ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಕುಂದಾಪುರ ದೇವಾಡಿಗರ ಸಮಾಜ ಸೇವಾ ಸಂಘ (ರಿ) ತ್ರಾಸಿ, ಹೊಸಾಡು, ಗುಜ್ವಾಡಿ ನೂತನ ಸಂಘದ ಉದ್ಘಾಟನಾ ಸಮಾರಂಭ ಇತ್ತೀಚೆಗೆ ತ್ರಾಸಿ ಅಣ್ಣಪ್ಪಯ್ಯ ಸಭಾಭವನದಲ್ಲಿ ನಡೆಯಿತು.
ಮುಂಬೈ ಉದ್ಯಮಿ ಸುರೇಶ ಡಿ. ಪಡುಕೋಣೆ ಕಾರ್ಯಕ್ರಮ ಉದ್ಘಾಟಸಿ ಶುಭ ಹಾರೈಸಿದರು ಸಮಾರಂಭದ ಅದ್ಯಕ್ಷತೆಯನ್ನು ರಾಮ ದೇವಾಡಿಗ ತ್ರಾಸಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಅರಣ್ಯ ಇಲಾಖಾ ಮಹಾಮಂಡಳಿಯ ಅದ್ಯಕ್ಷ ರಘರಾಮ ದೇವಾಡಿಗ ಆಲೂರು, ಮುಂಬೈ ದೇವಾಡಿಗ ಸಂಘದ ಅದ್ಯಕ್ಷರಾದ ಎಚ್. ಮೋಹನ್‌ದಾಸ್, ಶ್ರೀ ಎಕನಾಥೇಶ್ವರಿ ದೇವಸ್ಥಾನದ ಟ್ರಸ್ಟಿ ಜನಾರ್ಧನ ದೇವಾಡಿಗ ಮುಂಬೈ ದೇವಾಡಿಗರ ಸಂಘದ ಜತೆ ಕಾರ್ಯದರ್ಶಿ ಗಣೇಶ ಶೇರಿಗಾರ್, ದುಬ್ಯೆ ಉದ್ಯಮಿ ಶೀನ ದೇವಾಡಿಗ ಸೌಪರ್ಣಿಕಾ ಮಹಿಳಾ ಸೇವಾ ಸಹಕಾರಿ ಸೊಸೈಟಿ ತ್ರಾಸಿಯ ಅದ್ಯಕ್ಷರಾದ ಶಾರದಾ ಎಂ.ಡಿ ಬಿಜೂರು, ಕುಂದಾಪುರ ಸಂಘದ ಅದ್ಯಕ್ಷರಾದ ನಾಗರಾಜ ರಾಯಪ್ಪನಮಠ, ಕೋಟೇಶ್ವರದ ಅದ್ಯಕ್ಷರಾದ ಚಂದ್ರ ದೇವಾಡಿಗ, ಉಪ್ಪಿನಕುದ್ರು ಸಂಘದ ಅದ್ಯಕ್ಷರಾದ ಬಸವ ದೇವಾಡಿಗ, ಕಟ್ಟಿನ ಮಕ್ಕಿ ಸಂಘದ ಅದ್ಯಕ್ಷರಾದ ಚಿತ್ತರಂಜನ ದೇವಾಡಿಗ, ಉಪ್ಪುಂದ ಸಂಘದ ಅದ್ಯಕ್ಷರಾದ ಮಂಜು ದೇವಾಡಿಗ, ಬೈಂದೂರು ಸಂಘದ ಅದ್ಯಕ್ಷರಾದ ಸುಬ್ಬ ದೇವಾಡಿಗ ಬೈಂದೂರ ಸಂಘದ ಅದ್ಯಕ್ಷರಾದ ಸತೀಶ ಎಂ. ನಾವುಂದ. ಗ್ರಾಮ ಪಂಚಾಯತ ಅದ್ಯಕ್ಷರಾದ ನರಸಿಂಹ ದೇವಾಡಿಗ. ಎಕನಾಥೇಶ್ವರಿ ಟ್ರಸ್ಟಿನ ಕಾರ್ಯದರ್ಶಿ ನರಸಿಂಹ ದೇವಾಡಿಗ, ಕೋಶಧಿಕಾರಿ ಜನಾರ್ಧನ ದೇವಾಡಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಗೌರಿ ದೇವಾಡಿಗ, ತಾಲೂಕು ಪಂಚಾಯತ ಸದಸ್ಯರಾದ ಸುಜಾತ ದೇವಾಡಿಗ ಯಡ್ತರೆ, ಜಗದೀಶ ದೇವಾಡಿಗ ಬಿಜೂರ, ವಿಶ್ವಕವಿ ಕುವೆಂಪು ಕಾವ್ಯ ಪುರಸ್ಕಾರ ಪಡೆದ ಜ್ಯೊತಿ ಎಸ್ ದೇವಾಡಿಗ ಜಿಲ್ಲಾ ರಾಜೋತ್ಸವ ಪ್ರಶಸ್ತಿ ವಿಜೇತರಾದ ಗೋಪಾಲ ದೇವಾಡಿಗ ಸೌಕೂರು, ಯುವ ಸಾಹಿತಿ ಜಗದೀಶ ದೇವಾಡಿ ಮುಳ್ಳಿಕಟ್ಟೆ, ಸುವರ್ಣ ಚಾನಲ್ ನೃತ್ಯಾ ಕಾರ್ಯಕ್ರಮದಲ್ಲಿ ಅತಿಂಮ ಹಂತ ತಲುಪಿದ ಭಾವನ ಆರ್.ದೇವಾಡಿಗ, ಚತ್ರಕಲಾ ಸ್ಪರ್ದ ವಿಜೇತೆ ವೈಷ್ಣವಿ ದೇವಾಡಿಗರನ್ನು ಸನ್ಮಾನಿಸಲಾಯಿತು. ಅಶೋಕ ದೇವಾಡಿಗ ಕಂಚುಗೋಡು ಸ್ವಾಗತಿಸಿದರು. ರವಿ ದೇವಾಡಿಗ ತಲ್ಲೂರು ಕಾರ್ಯಕ್ರಮದ ನಿರೂಪಿಸಿ. ಕಾರ್ಯದರ್ಶಿ ರಾಜೇಶ ದೇವಾಡಿಗ ತ್ರಾಸಿ ವಂದಿಸಿದರು.