ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಸಾಗರ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 6ನೇ ಶಾಖೆ ಹೆಮ್ಮಾಡಿಯ ವಿಘ್ನೇಶ್ವರ ಕಾಂಪ್ಲೆಕ್ಸ್‌ನಲ್ಲಿ ಲೋಕಾರ್ಪಣೆಗೊಂಡಿತು. ಸಾಗರ್ ಕೋ-ಆಪರೇಟಿವ್ ಕ್ರೆಡಿಟ್ ಕೋ-ಆಪರೇಟಿವ್‌ನ ಅಧ್ಯಕ್ಷ, ಶಾಸಕ ಕೆ. ಗೋಪಾಲ ಪೂಜಾರಿ ಹೆಮ್ಮಾಡಿಯ ನೂತನ ಶಾಖೆಯನ್ನು ಲೋಕಾರ್ಪಣೆಗೊಳಿಸಿದರು. ಸಹಕಾರಿ ಸಂಘಗಳ ಉಪನಿಬಂಧಕ ಪ್ರವೀಣ ನಾಯಕ್ ಭದ್ರತಾ ಕೊಠಡಿಯನ್ನು ಉದ್ಘಾಟಿಸಿರು. ಜಿಲ್ಲಾ ಪಂಚಾಯತ್ ಸದಸ್ಯೆ ಶೋಭಾ ಜಿ. ಪುತ್ರನ್ ಗಣಕೀಕರಣವನ್ನು ಉದ್ಘಾಟಿಸಿರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಸದಸ್ಯ ರಾಜು ದೇವಾಡಿಗ, ಗ್ರಾಮ ಪಂಚಾಯತ್ ಅಧ್ಯಕ್ಷೆ, ಜ್ಯೋತಿ ಹರೀಶ್ ಭಂಡಾರಿ, ಉಪಾಧ್ಯಕ್ಷ ಅಂತೋನಿ ಲೂವಿಸ್, ಸಹಕಾರಿ ಸಂಘಗಳ ಸಹಾಯಕ ನಿಬಂಧಕಿ ಚಂದ್ರಪ್ರತಿಮಾ. ಎಂ. ಜೆ, ಹೆಮ್ಮಾಡಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಚಂದ್ರ ನಾಯ್ಕ್, ಪ್ರಗತಿ ಮಹಿಲಾ ವಿವಿಧೋದ್ದೇಶ ಸಹಕಾರಿ ಅಧ್ಯಕ್ಷ ಸಾಧು ಬಿಲ್ಲವ, ಹೆಮ್ಮಾಡಿ ಮೂರ್ತೇದಾರರ ಸೇವಾ ಸಹಕಾರಿ ಅಧ್ಯಕ್ಷ ಮಹಾಬಲ ಪೂಜಾರಿ, ಶ್ರೀ ಭದ್ರಮಹಾಂಕಾಳಿ ದೈವಸ್ಥಾನ ಅಧ್ಯಕ್ಷ ಕೆ. ಆನಂದ ಶೆಟ್ಟಿ, ಉದ್ಯಮಿ ಹಸನ್ ಸಾಹೇಬ್, ಹೆಮ್ಮಾಡಿ ಲಕ್ಷೀನಾರಾಯಣ ದೇವಳದ ಆಡಳಿತ ಮೊಕ್ತೇಸರ ಅಶೋಕಕುಮಾರ್ ಭಟ್, ಕಟ್ಟಡದ ಮಾಲಿಕ ಬಾಬು ಸಿ. ಪೂಜಾರಿ, ವಾಸುದೇವ ಯಡಿಯಾಳ್, ಬಸ್ರೂರು ವ್ಯವಸಾಯ ಸಹಕಾರಿಯ ಅಧ್ಯಕ್ಷ ಗೋಪಾಲ ಪೂಜಾರಿ, ಶುಭದಾ ಟ್ರಸ್ಟ್‌ನ ಪ್ರವರ್ತಕ ಎನ್.ಕೆ. ಬಿಲ್ಲವ, ಗಂಗೊಳ್ಳಿ ಸರ್ವಿಸ್ ಬ್ಯಾಂಕ್‌ನ ಆನಂದ ಬಿಲ್ಲವ, ಉದ್ಯಮಿ ಸುರೇಶ್ ಪೂಜಾರಿ, ಮುದೂರು ಸೇವಾ ಸಹಕಾರಿಯ ಪಿ.ಎಲ್. ಜೋಸ್, ವಂಡ್ಸೆ ಸೇವಾ ಸಹಕಾರಿಯ ಸುಧೀರ್ ಮೊದಲಾದವರು ವೇದಿಕೆಯಲ್ಲಿದ್ದರು.
ಸಾಗರ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಉಪಾಧ್ಯಕ್ಷ ರಾಜು ಪೂಜಾರಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್. ಕುಷ್ಠ ಬಿಲ್ಲವ ಧನ್ಯವಾದಗೈದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರೂಪಿಸಿದರು.
Kundapra.com