ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕು ಗಾಣಿಗ ಸೇವಾ ಸಂಘ ಹಾಗೂ ಸಮಾಜ ಬಾಂದವರ ಸಹಕಾರದಲ್ಲಿ ಕುಂದಾಪುರ ನವೀಕರಣಗೊಂಡ ಶ್ರೀ ವ್ಯಾಸರಾಜ ಮಠದ ಉದ್ಘಾಟನೆ ಹಾಗೂ ಧಾರ್ಮಿಕ ಸಭೆ ಮoದ ವೇದಿಕೆಯಲ್ಲಿ ಜರುಗಿತು. ಕುಂದಾಪುರ ಶ್ರೀ ವ್ಯಾಸರಾಜ ಮಠ ಶ್ರೀ ಲಕ್ಷ್ಮೀಂದ್ರತೀರ್ಥ ಸ್ವಾಮೀಜಿ ದಾನಿಗಳನ್ನು ಸನ್ಮಾನಿಸಿ ಬಳಿಕ ಅಶೀರ್ವಚನ ನೀಡಿದರು.
ಕುಂದಾಪುರ ತಾಲೂಕು ಗಾಣಿಗ ಸಂಘ ಅಧ್ಯಕ್ಷ ಶ್ರೀನಿವಾಸ ಗಾಣಿಗ ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಶ್ರೀ ಗುರುಮಠ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದರೇ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಗಾಣಿಗ ಸಮಾಜದ ಸಾಕ್ಷಿಚಿತ್ರ ಬಿಡುಗಡೆ ಮಾಡಿದರು.
ಉದ್ಯಮಿಗಳಾದ ಕೆ.ಎಂ.ರಾಮ, ಸುಧೀರ್ ಪಂಡಿತ್, ನೀಲಾವರ ಸಂಜೀವ ರಾವ್, ಬಿ.ಎ.ನರಸಿಂಹಮೂರ್ತಿ, ಜಿ.ಆರ್.ಚಂದ್ರಯ್ಯ, ಎಚ್.ಸುಬ್ಬಯ್ಯ, ವಿಜಯೇಂದ್ರ, ಬಿ.ವಿ.ರಾವ್, ಶ್ರೀಧರ ಗಾಣಿಗ ಗಂಗೊಳ್ಳಿ, ಬೆಂಗಳೂರು ಸೋಮಕ್ಷತ್ರಿಯ ಗಾಣಿಗ ಸಮಾಜ ಅಧ್ಯಕ್ಷ ಎಚ್.ಟಿ.ನರಸಿಂಹ, ಗೌರವಾಧ್ಯಕ್ಷ ಬಿ.ಎಸ್.ಮಂಜುನಾಥ, ಮುಂಬೈ ಗಾಣಿಗ ಸಂಘ ಅಧ್ಯಕ್ಷ ಜಗನ್ನಾಥ ಎಂ.ಗಾಣಿಗ, ಶಿವಮೊಗ್ಗ ಗಾಣಿಗ ಸೇವಾ ಸಂಘ ಅಧ್ಯಕ್ಷ ನಾಗರಾಜ, ಭದ್ರಾವತಿ ಗಾಣಿಗ ಸಂಘ ಅಧ್ಯಕ್ಷ ರಂಗಯ್ಯ, ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಂಘ ಬಾರಕೂರು ಅಧ್ಯಕ್ಷ ಕೆ.ಗೋಪಾಲ, ಬೆಂಗಳೂರು ವೇಣುಗೋಪಾಲ ಕ್ರೆಡಿಟ್ ಕೋಆಪರೇಟಿವ್ ಸೋಸೈಟಿ ಅಧ್ಯಕ್ಷ ಎಂ.ಗೋಪಾಲಕೃಷ್ಣ, ಮಂಗಳೂರು ಗಾಣಿಗ ಸಂಘ ಅಧ್ಯಕ್ಷ ವಿಶ್ವಾಸ್ ದಾಸ್, ಜಿ.ಗೋಪಾಲ್ ಗಂಗೊಳ್ಳಿ ಇದ್ದರು.
ಇದೇ ಸಂದರ್ಭದಲ್ಲಿ ರಾಜ್ಯಪಾಲ ಪ್ರಶಸ್ತಿ ಪುರಸ್ಕೃತ ಕೊಗ್ಗ ಗಾಣಿಗ, ವ್ಯಾಸರಾಜ ಮಠ ವಿನ್ಯಾಸಗಾರ ಕೆ.ರಮಾನಂದ, ಸಮಾಜ ಸೇವಕ ಕೆ.ಗೋವರ್ದನ್ ಅವರನ್ನು ಸನ್ಮಾನಿಸಲಾಯಿತು. ಒಂದು ಲಕ್ಷಕ್ಕೂ ಮೀರಿ ದೇಣಿಗೆ ನೀಡಿದ ದಾನಿಗಳು ಅಭಿನಂದಿಸಲಾಯಿತು. ೫೦ ಸಾವಿರಕ್ಕೂ ಮಿಕ್ಕ ದಾನ ಮಾಡಿದ ದಾನಿಗಳ ಗೌರವಿಸಲಾಯಿತು.
ಉದ್ಯಮಿ ಕೆ.ಎಂ. ಲಕ್ಷ್ಮಣ ಪ್ರಾಸ್ತಾವಿಕ ಮಾತನಾಡಿದರು. ಆಯೇಸ್ ಪ್ರಾರ್ಥಿಸಿದರು. ಗಾಣಿಗ ಸಂಘ ಪ್ರಧಾನ ಕಾರ‍್ಯದರ್ಶಿ ಜಿ.ಶಿವಾನಂದ ರಾವ್ ಸ್ವಾಗತಿಸಿದರು. ಶೇಖರ್ ಹುಳಿಮಾವು ನಿರೂಪಿಸಿದರು. ಮಧ್ಯಾಹ್ನ ಮಹಾ ಅನ್ನಸಂತರ್ಪಣೆ, ಹವ್ಯಾಸಿ ಕಲಾವಿದರಿಂದ ಶಿವ ಪಂಚಾಕ್ಷರಿ ಮಹಿಮೆ ಯಕ್ಷಗಾನ ಜರುಗಿತು. ಸ್ವಾಮೀಜಿ ಅವರನ್ನು ಭವ್ಯ ಪುರಮೆರವಣಿಗೆ ಮೂಲಕ ಶ್ರೀ ವ್ಯಾಸರಾಜ ಮಠಕ್ಕೆ ಕರೆತರಲಾಗಿತ್ತು.