ಕಲಾ ಪ್ರಕಾರಗಳಿಂದ ಮಕ್ಕಳ ಬೌದ್ಧಿಕ ವಿಕಾಸ: ಗೌರಿ ದೇವಾಡಿಗ

Call us

Call us

Call us

ಕುಂದಾಪ್ರ ಡಾಟ್ ಕಂ ಸುದ್ದಿ.
ಬೈಂದೂರು: ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ಚಟುವಟಿಕೆಗಳಿಗೆ ಮಾತ್ರವೇ ಸೀಮಿತವಾಗಿರದೇ ಮಕ್ಕಳಲ್ಲಿನ ಸೃಜನಾತ್ಮಕ ಕಲೆಗಳನ್ನು ಅರಳಿಸುವ ಕಾರ್ಯ ಮಾಡಬೇಕು. ಕಲೆ, ಸಾಹಿತ್ಯ, ಕ್ರೀಡೆ ಸೇರಿದಂತೆ ಮಕ್ಕಳ ಆಸಕ್ತಿಯ ಕ್ಷೇತ್ರಗಳಗನುಗುಣವಾಗಿ ಪ್ರೋತ್ಸಾಹ ದೊರೆತಾಗಿ ಶಿಕ್ಷಣದೊಂದಿಗೆ ಶೈಕ್ಷಣೇತರ ಕ್ಷೇತ್ರದಲ್ಲಿ ಪರಿಣತಿ ಸಾಧಿಸುತ್ತಾರೆ ಎಂದು ಜಿ.ಪಂ ಸದಸ್ಯ ಗೌರಿ ದೇವಾಡಿಗ ಹೇಳಿದರು.

Call us

Click Here

ಯಸ್ಕೋರ್ಡ್ ಟ್ರಸ್ಟ್ ರಿ. ಬೈಂದೂರು ಆಶ್ರಯದಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ನೆರವಿನೊಂದಿಗೆ ಹೆರಂಜಾಲು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಜರುಗಿದ ಜನ-ಸಂಸ್ಕೃತಿ ಸಂಭ್ರಮ 2016ರ ವರ್ಣಚಿತ್ರವೈಭವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಚಿತ್ರಕಲೆಗೆ ವಿಶೇಷವಾದ ಶಕ್ತಿ ಇದೆ. ಎಂತವರನ್ನೂ ಒಂದು ಕ್ಷಣ ಆಕರ್ಷಿಸುವ ಕಲೆಗಳಲ್ಲಿ ಪರಿಣತಿ ಸಾಧಿಸಲು ಸೂಕ್ತ ಮಾರ್ಗದರ್ಶವೂ ಅಗತ್ಯ. ಮಕ್ಕಳಿಗೆ ಇಂತಹ ಶಿಬಿರಗಳನ್ನು ಆಯೋಜಿಸಿ ತರಬೇತಿ ನೀಡುತ್ತಿರುವುದು ಅವರಲ್ಲಿನ ಸೃಜಶೀಲತೆಗೆ ಪ್ರೋತ್ಸಾಹ ನೀಡಿದಂತಾಗುವುದು ಎಂದು ಹೇಳಿದರು.

ಕಂಬದಕೋಣೆ ಗ್ರಾಪಂ ಅಧ್ಯಕ್ಷ ರಾಜೇಶ್ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಹೆರಂಜಾಲು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಭಾರ ಪ್ರಾಂಶುಪಾಲೆ ಕಮಲಾ ಮಂಜುನಾಥ ನಾಯ್ಕ್, ಶಿಕ್ಷಕಿಯರಾದ ದಾಕ್ಷಾಯಿಣಿ, ದೀಪಾ ಶೆಟ್ಟಿ, ವಾರ್ಡನ್ ರೇವಣ ಸಿದ್ಧಯ್ಯ, ಕೋಟೇಶ್ವರ ಸರಕಾರಿ ಜ್ಯೂನಿಯರ್ ಕಾಲೇಜಿನ ಚಿತ್ರಕಲಾ ಶಿಕ್ಷಕ ಭೋಜು ಹಾಂಡ ಮೊದಲಾದವರು ಉಪಸ್ಥಿತರಿದ್ದರು. ಯಡ್ಕೋರ್ಡ್ ಟ್ರಸ್ಟ್ ರಿ. ಕಾರ್ಯದರ್ಶಿ ಕೃಷ್ಣಮೂರ್ತಿ ಉಡುಪ ಸ್ವಾಗತಿಸಿದರು. ಅಧ್ಯಕ್ಷ ಸುಧಾಕರ ಪಿ. ಬೈಂದೂರು ನಿರೂಪಿಸಿ, ಧನ್ಯವಾದಗೈದರು.

Leave a Reply