ್ರೀ ಮಾರಿಕಾಂಬ ಯುತ್ ಕ್ಲಬ್ ರಿ. ಇದರ 11ನೇ ವಾರ್ಷಿಕೋತ್ಸವ
ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ನಗರ ಪ್ರದೇಶಗಳಲ್ಲಿ ಭಾಷೆ, ಸಂಸ್ಕೃತಿಯ ಉಳಿವು ಸಾಧ್ಯವಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಇದನ್ನು ನಿರೀಕ್ಷಿಸಬಹುದು. ಯುವಕರ ಸಂಘಟನೆಗಳು ವಾರ್ಷಿಕೋತ್ಸವಕ್ಕಷ್ಟೇ ಸೀಮಿತವಾಗಿರದೇ ತಮ್ಮೂರಿನ ಅಭಿವೃದ್ಧಿಯ ಜತೆಗೆ ಸಂಸ್ಕೃತಿ-ಸಂಪ್ರದಾಯಗಳ ಉಳಿವಿಗೂ ಪಣತೊಡಬೇಕಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು.
ಇಲ್ಲಿನ ಕಳವಾಡಿ ಶ್ರೀ ಮಾರಿಕಾಂಬ ಯುತ್ ಕ್ಲಬ್ ರಿ. ಇದರ 11ನೇ ವಾರ್ಷಿಕೋತ್ಸವ ಸಮಾರಂಭ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಜರುಗಿದ ಸಾಂಸ್ಕೃತಿ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.
ಇಪ್ಪತ್ತು ಸಾವಿರಕ್ಕೂ ಅಧಿಕ ಇತಿಹಾಸವಿರುವ ಸುಂದರ ದೇಶ ನಮ್ಮದು. ಎಲ್ಲಾ ವೈರುಧ್ಯಗಳ ನಡುವೆ ನಮ್ಮ ಹಿರಿಕರು ದೇಶವನ್ನು ಸದೃಡವಾಗಿ ಕಟ್ಟಿ ಹೋಗಿದ್ದಾರೆ. ಆದರೆ ನಾವು ಸ್ವಾತಂತ್ರ್ಯವನ್ನು ಕಂಡು ಇಷ್ಟು ವರ್ಷಗಳಾದರೂ ಜನಾಂಗ, ವಿದ್ಯೆ, ಐಶ್ವರ್ಯ ಮುಂತಾದವುಗಳಲ್ಲಿ ಅಂತರವನ್ನು ಕಾಣುತ್ತಿದ್ದೇವೆ. ನಮ್ಮನ್ನಾಳುವವರಿಂದಲೂ ಈ ಅಂತರವನ್ನು ದೂರಮಾಡಲು ಸಾಧ್ಯವಾಗಿಲ್ಲ. ಜಾಗೃತಿಯೊಂದೇ ಇದಕ್ಕೆ ಪರಿಹಾರ ಎಂದರು.
ನಿವೃತ್ತ ಐಎಫ್‌ಎಸ್ ಅಧಿಕಾರಿ ಜಗನ್ನಾಥ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ದಲಿತ ಸಂಘರ್ಷ ಸಮಿತಿ ಸಂಚಾಲಕ ನಾರಾಯಣ ರಾವ್, ಬೈಂದೂರು ವೃತ್ತ ನಿರೀಕ್ಷಕ ಸುದರ್ಶನ್, ನಿವೃತ್ತ ವಿಜಯ ಬ್ಯಾಂಕ್ ಮ್ಯಾನೆಜರ್ ಭುವನೇಂದ್ರ ಪ್ರಸಾದ್, ಕುಂದಾಪುರ ಆಳ್ವಾಸ್ ನುಡಿಸಿರಿ ಘಟಕದ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಅಂಜಲಿ ಆಸ್ಪತ್ರೆ ಆಡಳಿತ ನಿರ್ದೇಶಕ ಸುಬ್ರಹ್ಮಣ್ಯ ಭಟ್, ನ್ಯಾಯವಾದಿ ಮಂಗೇಶ್ ಶ್ಯಾನುಭೋಗ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಹಾಗೂ ಸಾಧನೆಗೈದ ಕಳವಾಡಿಯ ದೊಟ್ಟಿ ಪೂಜಾರ್ತಿ, ರಾಮಕೃಷ್ಣ ಪಿ, ಸಂದೇಶ್, ಸುಪ್ರಿತಾ, ಪ್ರರ್ಣೇಶ್, ಅಕ್ಷಯ, ವಿನುತಾ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೆ ಆರ್ಥಿಕ ದೇಣಿಗೆಯಿತ್ತ ಬಾಬು ಪೂಜಾರಿ ದಂಪತಿಗಳನ್ನು ಗೌರವಿಸಲಾಯಿತು.
ಶ್ರೀ ಮಾರಿಕಾಂಬ ಯುತ್ ಕ್ಲಬ್‌ನಿಂದ ನಿರ್ಮಾಣ ಹಂತದಲ್ಲಿರುವ ಶ್ರೀ ಮಾರಿಕಾಂಬ ದೇವಸ್ಥಾನಕ್ಕೆ 25,00 ದೇಣಿಗೆ, ಕಳವಾಡಿ ಅಂಗನವಾಡಿ ಮಕ್ಕಳಿಗೆ ವರ್ಷಪೂರ್ತಿ ಪೌಷ್ಠಿಕ ಆಹಾರ ನೀಡಲು ಧನಸಹಾಯ ಮಾಡಲಾಯಿತು. ಶ್ರೀ ಮಾರಿಕಾಂಬ ಯುತ್ ಕ್ಲಬ್‌ನ ಬಾಲರಾಜ್ ಸ್ವಾಗತಿಸಿದರು. ಅಧ್ಯಕ್ಷ ಕೃಷ್ಣ ಚಂದನ್ ಧನ್ಯವಾದಗೈದರು. ಶಿಕ್ಷಕ ಸುಬ್ರಹ್ಮಣ್ಯ ಜಿ. ಉಪ್ಪುಂದ ನಿರೂಪಿಸಿದರು./ ಕುಂದಾಪ್ರ ಡಾಟ್ ಕಾಂ ಸುದ್ದಿ.