ಪಿಯುಸಿ ಕಾಮರ್ಸ್ ವಿಭಾಗದ ವಿದ್ಯಾರ್ಥಿಗಳಿಗಾಗಿಯೇ ಅಕೌಂಟೆನ್ಸಿ ವಿಷದಲ್ಲಿ ಗುಣಮಟ್ಟದ ತರಬೇತಿಯನ್ನು ನೀಡುತ್ತಿರುವ ಬೈಂದೂರು ಯಡ್ತರೆಯ ಯಸ್ಕೋರ್ಡ್ ಕೋಚಿಂಗ್ ಕ್ಲಾಸಸ್ ಕಳೆದ ಹನ್ನೊಂದು ವರ್ಷಗಳಿಂದ ನೂರಾರು ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಾ ಸದ್ದಿಲ್ಲದೇ ಹೆಸರು ಮಾಡಿದೆ.
ಮೊದಲು ಎಸ್.ಎಸ್.ಎಲ್.ಸಿ ಯಿಂದ ಆರಂಭಗೊಂಡು ಪಿಯುಸಿ ಹಾಗೂ ಡಿಗ್ರಿ ವಿದ್ಯಾರ್ಥಿಗಳಿಗೆ ಗಣಿತ, ಲೆಕ್ಕಶಾಸ್ತ್ರದ ವಿಷಯಗಳಿಗಾಗಿಯೇ ತಗರತಿಗಳನ್ನು ಆರಂಭಿಸಿದ ಸಂಸ್ಥೆ, ಕ್ಲಿಷ್ಟವೆಂಬ ಗಣಿತ, ಲೆಕ್ಕಶಾಸ್ತ್ರದ ವಿಷಯಗಳನ್ನು ಸುಲಭವಾಗಿ ಅರಹುವ ಮೂಲಕ ನೂರಾರು ವಿದ್ಯಾರ್ಥಿಗಳ ಆಶಾಕಿರಣವಾಗಿ ನಿಂತಿದೆ.
ದುಡ್ಡು ಮಾಡುವ ದಂದೆಗಿಳಿದು ಶಿಕ್ಷಣವನ್ನು ವ್ಯಾಪಾರಿಕರಣಗೊಳ್ಳುತ್ತಿರುವ ಇಂದಿನ ದಿನಮಾನಗಳಲ್ಲಿ, ಖಾಸಗಿ ತರಬೇತಿಗಳನ್ನು ನಡೆಸುತ್ತಿರುವುದನ್ನು ಎಲ್ಲಿಯೂ ಪ್ರಚುರ ಪಡಿಸದೇ ಕೇವಲ ತನ್ನ ಹವ್ಯಾಸಕ್ಕಾಗಿ ಎಂ.ಕಾಂ ಪದವೀಧರರಾಗಿರುವ ನಾಗರಾಜ ಪಿ. ಯಡ್ತರೆ ಆರಂಭಿಸಿದ ಈ ಸಂಸ್ಥೆ ಇಂದಿಗೂ ವಿದ್ಯಾರ್ಥಿಗಳ ಬಾಳು ಬೆಳಗಿತ್ತಿದೆ. ಅತಿ ಕಡಿಮೆ ಶುಲ್ಕದಲ್ಲಿ, ನಿಯಮಿತವಾದ ವಿದ್ಯಾರ್ಥಿಗಳಿಗಷ್ಟೇ ತರಗತಿಗಳನ್ನು ನಡೆಸುತ್ತಾ ಬರುತ್ತಿದ್ದಾರೆ. ಎಷ್ಟೋ ಬಾರಿ ಬಡ ವಿದ್ಯಾರ್ಥಿಗಳಿಗೆ ಇಲ್ಲಿ ಪ್ರವೇಶಾತಿ ಶುಲ್ಕವೆಂಬುದು ಶೂನ್ಯವಾದದ್ದು ಇದೆ. ತರಗತಿಯೂ ಅಷ್ಟೇ ಶಿಸ್ತಿನಿಂದ, ವಿದ್ಯಾರ್ಥಿಗಳಿಗೂ ಅರ್ಥವಾಗುವಂತೆ ನಡೆಸಿಕೊಂಡು ಬರುತ್ತಿದ್ದಾರೆ ಎಂಬುದು ಇಲ್ಲ ಕಲಿತ ಎಲ್ಲಾ ವಿದ್ಯಾರ್ಥಿಗಳೂ ಅಭಿಪ್ರಾಯ ಪಡುತ್ತಾರೆ. ಪ್ರತಿ ವರ್ಷ ಅತ್ಯಧಿಕ ಅಂಕಗಳಿಸಿದವರಿಗೆ, ಎಲ್ಲಾ ತರಗತಿಯಲ್ಲಿ ಹಾಜರಾದವರಿಗೆ ಬಹುಮಾನಗಳನ್ನು ನೀಡುವ ಪರಿಪಾಠ ಮೊದಲಿನಿಂದಲೂ ಬೆಳೆದು ಬಂದಿದೆ. ಇತ್ತಿಚಿನ ವರ್ಷಗಳಲ್ಲಿ ನೂರಾರು ಪ್ರವೇಶಾತಿಗಳು ಬರುತ್ತಿದ್ದರೂ, ಸದ್ಯ ಪಿಯುಸಿ ಕಾಮರ್ಸ್ ವಿಭಾಗದ ನಿಗದಿತ ಸಂಖ್ಯೆಯ ವಿದ್ಯಾರ್ಥಿಗಳಿಗಷ್ಟೇ ತರಗತಿ ನಡೆಸುತ್ತಿದ್ದಾರೆ.
ಓದು ಎಂಬುದು ಉದ್ಯೋಗಕ್ಕಾಗಿ ಮಾತ್ರವಲ್ಲ. ಜ್ಞಾನ ಸಂಪಾದನೆಯೂ ಅಷ್ಟೇ ಮುಖ್ಯ ಎಂಬುದನ್ನು ಗಣಿತ, ಲೆಕ್ಕಶಾಸ್ತ್ರದ ಅಧ್ಯಯನಕ್ಕಾಗಿ ಬರುವ ವಿದ್ಯಾರ್ಥಿಗಳಿಗೆ ಅರುವುವಲ್ಲಿ ಕಳೆದ ಹತ್ತು ವರ್ಷಗಳಲ್ಲಿ ನಾಗರಾಜ ಪಿ. ಯಡ್ತರೆಯವರು ಯಶಸ್ವಿಯಾಗಿದ್ದಾರೆ ಮಾತ್ರವಲ್ಲ ಅವರು ತಮಗೆ ಲೆಕ್ಕಶಾಸ್ತ್ರವನ್ನಷ್ಟೇ ಕಲಿಸುವ ಗುರುವಾಗಿ ಉಳಿಯದೇ ಹಲವಾರು ವಿದ್ಯಾರ್ಥಿಗಳಿಗೆ ಬದುಕಿನ ದಾರಿ ತೋರಿದ ಯಶಸ್ವೀ ಗುರುವಾಗಿಯೂ ಜನಮಾನಸದಲ್ಲಿ ಮಾದರಿಯಾಗಿ ಉಳಿಯುತ್ತಾರೆ. /ಕುಂದಾಪ್ರ ಡಾಟ್ ಕಾಂ/