ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ವಂಡ್ಸೆ ವ್ಯಾಪ್ತಿಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಂಡ್ಸೆ ಒಕ್ಕೂಟದ ಪದಗ್ರಹಣ ಸಮಾರಂಭವು ವಂಡ್ಸೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಜರುಗಿತು.
ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅದ್ಯಕ್ಷ ಶಶಿಧರ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಿಎಸ್‌ಎನ್‌ಎಲ್ ನಿವೃತ್ತ ಅಧಿಕಾರಿ ಜಿ. ಶ್ರೀಧರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಒಕ್ಕೂಟದ ಮಾಜಿ ಅದ್ಯಕ್ಷೆ ಜಯಂತಿ ಪಿ. ಶೆಟ್ಟಿ, ಮಾಜಿ ಉಪಾದ್ಯಕ್ಷರಾದ ದಯನಂದ ಆಚಾರಿ, ಮತ್ತು ಪದಾಧಿಕಾರಿಗಳು. ಶಾಲಾಭಿವ್ರದ್ದಿ ಸಮಿತಿಯ ಅದ್ಯಕ್ಷ ಚಂದ್ರ ನಾಯಕ ರಾಯಪ್ನಾಡಿ, ತ್ರಾಸಿ ಮರವಂತೆಯ ವಲಯದ ಮೇಲ್ವಿಚಾರಕರಾದ ಚಂದ್ರ, ಶಿಕ್ಷಕ ಪ್ರಭಾಕರ ಶೆಟ್ಟಿ, ಜನಜಾಗೃತಿ ವೇದಿಕೆ ಸದಸ್ಯ ತಾಂಪಣ್ಣ ಶೆಟ್ಟಿ ಉಪಸ್ಥಿತರಿದ್ದರು.
ವಂಡ್ಸೆ ಒಕ್ಕೂಟದ ನೂತನ ಅದ್ಯಕ್ಷರಾಗಿ ಸಂಜೀವಿ, ಉಪಾದ್ಯಕ್ಷರಾಗಿ ಸದಾನಂದ ಆಚಾರಿ ಮತ್ತು ನೂತನ ಪದಾಧಿಕಾರಿಗಳು ಪ್ರದಪ್ರದಾನ ಸ್ವೀಕರಿಸಿದರು. ಒಕ್ಕೂಟದ ಮಾಜಿ ಅದ್ಯಕ್ಷ ಗಿರೀಶ ನಾಯ್ಕ ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು. ವಂಡ್ಸೆ ಒಕ್ಕೂಟದ ಸೇವಾಪ್ರತಿನಿಧಿ ಲಾಲಿ ಸೋಜನ ವರದಿ ವಾಚಿಸಿದರು. ಒಕ್ಕೂಟದ ಮಾಜಿ ಅದ್ಯಕ್ಷರಾದ ಶಂಕರ ಆಚಾರ್ಯಯವರು ಸ್ವಾಗತಿಸಿದರು. ವಂಡ್ಸೆ ಒಕ್ಕೂಟದ ಮೇಲ್ವಿಚಾರಕಿ ನೇತ್ರಾವತಿ ಕಾರ್ಯಕ್ರಮ ನಿರೂಪಿಸಿದರು. ಸವಿನಯ ಸಂಘದ ಸದಸ್ಯ ದಿವಾಕರ ಧನ್ಯವಾದಗೈದರು.