ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಯಡ್ತರೆ ಗ್ರಾ. ಪಂ. ವ್ಯಾಪ್ತಿಯ ಪ. ಪಂಗಡದ ರಂಗ ತಂಡ ಸಂಚಲನ(ರಿ) ಹೊಸೂರು ಸಂಸ್ಥೆಯು, ನಾಟಕ ಅಕಾಡೆಮಿ ಬೆಂಗಳೂರು ಇವರ ಆಶ್ರಯದಲ್ಲಿ ಆಯ್ದ
ಬುಡಕಟ್ಟು ಯುವ ಕಲಾವಿದರಿಗೆ ಇಪ್ಪತ್ತು ದಿನಗಳ ರಂಗಶಿಬಿರವನ್ನು ಆಯೋಜಿಸಿದ್ದು ಅಕಾಡೆಮಿಯ ಸದಸ್ಯ ಉಮೇಶ್ ಸಾಲಿಯಾನ್ ಉದ್ಘಾಟಿಸಿದರು.
ಬಳಿಕ ಮಾತನಾಡಿ ಮನರಂಜನೆಗಾಗಿ ಮಾತ್ರ ರಂಗಭೂಮಿ ಸೀಮಿತವಲ್ಲ. ಹೊಸ ಹೊಸ ನಾಟಕಗಳ ಮೂಲಕ ಒಳ್ಳೆಯ ಸಂದೇಶವನ್ನು ಸಮಾಜಕ್ಕೆ ನೀಡಿ ಸಮಾಜದ ಉನ್ನತಿಗಾಗಿ
ಹಾಗೂ ತನ್ನನ್ನೆ ತಾನು ಬೆಳೆಸಲಿಕ್ಕೊಸ್ಕರ ರಂಗಭೂಮಿಯಲ್ಲಿ ತೊಡಗಿಸಿಕೊಳ್ಳಬೇಕು. ಆ ಉದ್ದೇಶದಿಂದ ಇಂತಹ ಗ್ರಾಮೀಣ ಪ್ರದೇಶದಲ್ಲಿ ನಾಟಕ ಅಕಾಡೆಮಿಯು ಸ್ಥಳೀಯ ರಂಗ
ತಂಡಗಳ ನೆರವಿನಿಂದ ಈ ರೀತಿಯ ರಂಗ ಶಿಬಿರಗಳನ್ನೆ ಏರ್ಪಡಿಸಿ ಇಡೀ ಗ್ರಾಮವೇ ಅದರಲ್ಲಿ ತೊಡಗಿಸಿಕೊಳ್ಳುವ ಹಾಗೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಸಂಚಲನದ ಅಧ್ಯಕ್ಷ ತಿಮ್ಮ ಮರಾಠಿ ಅಧ್ಯಕ್ಷತೆ ವಹಿಸಿದ್ದು, ಸ್ಥಳೀಯ ಶಾಲಾ ಪ್ರಭಾರ ಮುಖ್ಯ ಶಿಕ್ಷಕ ರಾಮಾನಾಥ ಮೇಸ್ತ, ಗ್ರಾ. ಪಂ. ಸದಸ್ಯ ಶ್ರೀಮತಿ ಲಲಿತಾ ನಾಗಪ್ಪ ಮರಾಠಿ, ಸುಬ್ಬ
ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದು, ಕಾರ್ಯದರ್ಶಿ ನಾಗಪ್ಪ ಮರಾಠಿ ವಂದಿಸಿ ತಂಡದ ನಿರ್ದೇಶಕ, ಅಧ್ಯಾಪಕ ಸುಧಾಕರ. ಪಿ. ಬೈಂದೂರು ಕಾರ್ಯಕ್ರಮ ನಿರೂಪಿಸಿದರು