ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಪಂಚಶಂಕರನಾರಾಯಣ ಕ್ಷೇತ್ರಗಳಲ್ಲೊಂದಾದ ಬೆಳ್ವೆ ಶ್ರೀ ಶಂಕರನಾರಾಯಣ ದೇವಸ್ಥಾನದ ವಾರ್ಷಿಕ ಮನ್ಮಹಾರಥೋತ್ಸವ ಧಾರ್ಮಿಕ ವಿಧಿವಿಧಾನಗೊಂದಿಗೆ ವಿಜ್ರಂಭಣೆಯಿಂದ ಜರುಗಿತು.
ಕ್ಷೇತ್ರದ ತಂತ್ರಿ ವೇ.ಮೂ ಸದಾಶಿವ ಭಟ್ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಗಳ ಆರಂಭಗೊಂಡು ವಾರ್ಷಿಕ ಮನ್ಮಹಾರಥೋತ್ಸವ ಹಾಗೂ ಇನ್ನಿತರ ವಿಧಿಗಳೊಂದಿಗೆ ಸಂಪನ್ನಗೊಂಡಿತು. ರಥೋತ್ಸವದಲ್ಲಿ ದೇವಳದ ಆಡಳಿತ ಮೊಕ್ತೇಸರ ಬಿ. ಶಂಕರ ಶೆಟ್ಟಿ, ಪವಿತ್ರಪಾಣಿ ಶಂಕರನಾರಾಯಣ ಅಲ್ಸೆ, ಇತರ ಮುಕ್ತೇಸರರು ಪಾಲ್ಗೊಂಡಿದ್ದರು. ಬೆಳ್ವೆ ಪರಿಸರದ ಸಾವಿರಾರು ಮಂದಿ ರಥೋತ್ಸವ ಹಾಗೂ ವಾರ್ಷಿಕ ಜಾತ್ರೆಯಲ್ಲಿ ಪಾಲ್ಗೊಂಡು ಪುನೀತರಾದರು