ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ದೇವಾಲಗಳು ಮನುಷ್ಯ ಹಾಗೂ ದೇವರ ಸಂಪರ್ಕ ಮಾರ್ಗವಿದ್ದಂತೆ. ಅದು ಸ್ವರ್ಗದ ದಾರಿಯನ್ನು ತೆರೆದಿಡುತ್ತದೆ. ಆದರೆ ಆ ದಾರಿಯಲ್ಲಿ ನಡೆಯಲು ಶುದ್ಧ ಮನಸ್ಸು ಹಾಗೂ ಶ್ರದ್ಧೆ ಇರಬೇಕು ಎಂದು ಉಡುಪಿ ಧರ್ಮ ಪ್ರಾಂತ್ಯದ ಬಿಶಪ್ ಅತಿ ವ| ಡಾ. ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.
ತಲ್ಲೂರಿನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ನಕ್ಷತ್ರಾಕಾರದ ಸಂತ ಫ್ರಾನ್ಸಿಸ್ ಅಸ್ಸಿಸ್ ಚರ್ಚ್ ಲೊಕಾರ್ಪಣೆಗೊಳಿಸಿ ಪವಿತ್ರ ಬಲಿಪೂಜೆಯನ್ನು ನೆರವೇರಿಸಿದ ಬಳಿಕ ಅವರು ಸಂದೇಶವಿತ್ತರು. ೪೦ ಕ್ಕೂ ಅಧಿಕ ಧರ್ಮಗುರುಗಳು ಮತ್ತು ಸಹಸ್ರಾರು ಭಕ್ತಾಧಿಗಳೊಂದಿಗೆ ಪವಿತ್ರ ಬಲಿದಾನದಲ್ಲಿ ಪಾಲ್ಗೊಂಡಿದ್ದರು.
ಸಭಾ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರಾದ ಸಚಿವ ವಿನಯ ಕುಮಾರ್ ಸೊರಕೆಯವರೊಡನೆ ಬಿಷಪರು ಗಿಡನೆಟ್ಟು ಮಾತನಾಡಿ ಸಂತ ಫ್ರಾನ್ಸಿಸ್ ಅಸಿಸಿ ಅವರ ಪರಿಸರ ಕಾಳಜಿ ಇಂದಿಗೂ ಸ್ಮರಣೀಯ. ಕ್ಯಾಥೋಲಿಕ್ ಧರ್ಮಗುರುಗಳು ಚರ್ಚ್‌ನೊಂದಿಗೆ ಶಾಲೆಗಳನ್ನು ನಿರ್ಮಿಸಿ ನಿಸ್ವಾರ್ಥ ಸೇವೆಗೈಯುವುದು ಶ್ಲಾಘನೀಯ ಎಂದರು.
ಬೈಂದೂರು ಶಾಸಕ ಗೋಪಾಲ ಪೂಜಾರಿ ಇಗರ್ಜಿಯ ಸ್ಮಾರಕ ಪುರವಣಿಗೆಯನ್ನು ಉದ್ಘಾಟಿಸಿದರು. ವಲಯ ಪ್ರಧಾನ ಧರ್ಮಗುರು ವ|ಅನಿಲ್ ಡಿಸೋಜಾ, ವೇದ ಮೂರ್ತಿ ವಿಧ್ವಾನ್ ರಾಮಚಂದ್ರ ಭಟ್ಟ್, ಇಸ್ಮಾಯಿಲ್ ಮದನಿ, ಮುಲ್ಲಾ. ಗ್ರಾಮ ಪಂಚಾಯತ್ ಅಧ್ಯಕ್ಷ ಆನಂದ ಬಿಲ್ಲವ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಚಂದ್ರ ಶೆಟ್ಟಿ ಉಪಸ್ಥಿತರಿದ್ದರು. ಇಗರ್ಜಿಯ ಉಪಾಧ್ಯಕ್ಷ ಅರುಣ್ ಮೆಂಡೊನ್ಸಾ ಸ್ವಾಗತಿಸಿದರು. ಕಾರ್ಯದರ್ಶಿ ಸ್ಟ್ಯಾನಿ ಡಿಸಿಲ್ವಾ ಜಗದ್ಗುರು ಪೋಪ್ ಪ್ರತಿನಿಧಿಗಳ ಸಂದೇಶವನ್ನು ವಾಚಿಸಿದರು. ಇಗರ್ಜಿಯ ಧರ್ಮಗುರು ಸುನೀಲ್ ವೇಗಸ್ ವಂದನೆಗಳನ್ನು ಸಲ್ಲಿಸಿದರು. ಅನಿಲ್ ಡಿಸಿಲ್ವಾ ಮತ್ತು ನೀತಾ ಮೆಂಡೊನ್ಸಾ ಕಾರ್ಯಕ್ರಮವನ್ನು ನಿರೂಪಿಸಿದರು.
►ತಲ್ಲೂರಿನಲ್ಲಿ ಕರ್ನಾಟಕದ ಮೊದಲ ನಕ್ಷತ್ರಾಕಾರದ ಚರ್ಚ್ – http://kundapraa.com/?p=13962