ಸರಸ್ವತಿ ವಿದ್ಯಾಲಯದಲ್ಲಿ ಎನ್ನೆಸ್ಸೆಸ್ ಚಟುವಟಿಕೆಗಳ ಉದ್ಘಾಟನೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಎಚ್ಚರ ಸದಾ ಇರಬೇಕು. ಸಮಾಜದ ವಿವಿಧ ಅಗತ್ಯತೆಗಳಿಗೆ ತೆರದುಕೊಳ್ಳಬಲ್ಲ ನೈತಿಕ ಮತ್ತು ವೈಜ್ಞಾನಿಕ ಮನೋಭಾವನೆಯನ್ನು ರೂಢಿಸಿಕೊಳ್ಳಬೇಕು ಎಂದು ಬಸ್ರೂರು ಶಾರದಾ ಪದವಿ ಕಾಲೇಜಿನ ಪ್ರಾಂಶುಪಾಲ ರಾಧಾಕೃಷ್ಣ ಶೆಟ್ಟಿ ಅಭಿಪ್ರಾಯಪಟ್ಟರು.

Call us

Click Here

ಅವರು ಗಂಗೊಳ್ಳಿಯ ರೋಟರಿ ಸಭಾಂಗಣದಲ್ಲಿ ನಡೆದ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಪ್ರಸಕ್ತ ಶೈಕ್ಷಣಿಕ ವರುಷದ ವಾರ್ಷಿಕ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.

ರಾಷ್ಟ್ರೀಯತೆ, ಪ್ರಜಾಸತ್ತಾತ್ಮಕತೆ, ಜಾತ್ಯತೀತತೆ ಎಲ್ಲದರ ಮಹತ್ವವನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ನನಗಲ್ಲ ನಿನಗೆ ಎನ್ನುವ ಎನ್ನೆಸ್ಸಿಸ್ಸಿನ ನುಡಿಗಳನ್ನು ಪಾಲಿಸಬೇಕು. ವಿನಯಶೀಲತೆ ನಮ್ಮದಾಗಬೇಕು ಎಂದು ಅವರು ಹೇಳಿದರು.

ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಮ್ ಸಿ ವಹಿಸಿದ್ದರು. ಜಿ.ಎಸ್.ವಿ.ಎಸ್ ಅಸೋಷಿಯೇಶನ್ ಅಧ್ಯಕ್ಷ ಡಾ. ಕಾಶೀನಾಥ ಪೈ ಶುಭ ಹಾರೈಸಿದರು. ರಾಷ್ಟ್ರೀಯ ಸೇವಾ ಯೋಜನಾ ಘಟಕದ ಮುಖ್ಯಸ್ಥ ನಾರಾಯಣ ಈ ನಾಯ್ಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ರಾಜ್ಯಶಾಸ್ತ್ರ ಪ್ರಾಧ್ಯಾಪಕ ಅರುಣ್ ಕುಮಾರ್ ಅತಿಥಿಗಳನ್ನು ಸ್ವಾಗತಿಸಿದರು. ಘಟಕದ ವಿದ್ಯಾರ್ಥಿ ಪ್ರತಿನಿಧಿಗಳಾದ ವಿಘ್ನೇಶ್ ಮತ್ತು ಸುಪ್ರೀತಾ ಉಪಸ್ಥಿತರಿದ್ದರು. ಸಂಪ್ರೀತಾ, ಸುಪ್ರೀತಾ ಮತ್ತು ಸ್ವಾತಿ ಎನ್ನೆಸ್ಸೆಸ್ ಗೀತೆ ಹಾಡಿದರು.ಇತಿಹಾಸ ಉಪನ್ಯಾಸಕ ಹೆಚ್ ಭಾಸ್ಕರ್ ಶೆಟ್ಟಿ ನಿರೂಪಿಸಿದರು.ವಾಣಿಜ್ಯಶಾಸ್ತ್ರ ಉಪನ್ಯಾಸಕ ರಾಘವೇಂದ್ರ ಭಟ್ ವಂದಿಸಿದರು.

Click here

Click here

Click here

Click Here

Call us

Call us

ವರದಿ : ನರೇಂದ್ರ ಎಸ್ ಗಂಗೊಳ್ಳಿ.

Leave a Reply