ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ವತ್ತಿನಕಟ್ಟೆ ಮಹಾಸತಿ ಅಮ್ಮನವರ ದೇವಸ್ಥಾನ ಅನುವಂಶಿಕ ಅರ್ಚಕ- ಮೊಕ್ತೇಸರ ಬಿ. ಕೃಷ್ಠಮೂರ್ತಿ ನಾವಡರಿಗೆ ನಾಗೂರು ಒಡೆಯರ ಮಠ ಕಲಾಮಂದಿರದಲ್ಲಿ ನಡೆದ ಶ್ರೀ ಶಂಕರ ಜಯಂತಿ -ತತ್ವಜ್ಙಾನಿಗಳ ದಿನಾಚರಣೆ ಸಮಾಂಭದಲ್ಲಿ ಶೃಂಗೇರಿ ದಕ್ಷಿಣಾಮ್ನಾಯ ಪೀಠದ ಶ್ರೀ ಶಂಕರ ತತ್ತ ಪ್ರಸರಣಾ ಸಮಿತಿಯ ಪರವಾಗಿ ವಿದ್ವತ್ ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಸರಾಫ್ ರಮಾನಂದ ಪೈ, ಶಂಕರರ ಭಕ್ತಿ ಸಾಹಿತ್ಯದ ’ಭಜ ಗೋವಿಂದಂ’ ಕುರಿತು ಉಪನ್ಯಾಸ ನೀಡಿದರು. ಯು. ವರಲಕ್ಮ್ಷೀ ಹೊಳ್ಳ ಮತ್ತು ಬಳಗದವರು ಶಂಕರಚಾರ್ಯರು ರಚಿಸಿದ ಸೋತ್ರಗಳನ್ನು ಹಾಡಿದರು. ಶ್ರೀ ಅಗಸ್ತೇಶ್ವರ ದೇವಸ್ಥಾನ ಕೇಂದ್ರದಿಂದ ಶ್ರೀ ಶಂಕರ ಅಷ್ಟೋತ್ತರ ಶತನಾಮ ಜಪ ವೃತ ಕೈಗೊಂಡ ಶ್ರದ್ಧಾಳುಗಳು ಪಾರಾಯಣವನ್ನು ಶ್ರೀ ಗುರುಗಳ ಸನ್ನಿಧಿಯಲ್ಲಿ ಸಮರ್ಪಣೆ ಗೈದರು.
ರಾಮಕೃಷ್ಡ ಜೋಷಿಯವರು ಶಂಕರಾರ್ಚಾರ ಭಾವಚಿತ್ರಕ್ಕೆ ಶಾಸ್ತ್ರೊಪ ಪೂಜೆಗೈದು ಆಶೀರ್ವದಿಸಿದರು. ಕೂಟ ಮಹಾ ಜಗತ್ತಿನ ಕಾರ್ಯದರ್ಶಿ ಮಂಜುನಾಥ ಹೊಳ್ಳ ಉಪಸ್ಥಿತರಿದ್ದರು. ದ್ರಾವಿಡ ಬ್ರಾಹಣ ಪರಿಷತ್ತು ಉಪ್ಪುಂದ ವಲಯದ ಅಧ್ಯಕ್ಷ ಮಂಜುನಾಥ ಉಡುಪ ಅಧ್ಯಕ್ಷತೆ ವಹಿಸಿದ್ದರು. ಅನ್ನಪೂರ್ಣ ಉಡುಪ ಸ್ವಾಗತಿಸಿ, ಗಣೇಶ ಪ್ರಸನ್ನ ಮಯ್ಯ ನಿರೂಪಿಸಿದರು, ಯು ಸಂದೇಶ ಭಟ್ ವಂದಿಸಿದರು.