ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ತಲೆಸಿಮೀಯ ಮೇಜರ್ (ರಕ್ತ ಹೀನತೆ) ಕಾಯಿಲೆಯಿಂದ ಬಳಲುತ್ತಿರುವ ಕುಂದಾಪುರ ತಾಲೂಕಿನ ಕಟ್‌ಬೇಲ್ತೂರು ಗ್ರಾಮದ ಸುಳ್ಸೆ ನಿವಾಸಿಯಾಗಿರುವ ಮೂರು ವರ್ಷದ ಬಾಲಕಿ ಗ್ರಿಷ್ಮಿತಾ ವೈದ್ಯಕೀಯ ಚಿಕಿತ್ಸೆಗಾಗಿ ದಾನಿಗಳ ಸಹಾಯದ ನಿರೀಕ್ಷೆಯಲ್ಲಿದ್ದಾಳೆ.
ಬೆಂಗಳೂರಿನಲ್ಲಿ ಬೀಡಾ ಅಂಗಡಿ ನಡೆಸುತ್ತಿರುವ ಕಟ್‌ಬೇಲ್ತೂರು ಗ್ರಾಮದ ಸುಳ್ಸೆ ನಿವಾಸಿ ಮಧುಕರ ಪೂಜಾರಿ ಎಂಬುವರ ಏಕೈಕ ಪುತ್ರಿ ಮೂರು ವರ್ಷದ ಬಾಲಕಿ ಗ್ರಿಷ್ಮಿತಾಳಿಗೆ ತಲೆಸಿಮೀಯ ಮೇಜರ್ (ರಕ್ತಹೀನತೆ) ಕಾಯಿಲೆ ಇರುವುದು ವೈದ್ಯರ ತಾಪಾಸಣೆಯಿಂದ ಕಂಡು ಬಂದಿದೆ. ಇದರಿಂದಾಗಿ ಪ್ರತಿ ತಿಂಗಳಿಗೊಮ್ಮೆ ರಕ್ತವನ್ನು ಜೀವನ ಪರ್ಯಂತ ನೀಡಬೇಕಾಗುತ್ತದೆ ಅಲ್ಲದೆ ಇದರ ಚಿಕಿತ್ಸೆಗಾಗಿ ಮೋನ್ ಮೆರೋ ಟ್ರಾನ್ಸ್‌ಪ್ಲೆಂಟ್ (ಅಸ್ತಿಮಜ್ಜೆ) ಮಾಡಬೇಕಾಗುತ್ತದೆ. ಈ ಚಿಕಿತ್ಸೆಗೆ ಸುಮಾರು 30 ಲಕ್ಷದಿಂದ ೩೫ ಲಕ್ಷದವರೆಗೆ ಖರ್ಚು ತಗುಲಬಹುದು ಎಂದು ಬೆಂಗಳೂರಿನ ನಾರಾಯಣ ಹೃದಯಾಲಯದ ತಜ್ಞ ವೈದ್ಯರು ತಿಳಿಸಿದ್ದಾರೆ.
ಮಧುಕರ ಪೂಜಾರಿ ಆರ್ಥಿಕವಾಗಿ ತೀರ ಬಡವರಾಗಿದ್ದು, ಪತ್ನಿ ಹಾಗೂ ಪುತ್ರಿಯೊಂದಿಗೆ ಬೆಂಗಳೂರಿನಲ್ಲಿ ಬೀಡಾ ಅಂಗಡಿ ಇಟ್ಟು ಜೀವನ ಸಾಗಿಸುತ್ತಿದ್ದಾರೆ. ಊರಿನ ಮನೆಯಲ್ಲಿ ತಾಯಿಯಿಬ್ಬರೇ ವಾಸಿಸುತ್ತಿದ್ದು ಇವರು ಇಡೀ ಕುಟುಂಬದ ಆಧಾರ ಸ್ತಂಭವಾಗಿದ್ದಾರೆ. ಗ್ರಿಷ್ಮಿತಾ ಸುಮಾರು ಒಂದುವರೆ ವರ್ಷದವಳಿದ್ದಾಗ ಈ ಕಾಯಿಲೆ ಪತ್ತೆಯಾಗಿದ್ದು ಅಲ್ಲಿಂದ ಇಲ್ಲಿಯವರೆಗೆ AB+ve ರಕ್ತವನ್ನು ನೀಡುತ್ತಾ ಬಂದಿದ್ದಾರೆ. ಇಲ್ಲಿಯವರೆಗೆ ಲಕ್ಷಾಂತರ ರೂ. ಹಣವನ್ನು ಈ ಬಾಲಕಿಯ ವೈದ್ಯಕೀಯ ಚಿಕಿತ್ಸೆಗಾಗಿ ವ್ಯಯಿಸಿದ್ದು, ಇದೀಗ ಈ ಬಾಲಕಿಯ ವೈದ್ಯಕೀಯ ವೆಚ್ಚವನ್ನು ಭರಿಸುವುದು ಕಷ್ಟಕರವಾಗಿದೆ. ಬಾಲಕಿಯ ವೈದ್ಯಕೀಯ ಚಿಕಿತ್ಸೆಗಾಗಿ ದಾನಿಗಳ ಸಹಾಯ ಯಾಚಿಸುತ್ತಿದ್ದಾರೆ. ದಾನಿಗಳ ಉದಾರ ನೆರವಿನ ಆಸೆಯಲ್ಲಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ಈ ಬಾಲಕಿಯ ವೈದ್ಯಕೀಯ ಚಿಕಿತ್ಸೆಗೆ ಸಹಾಯ ಮಾಡಲಿಚ್ಛಿಸುವವರು ಆಕೆಯ ತಂದೆಯ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಬಹುದು
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬೆಂಗಳೂರು ಉಳಿತಾಯ ಖಾತೆ
ಖಾತೆ ಸಂಖ್ಯೆ 20335955644
ಐಎಫ್‌ಎಸ್‌ಸಿ ಕೋಡ್: SBIN0017650
ಹೆಚ್ಚಿನ ಮಾಹಿತಿಗಾಗಿ
ಮಧುಕರ ಪೂಜಾರಿ – 9945978437