ಶ್ರೀ ಹೊನ್ನಮ್ಮ ದೇವಿಯ ಪ್ರತಿಷ್ಠಾಪನೆ: ಸಗ್ರಿ ಸುರೇಂದ್ರ ಸಾಂತಪ್ಪ ನಾಯಕ್ ಸ್ಮರಣ ಯಾತ್ರಿ ನಿವಾಸ ಉದ್ಘಾಟನೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಗುಜ್ಜಾಡಿ ಮನೆತನದವರು ಹಿಂದಿನಿಂದಲೂ ಆರಾಧಿಸಿಕೊಂಡು ಬಂದಿರುವ ಶ್ರೀ ಹೊನ್ನಮ್ಮ ದೇವಿಯ ಅನುಗ್ರಹ ಹಾಗೂ ಗುರುಗಳ ಆಶೀರ್ವಾದದಿಂದ ಕುಟುಂಬವು ಇನ್ನಷ್ಟು ಅಭಿವೃದ್ಧಿ ಹೊಂದುವಂತಾಗಲಿ. ಮುಂದೆ ನಿರಂತರವಾಗಿ ಶ್ರೀದೇವರ ಹಾಗೂ ಗುರುವರ್ಯರ ಸೇವೆ ಮಾಡುವ ಭಾಗ್ಯ ಭಗವಂತನು ಕರುಣಿಸಲಿ. ಶ್ರೀದೇವರು ಜೀವನದಲ್ಲಿ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಹೇಳಿದರು.

Call us

Click Here

ಅವರು ಗುಜ್ಜಾಡಿಯ ಶ್ರೀ ಲಕ್ಷ್ಮೀನಾರಾಯಣ ದೇವಳದ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಗುಡಿಯಲ್ಲಿ ಶ್ರೀ ಹೊನ್ನಮ್ಮ ದೇವಿಯ ಪ್ರತಿಷ್ಠೆ ನೆರವೇರಿಸಿ ದೇವಳದ ಹೊರ ಆವರಣದ ಪೂರ್ವ ಪ್ರವೇಶದ್ವಾರ ಮತ್ತು ಸಗ್ರಿ ಸುರೇಂದ್ರ ಸಾಂತಪ್ಪ ನಾಯಕ್ ಸ್ಮರಣ ಯಾತ್ರಿ ನಿವಾಸವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

ದೇವಳಕ್ಕೆ ಆಗಮಿಸಿದ ಶ್ರೀಗಳನ್ನು ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದ ಗುಜ್ಜಾಡಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ಗುಜ್ಜಾಡಿ ಪ್ರಭಾಕರ ನಾಯಕ್ ಮತ್ತು ದೇವಳದ ವಿಶ್ವಸ್ಥ ಜಿ.ರೋಹಿದಾಸ ನಾಯಕ್ ಸ್ವಾಗತಿಸಿದರು. ವೇದಮೂರ್ತಿ ಸಚ್ಚಿದಾನಂದ ಶರ್ಮಾ ನೇತೃತ್ವದಲ್ಲಿ ಪ್ರತಿಷ್ಠೆಯ ಧಾರ್ಮಿಕ ವಿಧಿವಿಧಾನಗಳು ನಡೆದವು. ಬೆಳಿಗ್ಗೆ ೧೦ ಗಂಟೆಯಿಂದ ಶ್ರೀ ಲಕ್ಷ್ಮೀನಾರಾಯಣ ದೇವರಿಗೆ ಪಂಚಾಮೃತ ಅಭಿಷೇಕ, ಬ್ರಹ್ಮಕಲಶಾಭಿಷೇಕ, ಶ್ರೀ ಹೊನ್ಮಮ್ಮ ದೇವಿಗೆ ಪಂಚವಿಂಶತಿ ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಮಹಾಸಮಾರಾಧನೆ, ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಜರಗಿದವು.

ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಜಿ.ಅನಂತಕೃಷ್ಣ ಭಟ್, ವೇದಮೂರ್ತಿ ಜಿ.ವಸಂತ ಭಟ್, ವೇದಮೂರ್ತಿ ಜಿ.ವಿಠಲದಾಸ ಭಟ್, ಜಿ.ವೆಂಕಟೇಶ ನಾಯಕ್, ಜಿ.ಗಣೇಶ ನಾಯಕ್, ಜಿ.ಶೇಷಗಿರಿ ನಾಯಕ್, ಪಿ.ನರೇಂದ್ರ ನಾಯಕ್, ಪುರೋಹಿತರು, ವೈದಿಕರು, ದೇವಳದ ವಿಶ್ವಸ್ಥ ಮಂಡಳಿ ಸದಸ್ಯರು, ಗುಜ್ಜಾಡಿ ಮನೆತನದವರು, ಊರಿನ ಹತ್ತು ಸಮಸ್ತರು ಹಾಗೂ ಭಕ್ತರು ಉಪಸ್ಥಿತರಿದ್ದರು.

Leave a Reply