ಉಪ್ಪುಂದ ಜೇಸಿಐ ಘಟಕದ ಸ್ಥಾಪನಾ ದಿನ. ಸಿಂಹ ಘರ್ಜನೆ ಸಮಾರಂಭ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಉಪ್ಪುಂದ ಜೇಸಿಐ ಘಟಕದ ಸ್ಥಾಪನಾ ದಿನದ ಅಂಗವಾಗಿ ಜೇಸಿ ವತಿಯಿಂದ ಸಾಯಂಕಾಲ ಹಳಗೇರಿಯಲ್ಲಿ ’ಸಿಂಹ ಘರ್ಜನೆ’ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.

Call us

Click Here

ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ ಹೆಚ್ಚು ಯುವಜನರನ್ನು ಹೊಂದಿದ ನಮ್ಮ ದೇಶದಲ್ಲಿ ಸೇವಾ ಮನೋಭಾವನೆಯಿರುವ ಯುವಕರನ್ನು ಜೇಸಿಐನಂತಹ ಸಂಸ್ಥೆಗೆ ಸೇರಿಸಿಕೊಂಡು ಗ್ರಾಮೀಣಾಭಿವೃದ್ಧಿಯತ್ತ ಗಮನ ಹರಿಸಬೇಕು. ಸಂಘ ಸಂಸ್ಥೆಗಳು ಗ್ರಾಮದ ಅಭಿವೃದ್ಧಿಗೆ ಪೂರಕವಾಗಿದ್ದು, ಸೇವೆಯೇ ನಮ್ಮೆಲ್ಲರ ಪ್ರಮುಖ ಅಜೆಂಡವಾಗಬೇಕು ಎಂದರು.

ಜೇಸಿಐ ಅಧ್ಯಕ್ಷ ನರಸಿಂಹ ಹಳಗೇರಿ ಅಧ್ಯಕ್ಷತೆವಹಿಸಿ ಸ್ವಾಗತಿಸಿದರು. ಈ ಸಂದರ್ಭ ಕೃಷಿ ಮತ್ತು ಸಹಕಾರಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ವ್ಯವಹಾರ ಕ್ಷೇತ್ರದ ಸಾಧಕ ಸಹೋದರರಾದ ರಾಮ-ಲಕ್ಷ್ಮಣ ಪೂಜಾರಿ ತೆಂಕಬೆಟ್ಟು, ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯಮಟ್ಟದ ಪ್ರತಿಭೆ ಹಿಬಾ ಶಾಹೀನ್ ಇವರಿಗೆ ಸನ್ಮಾನಿಸಲಾಯಿತು. ಉಪ್ಪುಂದ ಜೇಸಿಐ ಪೂರ್ವಾಧ್ಯಕ್ಷ ಗಿರೀಶ್ ಶ್ಯಾನುಭಾಗ್ ಇವರಿಗೆ ಜೇಸಿ ಸ್ವರ್ಣ ಕಮಲ ಪ್ರಶಸ್ತಿ ಪ್ರದಾನಿಸಲಾಯಿತು.

ಜೇಸಿಐ ವಲಯ ೧೫ರ ವಲಯಾಧ್ಯಕ್ಷ ಸಂದೀಪ್ ಕುಮಾರ್, ದ.ಸಂ.ಸ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಂಜುನಾಥ ಗಿಳಿಯಾರು, ಉದ್ಯಮಿ ಎಚ್. ಬಾಲಕೃಷ್ಣ ಶೆಟ್ಟಿ ಹಳಗೇರಿ, ಜಿಲ್ಲಾ ದಸ್ತಾವೇಜು ಬರಹಗಾರ ಚಂದ್ರ ಹಳಗೇರಿ, ನಾಗೂರು ಕುಸುಮಾ ಹೋಮ್ಸ್‌ನ ಚೇರ್‌ಮನ್ ನಳಿನ್‌ಕುಮಾರ್ ಶೆಟ್ಟಿ, ಉಪ್ಪುಂದ ಜೇಸಿಐ ಸ್ಥಾಪಕಾಧ್ಯಕ್ಷ ದಿವಾಕರ್ ಶೆಟ್ಟಿ, ಸ್ಥಾಪಕ ಉಪಾಧ್ಯಕ್ಷ ಶಫಿ ಉಪ್ಪುಂದ ಉಪಸ್ಥಿತರಿದ್ದರು. ಕಾರ್ಯದರ್ಶಿ ಮಂಜುನಾಥ ದೇವಾಡಿಗ ವಂದಿಸಿದರು. ನಂತರ ಸ್ಥಳೀಯ ಪ್ರತಿಭೆಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಹಾಗೂ ಭಟ್ಕಳ ಝೇಂಕಾರ್ ಮೆಲೋಡೀಸ್ ತಂಡದವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು.

JCI Uppunda Simha Garjane (1) JCI Uppunda Simha Garjane (3)

Click here

Click here

Click here

Click Here

Call us

Call us

Leave a Reply