ಗೋವಿನ ರಕ್ಷಣೆಯಿಂದ ದೇಶದ ಸಮೃದ್ಧಿ : ಫೈಜ್ ಖಾನ್

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಗೋ ಸಂತತಿ ರಕ್ಷಣೆಯಿಂದ ದೇಶದಲ್ಲಿ ಸುಭಿಕ್ಷೆ ಉಂಟಾಗಿ ಸಮೃದ್ಧಿ ನೆಲೆಸುತ್ತದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ರೈತರ ಆತ್ಮಹತ್ಯೆ ತಡೆಯಲು ಗೋವುಗಳು ಸಹಕಾರಿಯಾಗಲಿದ್ದು, ರೈತರ ಬಂಜರು ಭೂಮಿಯನ್ನು ಹಸನಾಗಿಸಲು ಗೋವುಗಳು ಅತ್ಯವಶ್ಯಕ. ಗೋವಿನ ಉತ್ಪನ್ನಗಳು ಮನುಷ್ಯನ ಆರೋಗ್ಯ ರಕ್ಷಣೆಯಲ್ಲಿ ಮಹತ್ತರ ಪಾತ್ರ ವಹಿಸುತ್ತದೆ ಎಂದು ವಾರಣಾಸಿಯ ಪ್ರಸಿದ್ಧ ಗೋ ಕಥಾ ನಿರೂಪಕ ಫೈಜ್ ಖಾನ್ ಹೇಳಿದರು.

Call us

Click Here

ಅವರು ವೀರ ಸಾವರ್ಕರ್ ದೇಶ ಪ್ರೇಮಿಗಳ ಬಳಗ ಗಂಗೊಳ್ಳಿ ಇವರ ಆಶ್ರಯದಲ್ಲಿ ಗಂಗೊಳ್ಳಿಯ ಬಸ್ ನಿಲ್ದಾಣದ ವಠಾರದಲ್ಲಿ ಆಯೋಜಿಸಲಾಗಿದ್ದ ಗೋವಿನ ಮಹತ್ವವನ್ನು ಸಾರುವ ’ಅಂಬೆಯ ಕೂಗು’ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗೋವಿಗೆ ಕೊಡುವುದು ಮಾತ್ರ ತಿಳಿದಿದೆಯೇ ವಿನಹ ಪಡೆಯುವುದು ಗೊತ್ತಿಲ್ಲ. ಗೋವಿನ ಗೊಬ್ಬರ ರೈತರ ಭೂಮಿಯನ್ನು ಫಲವತ್ತತೆ ಗೊಳಿಸಿದರೆ, ಗೋಮೂತ್ರವನ್ನು ಔಷಧವನ್ನಾಗಿ ಉಪಯೋಗಿಸುತ್ತಿದ್ದಾರೆ. ಪಂಚಗವ್ಯವನ್ನು ಹಿಂದು ಸಂಸ್ಕೃತಿಯ ಶುಭ ಕಾರ್ಯಗಳಲ್ಲಿ ಅತಿ ಶ್ರೇಷ್ಠ ಎಂದು ಬಳಸಲಾಗುತ್ತಿದೆ. ಒಂದು ಗೋವಿನಿಂದ ಸುಮಾರು ೩೦೦ ಎಕ್ರೆ ಭೂಮಿಯನ್ನು ಕೃಷಿಗೆ ಪೂರಕವಾಗುವಂತೆ ಪರಿವರ್ತಿಸಲು ಸಾಧ್ಯವಿದೆ. ಇತ್ತೀಚಿನ ದಿನಗಳಲ್ಲಿ ರೈತರು ರಾಸಾಯನಿಕಗಳನ್ನು ಹೆಚ್ಚೆಚ್ಚು ಬಳಸುತ್ತಿರುವುದರಿಂದ ಭೂಮಿಗಳು ತನ್ನ ಫಲವತ್ತತೆಯನ್ನು ಕಳೆದುಕೊಂಡು ರೈತರು ಭೂಮಿಯಲ್ಲಿ ಬೆಳೆ ಬಾರದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಗೋವಿನ ಕೃಪೆ ಇಲ್ಲದಿದ್ದರೆ ಇಡೀ ಸಮಾಜ ಅವನತಿಯತ್ತ ಸಾಗಲಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಪ್ರತಿಯೊಬ್ಬರು ಮನೆಯಲ್ಲಿ ಜಾನುವಾರುಗಳನ್ನು ಸಾಕುವುದರ ಮೂಲಕ ಜಾನುವಾರುಗಳು ಕಸಾಯಿಖಾನೆಗೆ ಸಾಗಿಸುವುದನ್ನು ತಡೆಗಟ್ಟಬಹುದು. ಜಾನುವಾರುಗಳನ್ನು ಸಾಕುವುದು ಕಷ್ಟವಾದರೆ ಸಮೀಪದ ಗೋಶಾಲೆಯಲ್ಲಿರುವ ಒಂದು ಜಾನುವಾರುವನ್ನು ದತ್ತು ಪಡೆದು ಅವುಗಳನ್ನು ಸಾಕಬೇಕು. ಗೋವುಗಳು ಉಳಿದರೆ ಮಾತ್ರ ಭಾರತ ಮತ್ತು ನಮ್ಮ ಜೀವನ ಉಳಿಯಲು ಸಾಧ್ಯವಿದೆ. ಗೋ ಆಧಾರಿತ ಕೃಷಿ ವ್ಯವಸ್ಥೆ ಮತ್ತು ಗೋ ಆಧಾರಿತ ಆರ್ಥಿಕ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಿದರೆ ಸಮಾಜದಲ್ಲಿ ಇನ್ನಷ್ಟು ಸುಧಾರಣೆ ಕಂಡುಕೊಳ್ಳಲು ಸಾಧ್ಯವಿದೆ ಎಂದು ಅವರು ಹೇಳಿದರು.

ಈ ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬರೂ ಭಾರತ ಮಾತೆಯ ಪುತ್ರರು. ನಾವು ನಮ್ಮ ತಾಯಿಗೆ ನಮಿಸಿ ಜೈಕಾರ ಹಾಕುವುದು ತಪ್ಪಲ್ಲ. ಭಾರತ್ ಮಾತಾ ಕಿ ಜೈ ಎಂದು ನಮ್ಮ ತಾಯ್ನೆಲಕ್ಕೆ ಹೇಳುತ್ತೇವೆ. ಹಾಗೆ ಹೇಳಲು ಇಷ್ಟವಿಲ್ಲದಿದ್ದವರು ಸುಮ್ಮನಿರಲಿ. ಆದರೆ ಭಾರತ್ ಮಾತಾ ಕಿ ಜೈ ಎಂದು ಹೇಳಬಾರದೆಂದು ಅನಿಸಿಕೆ ವ್ಯಕ್ತಪಡಿಸುವುದು ಸರಿಯಲ್ಲ. ಎಲ್ಲರೂ ಒಗ್ಗಟ್ಟಾಗಿ ಭಾರತ ಮಾತೆಯ ಆಶ್ರಯಕ್ಕೆ ಆಗಮಿಸಿದಾಗ ಮಾತ್ರ ಅಖಂಡ ಭಾರತದ ಕಲ್ಪನೆ ಸಾಕಾರಗೊಳ್ಳಲು ಸಾಧ್ಯವಾಗುತ್ತದೆ. ಭಾರತದಂತಹ ಪುಣ್ಯಭೂಮಿ ವಿಶ್ವದಲ್ಲಿ ಇನ್ನೆಲ್ಲೂ ನಮಗೆ ನೋಡಲು ಸಿಗುವುದಿಲ್ಲ. ಇಂತಹ ಪುಣ್ಯ ಭೂಮಿಯಲ್ಲಿ ಹುಟ್ಟಿರುವ ನಾವು ನಿಜಕ್ಕೂ ಭಾಗ್ಯವಂತರು ಎಂದರು.

Click here

Click here

Click here

Click Here

Call us

Call us

ಭಾರತದಲ್ಲಿ ಹುಟ್ಟಿದ ಪ್ರತಿಯೊಬ್ಬರೂ ಭಾರತ ಮಾತಾ ಕಿ ಜೈ ಎನ್ನಬೇಕು. ಪ್ರಸ್ತುತ ದಿನಗಳಲ್ಲಿ ಒಬ್ಬರಿಗೊಬ್ಬರು ಏನೇ ಹೇಳಿದರೂ ಅದು ಸಂವಿಧಾನದಲ್ಲಿ ಬರೆದಿಯಾ ಎಂದು ಪ್ರಶ್ನಿಸುವ ಪರಿಪಾಠ ಬೆಳೆದುಕೊಂಡಿದೆ. ಅದೇ ರೀತಿ ಭಾರತ ಮಾತಾ ಕಿ ಜೈ ಎಂದು ಹೇಳುವ ಬಗ್ಗೆಯೂ ಪ್ರಶ್ನೆ ಎದ್ದಿದೆ. ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ದೇಶದ ಹಿತಕ್ಕಾಗಿ ನಡೆದುಬಂದ ಎಲ್ಲಾ ಚಟುವಟಿಕೆಗಳನ್ನು ಮತ್ತು ಸ್ವಾತಂತ್ರ್ಯಕೋಸ್ಕರ ಪ್ರೇರೆಪಣೆ ನೀಡಿದ ಎಲ್ಲಾ ವಿಚಾರಗಳನ್ನು ಮುಂದುವರಿಸಿಕೊಂಡು ಮತ್ತು ಅಳವಡಿಸಿಕೊಂಡು ಹೋಗಬೇಕಾಗಿದೆ ಎಂದು ಅವರು ಹೇಳಿದರು.

ಎಲ್ಲಾ ಧರ್ಮಗಳಲ್ಲೂ ತಾಯಿಗೆ ಉನ್ನತ ಸ್ಥಾನವಿದೆ. ನಮಗೆ ಜನ್ಮ ನೀಡಿದ ಈ ಪವಿತ್ರ ಭಾರತ ಮಾತೆಯನ್ನು ಸದಾ ಸ್ಮರಿಸಿಕೊಳ್ಳುತ್ತಿರಬೇಕು. ಯುವಜನರು ಈ ದೇಶದ ಶಕ್ತಿಗಳು ಹಾಗೂ ಯುವಜನರು ಈ ದೇಶದ ಸಿಂಹಗಳಿದ್ದಂತೆ. ಯುವಜನರು ಬಲಿಷ್ಠಗೊಂಡರೆ ಈ ದೇಶ ಬಲಿಷ್ಠಗೊಳುತ್ತದೆ. ಹೀಗಾಗಿ ಯುವಜನರು ಮದ್ಯಪಾನ, ಮದ್ಯವ್ಯಸನಗಳನ್ನು ತ್ಯಜಿಸಿ ಗೋವಿನ ಹಾಲನ್ನು ಕುಡಿಯುವ, ಗೋಸಂರಕ್ಷಣೆ, ರಾಷ್ಟ್ರ ಸಂರಕ್ಷಣೆ ಮಾಡುವ ಸಂಕಲ್ಪ ಮಾಡಬೇಕಿದೆ ಎಂದು ಅವರು ಹೇಳಿದರು.

ಗಂಗೊಳ್ಳಿ ಹಸಿಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಜಿ.ಟಿ. ಮಂಜುನಾಥ ಕಾರ್ಯಕ್ರಮ ಉದ್ಘಾಟಿಸಿದರು. ಮತ್ಸ್ಯೋದ್ಯಮಿ ಮೋಹನ ಖಾರ್ವಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ಗಂಗೊಳ್ಳಿಯ ವೀರ ಸಾವರ್ಕರ್ ದೇಶ ಪ್ರೇಮಿಗಳ ಬಳಗ ಮತ್ತು ನಮೋ ಬ್ರಿಗೇಡ್ ಬೈಂದೂರು ಘಟಕದ ವತಿಯಿಂದ ಫೈಜ್ ಖಾನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಿಂದು ಜಾಗರಣ ವೇದಿಕೆ ಗಂಗೊಳ್ಳಿ ಘಟಕದ ಸಂಚಾಲಕ ರತ್ನಾಕರ ಗಾಣಿಗ, ವೀರ ಸಾವರ್ಕರ್ ದೇಶ ಪ್ರೇಮಿಗಳ ಬಳಗದ ರಾಘವೇಂದ್ರ ಖಾರ್ವಿ, ಮನೋಜ್ ಖಾರ್ವಿ ಉಪಸ್ಥಿತರಿದ್ದರು.

ನಾಗರಾಜ ಖಾರ್ವಿ ಸ್ವಾಗತಿಸಿದರು. ಯುವ ಬ್ರಿಗೇಡ್‌ನ ಕರ್ನಾಟಕ ರಾಜ್ಯ ಪ್ರತಿನಿಧಿ ವಿನಯ್ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಉಪನ್ಯಾಸಕ ನರೇಂದ್ರ ಎಸ್.ಗಂಗೊಳ್ಳಿ ಮತ್ತು ಸುಂದರ ಜಿ. ಕಾರ್ಯಕ್ರಮ ನಿರೂಪಿಸಿದರು. ನಿಖಿಲ್ ಖಾರ್ವಿ ವಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ಗಂಗೊಳ್ಳಿಯ ಬಸ್ ನಿಲ್ದಾಣದ ವಠಾರದಲ್ಲಿ ಫೈಜ್ ಖಾನ್ ಅವರು ಗೋಪೂಜೆ ನೆರವೇರಿಸಿ ಭಾರತ ಮಾತಾ ಕೀ ಜೈ ಎಂಬ ಘೋಷಣೆಯನ್ನು ಕೂಗುತ್ತಾ ವೇದಿಕೆಗೆ ಆಗಮಿಸಿದರು.

Leave a Reply