ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ನಾಡ ಗ್ರಾಮದ ಚುಂಗಿಗುಡ್ಡೆ ಪ್ರಕಾಶ ಹೆಬ್ಬಾರ್ ಅವರನ್ನು ಮಂಡ್ಯದ ಡಾ. ಜೀ.ಶಂ.ಪ ಸಾಹಿತ್ಯ ವೇದಿಕೆಯು ರಾಜ್ಯಮಟ್ಟದ ಕಾವ್ಯಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿದೆ. ವೇದಿಕೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕನ್ನಂಬಾಡಿ ದಿನಪತ್ರಿಕೆಯ ಸಹಯೋಗದಲ್ಲಿ ಮೇ 26ರಂದು ಮಂಡ್ಯ ನಗರದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಆಯೋಜಿಸಿರುವ ಕವಿಕಾವ್ಯ ಮೇಳದಲ್ಲಿ ಪ್ರಶಸ್ತಿ ಪ್ರದಾನ ನಡೆಯುವುದು.
ಕವಿಗಳೂ, ಸಾಹಿತ್ಯ ಪರಿಚಾರಕರೂ ಆಗಿರುವ ಹೆಬ್ಬಾರ್ ಚುಂಗಿಗುಡ್ಡೆ ಪರಮೇಶ್ವರ ಹೆಬ್ಬಾರ್, ಅಕ್ಕಮ್ಮ ಹೆಬ್ಬಾರ್ ದಂಪತಿಯ ಪುತ್ರ.