ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ಫ್ರೌಢಾವಸ್ಥೆ ಎನ್ನುವುದು ಜೀವನದ ಪ್ರಮುಖ ಹಂತ. ಮಕ್ಕಳು ತಮ್ಮ ಭವಿಷ್ಯತ್ತನ್ನು ರೂಪಿಸಿಕೊಳ್ಳುವ ಕಡೆಗೆ ಹೆಚ್ಚಿನ ಗಮನವನ್ನು ಈ ಹಂತದಲ್ಲಿ ನೀಡಬೇಕಾಗುತ್ತದೆ. ತಮ್ಮೆಲ್ಲಾ ಪಠ್ಯೇತರ ಚಟುವಟಿಕೆಗಳೊಂದಿಗೆ ವಿಧ್ಯಾಭ್ಯಾಸವನ್ನು ಗಂಭೀರವಾಗಿ ವಿದ್ಯಾರ್ಥಿಗಳು ಪರಿಗಣಿಸಬೇಕು ಎಂದು ಜಿ.ಎಸ್.ವಿ.ಎಸ್ ಅಸೋಷಿಯೇಶನ್ನಿನ ಕಾರ‍್ಯದರ್ಶಿ ಹೆಚ್ ಗಣೇಶ್ ಕಾಮತ್ ಅಭಿಪ್ರಾಯಪಟ್ಟರು.
ಅವರು ಇತ್ತೀಚೆಗೆ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಫ್ರೌಢ ಶಾಲೆಯಲ್ಲಿ ನಡೆದ ಉಚಿತ ಸಮವಸ್ತ್ರ ಮತ್ತು ಪುಸ್ತಕ ವಿತರಣೆ ಸಮಾರಂಭದ ಅತಿಥಿ ಸ್ಥಾನದಿಂದ ಮಾತನಾಡಿದರು.
ಜಿ.ಎಸ್.ವಿ.ಎಸ್ ಅಸೋಷಿಯೇಶನ್ನಿನ ಅಧ್ಯಕ್ಷ ಡಾ ಕಾಶೀನಾಥ ಪೈ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮಂಗಳೂರಿನ ಮೇಘನಾ ಗಾರ್ಮೆಂಟ್ಸ್‌ನ ಮನೋಹರ ಮತ್ತು ಮಂಗಳೂರಿನ ಪ್ರೆಸ್ಟೀಜ್ ವೈನ್ಸ್‌ನ ಶ್ರೀನಿವಾಸ ಇವರು ಕೊಡಮಾಡಿದ ಸಮವಸ್ತ್ರ ಮತ್ತು ಪುಸ್ತಕಗಳನ್ನು ಎಂಟನೇ ತರಗತಿಯ ಮಕ್ಕಳಿಗೆ ಉಚಿತವಾಗಿ ವಿತರಿಸಲಾಯಿತು.
ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಕಾರ‍್ಯದರ್ಶಿ ಎನ್ ಸದಾಶಿವ ನಾಯಕ್, ಪ್ರಾಂಶುಪಾಲೆ ಕವಿತಾ ಎಮ್ ಸಿ , ಸರಸ್ವತಿ ವಿದ್ಯಾಲಯ ಫ್ರೌಢ ಶಾಲೆಯ ಸಮಾಜ ವಿಜ್ಞಾನ ಶಿಕ್ಷಕಿ ಶ್ರೀಲತಾ, ಕುಂದಾಪುರ ಸಿ.ಆರ್.ಪಿ ತಿಲೋತ್ತಮೆ ಉಪಸ್ಥಿರಿದ್ದರು. ಉಪ ಪ್ರಾಂಶುಪಾಲ ವಾಮನದಾಸ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಕನ್ನಡ ಅಧ್ಯಾಪಕ ಗೋಪಾಲ ದೇವಾಡಿಗ ಕಾರ‍್ಯಕ್ರಮ ನಿರೂಪಿಸಿದರು. ವಿಜ್ಞಾನ ಶಿಕ್ಷಕ ಆದಿನಾಥ ಕಿಣಿ ವಂದಿಸಿದರು.
ವರದಿ : ನರೇಂದ್ರ ಎಸ್ ಗಂಗೊಳ್ಳಿ.