ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಶಿವಮೊಗ್ಗ ಜವಹರಲಾಲ್ ನೆಹರು ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯದ ಎಂ.ಬಿ.ಎ. ವಿಭಾಗದ ಸಹಾಯಕ ಪ್ರಾಧ್ಯಾಪಕ, ಬೈಂದೂರಿನ ಸಂತೋಷ್ ಶ್ಯಾನುಭಾಗ್ ಮಂಡಿಸಿದ ‘ಮಾರ್ಕೇಟಿಂಗ್ ಆಫ್ ಹೆಲ್ತ್ ಇನ್ಸೂರೆನ್ಸ್ ಇನ್ ರೂರಲ್ ಎರಿಯಾಸ್, ಎ ಸ್ಟಡಿ ವಿತ್ ರೆಫರೆನ್ಸ್ ಟು ದಕ್ಷಿಣ ಕನ್ನಡ ಎಂಡ್ ಉಡುಪಿ ಡಿಸ್ಟ್ರಿಕ್ಟ್ ಆಫ್ ಕರ್ನಾಟಕ’ ಎಂಬ ಪ್ರೌಢ ಪ್ರಬಂಧಕ್ಕೆ ಬೆಳಗಾವಿಯ ಸರ್. ಎಂ. ವಿಶ್ವೇಶ್ವರಯ್ಯ ವಿಶ್ವವಿದ್ಯಾನಿಲಯ ಪಿಎಚ್‌ಡಿ ಪದವಿ ಪ್ರದಾನಿಸಿದೆ. ಈ ಸಂಶೋಧನೆಗೆ ಎಂ.ಬಿ.ಎ. ವಿಭಾಗದ ನಿರ್ದೇಶಕ ಡಾ. ಎಂ. ಜಿ. ಕೃಷ್ಣಮೂರ್ತಿ ಮಾರ್ಗದರ್ಶನ ನೀಡಿದ್ದರು.
ಶಿರೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೈಂದೂರು ಪದವಿಪೂರ್ವ ಕಾಲೇಜು, ಭಟ್ಕಳ ಅಂಜುಮಾನ್ ಕಾಲೇಜು ಹಾಗೂ ನಿಟ್ಟೆಯ ಎನ್‌ಎಂಎಐಟಿಯ ಹಳೆವಿದ್ಯಾರ್ಥಿಯಾಗಿರುವ ಇವರು ಬೈಂದೂರು ಶ್ಯಾನುಭಾಗ್ ಹೋಟೆಲ್‌ನ ದಿ. ಶ್ರೀನಿವಾಸ್ ಶ್ಯಾನುಭಾಗ್ ಹಾಗೂ ರತ್ನಾವತಿ ಎಸ್. ಶ್ಯಾನುಭಾಗ್ ಇವರ ಪುತ್ರರಾಗಿರುತ್ತಾರೆ. ಮೇ.5ರಂದು ನಡೆಯಲಿರುವ ವಿಶ್ವವಿದ್ಯಾನಿಲಯದ 15ನೇ ಘಟಿಕೋತ್ಸವದಲ್ಲಿ ಸಂತೋಷ್ ಶ್ಯಾನುಭಾಗ್ ಪದವಿ ಸ್ವೀಕರಿಸಲಿದ್ದಾರೆ.