ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಇಲ್ಲಿನ ತಗ್ಗರ್ಸೆ ಗ್ರಾಮದ ಶ್ರೀ ಮಹಾಲಿಂಗೇಶ್ವರ ದೇವರ ಎರಡನೇ ಪ್ರತಿಷ್ಟಾ ವರ್ಧಂತ್ಯೋತ್ಸದ ಪ್ರಯುಕ್ತ ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ಉದ್ಯಮಿ ಟಿ. ನಾರಾಯಣ ಹೆಗ್ಡೆ ಮತ್ತು ಮಕ್ಕಳು ಶ್ರೀದೇವರಿಗೆ ರಜತ ಕವಚ ಮತ್ತು ದಾನಿಗಳು ಹಾಗೂ ಸಾರ್ವಜನಿಕರ ನೆರವಿನಿಂದ ಬೆಳ್ಳಿಯ ಪ್ರಭಾವಳಿ ಸಮರ್ಪಿಸಲಾಯಿತು. ಈ ಸಂದರ್ಭ ವಂಡ್ಸೆ ಜಿಪಂ ಸದಸ್ಯ ಕೆ. ಬಾಬು ಶೆಟ್ಟಿ ಹಾಜರಿದ್ದರು.