ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಇಲ್ಲಿನ ಹೊಸ ಬಸ್ಸು ನಿಲ್ದಾಣದಲ್ಲಿ ತಡ ರಾತ್ರಿಯ ವೇಳೆಗೆ ಸುಮಾರು ನಲ್ವತ್ತು ವರ್ಷ ಪ್ರಾಯದ ಗಂಡಸಿನ ಅಪರಿಚಿತ ಶವವೊಂದು ಪತ್ತೆಯಾಗಿದೆ. ಧೋ ಎಂದು ಸುರಿಯುತ್ತರಿದ್ದ ಮಳೆಯ ನಡುವೆ ಹೊಸ ಬಸ್ಸು ನಿಲ್ದಾಣದಲ್ಲಿ ಮರದ ಕೆಳಗೆ ಮಲಗಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮಳೆ ಸುರಿಯುತಲಿದ್ದರೂ ಆತ ಎದ್ದೇಳದಾಗ ಬಸ್ಸು ನಿಲ್ದಾಣದಲ್ಲಿದ್ದ ತಲ್ಲೂರು ಗ್ರಾ.ಪಂ. ಸದಸ್ಯ ಸುನೀಲ್ ತಲ್ಲೂರು ಹಾಗೂ ಡಾ| ರಾಜ್ ಬಳಗದ ಅಧ್ಯಕ್ಷ ರತ್ನಾಕರ ಪೂಜಾರಿ ಕುಂದಾಪುರ ಠಾಣೆಗೆ ಮಾಹಿತಿ ನೀಡಿದ್ದಾರೆ. ಈ ಅಪರಿಚಿತ ವ್ಯಕ್ತಿಯು ಮದ್ಯಾಹ್ನ ಸುಮಾರಿಗೆ ಹೊಸ ಬಸ್ ನಿಲ್ದಾಣಕ್ಕೆ ಬಂದಿದ್ದು, ನನಗೆ ಹುಷಾರಿಲ್ಲ ಆಸ್ಪತ್ರೆಗೆ ಸೇರಿಸಿ ಎಂದು ಕೆಲವರಲ್ಲಿ ಅಲವತ್ತು ಕೊಂಡಿದ್ದು ಯಾರೋಬ್ಬರೂ ಆಸ್ಪತ್ರೆಗೆ ಸೇರಿಸಿರಲಿಲ್ಲ ಎನ್ನಲಾಗಿದೆ. ಬಳಿಕ ಬಸ್ಸು ನಿಲ್ದಾಣ ಮದ್ಯೆ ಮರದ ತಂಪು ನೆರಳಿನ ಆಶ್ರಯ ಪಡೆದ ಆತ ತಡ ರಾತ್ರಿ ವೇಳೆಗೆ ಸುರಿಯುತ್ತಿದ್ದ ಮಳೆಯಲ್ಲಿ ಗಮನಿಸಿದಾಗ ಶವವಾಗಿ ಹೋಗಿದ್ದಾನೆ. /ಕುಂದಾಪ್ರ ಡಾಟ್ ಕಾಂ ಸುದ್ದಿ/