ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತೀರ್ವ ಪೈಪೋಟಿಯಿರುವ ಇಂದಿನ ಆಧುನಿಕ ಯುಗದಲ್ಲಿ ಉದ್ಯೋಗವನ್ನು ಗಿಟ್ಟಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ. ಇಂತಹ ಪೈಪೋಟಿಯ ಕಾಲದಲ್ಲಿಯೂ ಸಹ ನಾವು ಯಶಸ್ವಿಯಾಗಿ ಉದ್ಯೋಗ ಪಡೆದುಕೊಳ್ಳಲು ಅವಶ್ಯವಾಗಿ ರೂಪಿಸಿಕೊಳ್ಳಬೇಕಾದ ವ್ಯಕ್ತಿತ್ವ, ಸಂದರ್ಶನಕ್ಕೆ ಹಾಜರಾಗುವ ಕ್ರಮ, ವಿಷಯ ಮಂಡನೆಯ ರೀತಿ, ಸಮಯವನ್ನು ಸದುಪಯೋಗ ಪಡಿಸಿಕೊಳ್ಳುವ ಬಗೆಯ ಕುರಿತು ಮಂಗಳೂರಿನ ಶ್ರೀನಿವಾಸ ಇನ್ಸ್‌ಟ್ಯೂಟ್‌ನ ಪ್ರಾಧ್ಯಾಪಕ ಪ್ರೊ. ಸುಬ್ರಹ್ಮಣ್ಯ ಸಂದರ್ಶನದ ಪ್ರಾತ್ಯಕ್ಷಿಕೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಬೈಂದೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಈ ಕಾರ‍್ಯಕ್ರಮವನ್ನು ಡಾ. ಉಮೇಶ್ ಮಯ್ಯ ಸಂಯೋಜಿಸಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಎ ಮೇಳಿ ಉಪಸ್ಥಿತರಿದ್ದರು. ಅಂತಿಮ ಬಿ.ಕಾಂ ವಿದ್ಯಾರ್ಥಿನಿ ಕೆ.ಅಂಕಿತಾ ವಂದಿಸಿದರು.