Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಕುಂದಾಪುರ ಸಂಗೀತ ಭಾರತಿ ಟ್ರಸ್ಟ್‌ನ ಅವಿನಾಶ್ ಹೆಬ್ಬಾರ್ ಹೃದಯಾಘಾತದಿಂದ ನಿಧನ
    ಅಪಘಾತ-ಅಪರಾಧ ಸುದ್ದಿ

    ಕುಂದಾಪುರ ಸಂಗೀತ ಭಾರತಿ ಟ್ರಸ್ಟ್‌ನ ಅವಿನಾಶ್ ಹೆಬ್ಬಾರ್ ಹೃದಯಾಘಾತದಿಂದ ನಿಧನ

    Updated:13/05/2016No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪ್ರ ಡಾಟ್ ಕಾಂ ಸುದ್ದಿ.
    ಕುಂದಾಪುರ,ಮೇ12: ಕುಂದಾಪುರದ ಏಕೈಕ ಸಿತಾರ್ ವಿದ್ವಾನ್, ಅವಿನಾಶ್ ಮೆಡಿಕಲ್ಸ್ ನ ಪಾಲುದಾರ ಅವಿನಾಶ್ ಹೆಬ್ಬಾರ್(44) ಇಂದು ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಆರೋಗ್ಯದಲ್ಲಿ ಅಸಮತೋಲನ  ಕಾಣಿಸಿಕೊಂಡು ಆದರ್ಶ ಆಸ್ಪತ್ರೆಗೆ ದಾಖಲಾಗಿದ್ದ ಅವರು ಅಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

    Click Here

    Call us

    Click Here

    ಸರಳ, ಸಜ್ಜನಿಕೆಯ ವ್ಯಕ್ತಿತ್ವದ ಮೂಲಕ ಜನಾನುರಾಗಿಯಾಗಿದ್ದ ಅವಿನಾಶ್ ಹೆಬ್ಬಾರ್ ಅವರು ಶಾಸ್ತ್ರೀಯ ಸಂಗೀತದಲ್ಲಿ ಅಪಾರ ಒಲವುಳ್ಳವರಾಗಿದ್ದರು.  ಅಪರೂಪದ ಸಿತಾರ್ ವಾದಕರಾಗಿ ಹಲವೆಡೆ ಸಂಗೀತ ಕಛೇರಿಗಳನ್ನು ನೀಡಿ ಅಪಾರ ಜನಮನ್ನಣೆ ಗಳಿಸಿದ್ದರು. ಕುಂದಾಪುರ ಸಂಗೀತ ಭಾರತಿ ಟ್ರಸ್ಟ್‌ನ ವಿಶ್ವಸ್ಥರಾಗಿ, ರೋಟರ್ಯಾಕ್ಟ್ ಅಧ್ಯಕ್ಷರಾಗಿ, ರೋಟರಿ ಕುಂದಾಪುರದ ಮಾಜಿ ಕಾರ್ಯದರ್ಶಿಯಾಗಿ, ಕಲಾಕ್ಷೇತ್ರ ಕುಂದಾಪುರ ಸಂಸ್ಥೆಯಲ್ಲಿ ಸಕ್ರೀಯರಾಗಿ ಹತ್ತು ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು. ತಂದೆಯೊಂದಿಗೆ ಸಂಗೀತ ಭಾರತಿ ಟ್ರಸ್ಟ್ ಮೂಲಕ ಕಾರ್ಯಕ್ರಮಗಳನ್ನು ಸಂಘಟಿಸಿ ಕುಂದಾಪುರಕ್ಕೆ ಹಲವು ಸಂಗೀತ ವಿದ್ವಾಂಸರನ್ನು ಕರೆಯಿಸುವಲ್ಲಿ ಶ್ರಮಿಸಿದ್ದರು. ಅವಿನಾಶ್ ಮೆಡಿಕಲ್ಸ್, ಹುಣ್ಸಮಕ್ಕಿಯಲ್ಲಿ ರಬ್ಬರ್ ಕೃಷಿ ಹಾಗೂ ಇನ್ನಿತರ ಉದ್ಯಮಗಳನ್ನು ತೊಡಗಿಕೊಂಡಿದ್ದರೂ ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದ್ದರು. ಮೇ.15ರಂದು ಉಪ್ಪಿನಕುದ್ರು ಗೊಂಬೆಮನೆಯಲ್ಲಿ ಸ್ವತಃ ಸಂಗೀತ ಕಛೇರಿ ನೀಡುವವರಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

    ಅವಿನಾಶ್ ಹೆಬ್ಬಾರ್ ಅವರ ಅಕಾಲಿಕ ನಿಧನ ಅವರ ಬಂಧುಗಳು, ಹಿತೈಶಿಗಳು ಹಾಗೂ ಅಪಾರ ಅಭಿಮಾನಿಗಳಿಗೆ ಆಘಾತವನ್ನುಂಟುಮಾಡಿದೆ. ಅವರು ತಂದೆ ಕುಂದಾಪುರ ಅವಿನಾಶ್ ಮೆಡಿಕಲ್ಸ್‌ನ ವೈಕುಂಠ ಹೆಬ್ಬಾರ್ ಹಾಗೂ ತಾಯಿ ಆದರ್ಶ ಆಸ್ಪತ್ರೆಯ ಖ್ಯಾತ ವೈದ್ಯೆ ಛಾಯಾ ಹೆಬ್ಬಾರ್, ಸಹೋದರ ಡಾ. ಆದರ್ಶ ಹೆಬ್ಬಾರ್ ಸೇರಿದಂತೆ ಪತ್ನಿ, ಈರ್ವರು ಮಕ್ಕಳು ಹಾಗೂ ಸಹೋದರಿಯನ್ನು ಅಗಲಿದ್ದಾರೆ. /ಕುಂದಾಪ್ರ ಡಾಟ್ ಕಾಂ ಸುದ್ದಿ/

    Adarsha Hospital Kundapura Kalashetra kundapura Sangeeta Bharathi trust kundapura Sitar Player Avinash Hebbar no more
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಬ್ರಹ್ಮಾವರ: ಮಟಪಾಡಿ ದಿ. ಶಿವರಾಮ ಶೆಟ್ಟಿ ಅವರ 10ನೇ ವರ್ಷದ ಪುಣ್ಯಸ್ಮರಣೆ

    04/02/2026

    ಡಾ. ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಸಾಫ್ಟ್ ಸ್ಕಿಲ್ಸ್ ತರಬೇತಿ

    04/02/2026

    ತ್ರಾಸಿ: ವಾಕಿಂಗ್‌ ವೇಳೆ ವೃದ್ಧೆಯ ಕುತ್ತಿಗೆಯಿಂದ ಚಿನ್ನದ ಸರ ಎಳೆದುಕೊಂಡು ಪರಾರಿಯಾದ ಕಳ್ಳ

    04/02/2026
    Leave A Reply Cancel Reply

    18 − sixteen =

    Call us

    Click Here

    Call us

    Call us

    Call us
    Highest Viewed Recently
    • ಬ್ರಹ್ಮಾವರ: ಮಟಪಾಡಿ ದಿ. ಶಿವರಾಮ ಶೆಟ್ಟಿ ಅವರ 10ನೇ ವರ್ಷದ ಪುಣ್ಯಸ್ಮರಣೆ
    • ಜೀವನದಲ್ಲಿ ಉಚ್ಚ ಆದರ್ಶಗಳನ್ನು ಮತ್ತು ಉನ್ನತ ಗುರಿಯನ್ನಿಟ್ಟುಕೊಳ್ಳಿ: ಸ್ವಾಮಿ ಯುಗೇಶಾನಂದ
    • 70ನೇ ರಾಷ್ಟ್ರೀಯ ಜೂನಿಯರ್ ಬಾಲ್ ಬ್ಯಾಡ್ಮಿಂಟನ್: ಆಳ್ವಾಸ್ ಕಾಲೇಜಿನ ಬಾಲಕಿಯರು ಚಾಂಪಿಯನ್ಸ್
    • ಡಾ. ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಸಾಫ್ಟ್ ಸ್ಕಿಲ್ಸ್ ತರಬೇತಿ
    • ತ್ರಾಸಿ: ವಾಕಿಂಗ್‌ ವೇಳೆ ವೃದ್ಧೆಯ ಕುತ್ತಿಗೆಯಿಂದ ಚಿನ್ನದ ಸರ ಎಳೆದುಕೊಂಡು ಪರಾರಿಯಾದ ಕಳ್ಳ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.