ಕುಂದಾಪ್ರ ಡಾಟ್ ಕಾಂ ಸುದ್ದಿ
ವಂಡ್ಸೆ: ಜನರಿಗೆ ಸೇವೆಗಳು ಹತ್ತಿರದಲ್ಲಿ ಸಿಗಬೇಕು ಎನ್ನುವ ಉದ್ದೇಶದಿಂದ ವಂಡ್ಸೆಯಲ್ಲಿ ಮೆಸ್ಕಾಂ ಸೆಕ್ಷನ್ ಕಛೇರಿಯನ್ನು ಆರಂಭಿಸಲಾಗುತ್ತಿದೆ. ವಂಡ್ಸೆ ಸೇರಿದಂತೆ ಬೈಂದೂರು ವಿಭಾಗದ ಶಿರೂರು, ನಾವುಂದ, ನಾಡದಲ್ಲಿ ಸೆಕ್ಷನ್ ಕಛೇರಿಯನ್ನು ಉದ್ಘಾಟಿಸಲಾಗಿದೆ ಎಂದು ಬೈಂದೂರು ಕ್ಷೇತ್ರದ ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು.
ಅವರು ವಂಡ್ಸೆ ಪೇಟೆಯ ಹಳೆ ಗ್ರಂಥಾಲಯದ ಹತ್ತಿರ ಮಂಗಳೂರು ವಿದ್ಯುತ್ಛಕ್ತಿ ಸರಬರಾಜು ಕಂಪನಿ ನಿ., ಇದರ ಶಾಖಾಧಿಕಾರಿಯವರ ಕಛೇರಿ ಉಧ್ಘಾಟಿಸಿ ಮಾತನಾಡಿದರು. ಮೆಸ್ಕಾಂ ನಿರ್ದೇಶಕರಾದ ಸಂಪಿಗೇಡಿ ಸಂಜೀವ ಶೆಟ್ಟಿ, ರಿಯಾಜ್ ಆಹಮ್ಮದ್, ಮೆಸ್ಕಾಂ ಎಕ್ಸಿಕ್ಯುಟಿವ್ ಇಂಜಿನಿಯರ್ ಪುಟ್ಟಸ್ವಾಮಿ, ತಾ.ಪಂ.ಸದಸ್ಯ ಉದಯ ಜಿ. ಪೂಜಾರಿ, ರಾಜು ದೇವಾಡಿಗ, ವಂಡ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ಮೆಸ್ಕಾಂನ ಎಇಇ ಯಶವಂತ್, ಜೆಇ ರಾಜೇಶ, ಅಸಿಸೆಂಟ್ ಇಂಜಿನಿಯರ್ ವಿಜಯಕುಮಾರ್, ತಾ.ಪಂ.ಮಾಜಿ ಸದಸ್ಯರಾದ ಎಚ್.ಮಂಜಯ್ಯ ಶೆಟ್ಟಿ, ರಮೇಶ ಗಾಣಿಗ ಕೊಲ್ಲೂರು, ಕೊಲ್ಲೂರು ದೇವಳದ ಮಾಜಿ ಧರ್ಮದರ್ಶಿ ವಂಡಬಳ್ಳಿ ಜಯರಾಮ ಶೆಟ್ಟಿ, ಗ್ರಾ.ಪಂ.ಉಪಾಧ್ಯಕ್ಷರಾದ ಶಾರದಾ ರುದ್ರಯ್ಯ ಆಚಾರ್, ಸದಸ್ಯರಾದ ಗುಂಡು ಪೂಜಾರಿ, ಉದಯ ಕೆ.ನಾಯ್ಕ್, ಮಲ್ಲಿಕಾ, ಸಿಂಗಾರಿ ಪೂಜಾರಿ, ಲಕ್ಷ್ಮೀ, ಗ್ರಾ.ಪಂ.ಮಾಜಿ ಅಧ್ಯಕ್ಷರಾದ ವಿ.ಕೆ ಶಿವರಾಮ ಶೆಟ್ಟಿ, ಶ್ರೀನಿವಾಸ ಪೂಜಾರಿ, ಕರ್ಕುಂಜೆ ಗ್ರಾ.ಪಂ.ಅಧ್ಯಕ್ಷ ರವಿದಾಸ್ ಗುಡ್ರಿ, ವಂಡ್ಸೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ವಿದ್ಯುತ್ ಗುತ್ತಿಗೆದಾರರಾದ ನಿತ್ಯಾನಂದ ಶೆಟ್ಟಿ, ವಂಡ್ಸೆ ಮಾದರಿ ಶಾಲೆ ಎಸ್.ಡಿ.ಎಂಸಿ ಅಧ್ಯಕ್ಷ ಚಂದ್ರ ರಾಯಪ್ಪನಡಿ, ನರಸಿಂಹ ದೇವಾಡಿಗ ನಾವುಂದ, ಹಿರಿಯರಾದ ನೈಲಾಡಿ ಶಿವರಾಮ ಶೆಟ್ಟಿ, ಗ್ರಾ.ಪಂ.ಪಿಡಿಓ ಹೆಚ್.ವಿ. ಇಬ್ರಾಹೀಂಪುರ್ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ೬ ಮಂದಿ ಬಸವ ವಸತಿ ಯೋಜನೆಯ ಫಲಾನುಭವಿಗಳಿಗೆ ಆದೇಶ ಪತ್ರ ವಿತರಿಸಲಾಯಿತು. ಗ್ರಾ.ಪಂ.ಅಧ್ಯಕ್ಷರಾದ ಉದಕುಮಾರ್ ಶೆಟ್ಟಿ ವಂದಿಸಿದರು.