ಕುಂದಾಪುರ: ಆರ್‌ಟಿಐ ಕಾಯ್ದೆ ನಿರ್ಲಕ್ಷ್ಯಿಸಿದ್ದ ತಹಶೀಲ್ದಾರರ ಸಂಬಳ ಕಡಿತ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಆರ್‌ಟಿಐ ಕಾಯ್ದೆಯಡಿ ಮಾಹಿತಿ ಕೋರಿದ್ದ ಮಹಿಳೆಯೋರ್ವರಿಗೆ ಮಾಹಿತಿ ನೀಡದೇ ಕರ್ತವ್ಯಲೋಪವೆಸಗಿದ್ದ ಕುಂದಾಪುರ ತಹಶೀಲ್ದಾರ್ ಗಾಯತ್ರಿ ನಾಯ್ಕ್ ಅವರ ನಿಲುವನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಮಾಹಿತಿ ಹಕ್ಕು ಆಯೋಗ, ಅವರಿಗೆ ಹತ್ತು ಸಾವಿರ ರೂ. ದಂಡ ವಿಧಿಸಿವ ಮೂಲಕ ಕರ್ತವ್ಯಲೋಪವೆಸಗುವ ಅಧಿಕಾರಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ.

Call us

Click Here

ಏನಿದು ಪ್ರಕರಣ?
ಕುಂದಾಪುರದ ಮಹಿಳೆಯೊಬ್ಬರು ಭೂಮಿಯೊಂದಕ್ಕೆ ಸಂಬಂಧಿಸಿದಂತೆ ಮಾಹಿತಿ ಹಕ್ಕಿನ ಕಾಯ್ದೆಯಡಿಯಲ್ಲಿ ಕೇಳಿದ್ದ ಮಾಹಿತಿಗೆ ಸ್ಪಂದಿಸದ ಕುಂದಾಪುರ ತಹಸೀಲ್ದಾರ್ ವಿರುದ್ದ ಕರ್ನಾಟಕ ಮಾಹಿತಿ ಹಕ್ಕು ಆಯೋಗಕ್ಕೆ ಅಂತಿಮವಾಗಿ ದೂರು ನೀಡಿಲಾಗಿತ್ತು. ಇದರಂತೆ 2015 ಫೆ11ರಂದು ವಿಚಾರಣೆಗೆ ಹಾಜರಾಗುವಂತೆ ಕುಂದಾಪುರ ತಹಸೀಲ್ದಾರ್ ಅವರಿಗೆ ಅಯೋಗ ಸೂಚಿದ್ದರೂ ಅವರು ಗೈರಾಗಿದ್ದು ಮತ್ತೊಮ್ಮೆ ಕೇಳಿದ ಮಾಹಿತಿ ಅಂಚೆ ಮೂಲಕ ರವಾನಿಸಿ ವರದಿ ನೀಡುವಂತೆ ಆಯೋಗ ಸೂಚಿಸಿತ್ತು.

ಅರ್ಜಿದಾರರಿಗೆ ಮಾಹಿತಿ ನೀಡದ ಕಾರಣ ಏಕೆ ದಂಡ ವಿಧಿಸಬಾರದು ಎಂದು ಲಿಖಿತವಾಗಿ ಕೇಳಿದ್ದು, ಲಿಖಿತ ಸಮಜಾಯಿಸಿ ಮುಂದಿನ ವಿಚಾರಣೆ ವೇಳೆ ನೀಡುವಂತೆ ಆಯೋಗ ಕೇಳಿತ್ತು. ಆದರೆ ಗಾಯತ್ರಿ ನಾಯ್ಕ್ ಆಯೋಗದ ಯಾವುದೇ ಪ್ರಶ್ನೆಗೂ ಉತ್ತರಿಸದ ಕಾರಣ ಮಾಹಿತಿ ಹಕ್ಕು ಆಯೋಗ ದಂಡ ವಿಧಿಸಿದೆ. 2016ರ ಮೇ ಮತ್ತು ಜೂನ್ ತಿಂಗಳ ಸಂಬಳ ಪಾವತಿಸುವ ಸಂದರ್ಭದಲ್ಲಿ ತಲಾ 5 ಸಾವಿರದಂತೆ ಒಟ್ಟು ಹತ್ತು ಸಾವಿರ ಕಡಿತ ಮಾಡಿ ಸರ್ಕಾರದ ಲೆಕ್ಕ ಶೀರ್ಷಿಕೆ ಖಾತೆಗೆ ಜಮಾ ಮಾಡಿ, ರಶೀದಿಯೊಂದಿಗೆ ವರದಿ ನೀಡುವಂತೆ ಉಡುಪಿ ಜಿಲ್ಲಾಧಿಕಾರಿ ಡಾ.ಆರ್.ವಿಶಾಲ್ ಅವರಿಗೆ ಆಯೋಗ ನಿರ್ದೇಶಿಸಿದೆ.

ಒಟ್ಟಿನಲ್ಲಿ ತಹಶಿಲ್ದಾರರಿಗೆ ದಂಡ ವಿಧಿಸಿದ ಪ್ರಕರಣವು, ಸಾರ್ವಜನಿಕರು ಮಾಹಿತಿ ಹಕ್ಕಿನ ಮೂಲಕ ಸಲ್ಲಿಸಲಾಗುವ ಅರ್ಜಿಗಳ ಬಗ್ಗೆ ಉಡಾಫೆ ತೋರುವ ಅಧಿಕಾರಿಗಳಿಗೆ ಆಯೋಗ ಸ್ಪಷ್ಟ ಎಚ್ಚರಿಕೆಯನ್ನು ನೀಡಿದ್ದು, ಅಧಿಕಾರಿಗಳು ಸಾರ್ವಜನಿಕರ ಅಹವಾಲುಗಳಿಗೆ ಸ್ಪಂದಿಸಲಿ ಎಂಬ ಸಂದೇಶ ರವಾನಿಸಿದೆ.

Leave a Reply