ಭಟ್ಕಳದಲ್ಲಿ ನವೋದಯ ವಿವಿದೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದ 9ನೇ ಶಾಖೆ ಲೋಕಾರ್ಪಣೆ
ಕುಂದಾಪ್ರ ಡಾಟ್ ಕಾಂ ಸುದ್ದಿ
ಭಟ್ಕಳ: ಸ್ವಸಹಾಯ ಗುಂಪುಗಳ ಮೂಲಕ ಮಹಿಳೆಯರು ಆರ್ಥಿಕ ಸ್ವಾವಲಂಭಿಗಳಾಗುವತ್ತ ಗಮನ ಹರಿಸುವಂತಾಗಬೇಕು. ಸಂಘಗಳ ಮೂಲಕ ಪಡೆಯುವ ಸಾಲ ಶಿಕ್ಷಣ ಆಥವಾ ಇನ್ನಿತರೇ ನಿರ್ದಿಷ್ಟ ಉದ್ದೇಶಗಳಿಗೆ ವಿನಿಯೋಗವಾಗಿ ಆ ಉದ್ದೇಶ ಈಡೇರಿದರೇ ಸಾಲ ನೀಡುವುದು ಸದ್ವಿನಿಯೋಗವಾದಂತಾಗುವುದು ಎಂದು ಕಾರಾವಾರ ಜಿಪಂ ಅಧ್ಯಕ್ಷ ಜಯಶ್ರೀ ಮೊಗೇರ ಹೇಳಿದರು.
ಅವರು ಭಟ್ಕಳದಲ್ಲಿ ನವೋದಯ ವಿವಿದೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದ 9ನೇ ಶಾಖೆ ಲೋಕಾರ್ಪಣೆಗೊಂಡ ಬಳಿಕ ಇಲ್ಲಿನ ಕಮಲಾವತಿ ಮತ್ತು ರಾಮನಾಥ ಶ್ಯಾನುಭಾಗ ಸಭಾಗೃಹದಲ್ಲಿ ನವೋದಯ ಸ್ವ-ಸಹಾಯ ಸಂಘಗಳ ಸದಸ್ಯರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನವೋದಯ ವಿವಿದೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿ 1999ರಲ್ಲಿ ಸ್ವಾವಲಂಭಿ ಬದುಕಿಗೆ ಅಗತ್ಯವಾದ ಆರ್ಥಿಕ ಸೌಲಭ್ಯ ಒದಗಿಸುವ ಉದ್ದೇಶದಿಂದ ಆರಂಭಗೊಂಡ ನವೋದಯ ಸೌಹಾರ್ದ ಸಹಕಾರಿಯು ಯಶಸ್ವಿಯಾಗಿ ಮುನ್ನಡೆದು ಇಂದಿಗೂ ತನ್ನ ವಿಶ್ವಾಸವನ್ನು ಉಳಿಸಿಕೊಂಡು ಪ್ರಗತಿ ಸಾಧಿಸಿದೆ. ಸಾಲ ಪಡೆದು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಹಾಗೂ ಉತ್ತಮ ಬದುಕನ್ನು ರೂಪಿಸಿಕೊಳ್ಳುವ ಅವಕಾಶವನ್ನು ಪಡೆದುಕೊಳ್ಳಬೇಕು. ಸ್ವ-ಸಹಾಯ ಗುಂಪುಗಳ ಸದಸ್ಯರು ಸಮವಸ್ತ್ರವನ್ನು ಧರಿಸುವ ಮೂಲಕ ನಾವೆಲ್ಲರೂ ಸಮಾನರೂ ಎಂಬ ಸಂದೇಶವನ್ನು ಸಮಾಜಕ್ಕೆ ನೀಡುತ್ತಿದ್ದಾರೆ. ಇದು ಇತರರಿಗೂ ಮಾದರಿಯಾಗಬೇಕಿದೆ ಎಂದರು.
ಭಟ್ಕಳದ ಮಾಜಿ ಶಾಸಕ ಬ್ಯಾಂಕ್ ಶಾಖೆ ಹಾಗೂ ಭದ್ರತಾ ಕೊಠಡಿಯನ್ನು ಉದ್ಘಾಟಿಸಿದರು. ಕಟ್ಟಡ ಮಾಲಿಕ ಎಂ.ಆರ್. ನಾಯಕ್ ಗಣಕೀಕರಣ ವ್ಯವಸ್ಥೆಯನ್ನು ಉದ್ಘಾಟಿಸಿದರು. ಎಪಿಎಂಸಿ ಹೊನ್ನಾವರದ ಅಧ್ಯಕ್ಷ ಚಂದ್ರಶೇಖರ ಜಿ. ಗೌಡ ಹೊಸ ಸ್ವ-ಸಹಾಯ ಗುಂಪುಗಳನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಬೆಳ್ವೆ ವ್ಯವಸಾಯ ಸೇವಾ ಸಹಕಾರಿಯ ಮಂಜುನಾಥ ನಾಯ್ಕ್. ಭಟ್ಕಳ ವ್ಯವಸಾಯ ಸೇವಾ ಸಹಕಾರಿಯ ಬಾಬು ಮಾಸ್ತರ್, ವೀರಪ್ಪ ಗರಡಿಕರ್, ಸಹಕಾರಿ ನಿರ್ದೇಶಕರಾದ ಹರೀಶ್ಚಂದ್ರ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನೂತನ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೊಗೇರ, ಕಟ್ಟಡ ಮಾಲಿಕ ಎಂ.ಆರ್. ನಾಯ್ಕ್, ಭಟ್ಕಳ ಶಾಖಾ ವ್ಯವಸ್ಥಾಪಕ ತಾರಾನಾಥ ಅವರನ್ನು ಸನ್ಮಾನಿಸಲಾಯಿತು. ನವೋದಯ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಉಪಾಧ್ಯಕ್ಷ ರಾಜು ಪೂಜಾರಿ ಸ್ವಾಗತಿಸಿ, ಪ್ರಾಸ್ತಾವಿಕ ನುಡುಗಳನ್ನಾಡಿದರು. ಸ್ಮಿತಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ವಾಸು ವಂದಿಸಿದರು. ಪತ್ರಕರ್ತ ಸುಬ್ರಮಣ್ಯ ಪಡುಕೋಣೆ ಕಾರ್ಯಕ್ರಮ ನಿರೂಪಿಸಿದರು.