ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕರ್ನಾಟಕ ಖಾರ್ವಿ ಯಾನೆ ಹರಿಕಾಂತ ಮಹಾಜನ ಸಂಘ ಉಪ್ಪುಂದ ಇದರ ವಾರ್ಷಿಕ ಮಹಾಸಭೆಯು ಖಂಬದಕೋಣೆ ನಿರ್ಮಾಣ ಹಂತದಲ್ಲಿರುವ ಸಂಸ್ಥೆಯ ಸಭಾಭವನದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ನವೀನ್‌ಚಂದ್ರ ಉಪ್ಪುಂದ ಅಧ್ಯಕ್ಷತೆವಹಿಸಿದ್ದರು. ಇತ್ತೀಚಿಗೆ ನಿಧನರಾದ ಸಮುದಾಯದ ಹಿರಿಯ ಹಾಗೂ ಗೌರವಾನ್ವಿತರಾದ ಟಿ.ಕೆ. ಖಾರ್ವಿಯವರಿಗೆ ಸಭೆಯಲ್ಲಿ ನುಡಿನಮನ ಸಲ್ಲಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮುದಾಯದ ಸಾಧಕರಿಗೆ, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ೨೦೧೫-೧೬ರ ಸಾಲಿನಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಕಾರ್ಯಕಾರಿ ಸಮಿತಿ ಸದಸ್ಯ ಪಿ. ರಾಮದಾಸ್ ಖಾರ್ವಿ ಗತವರ್ಷದ ನಿರ್ಣಯ ಮಂಡಿಸಿದರು. ಕೋಶಾಧಿಕಾರಿ ಮರವಂತೆ ಶಂಕರ ಖಾರ್ವಿ ವರದಿ ವಾಚಿಸಿದರು. ಸಂಘದ ಕಾರ್ಯದರ್ಶಿ ಎ. ಆನಂದ ಖಾರ್ವಿ ಆಯ-ವ್ಯಯವನ್ನು ಮಂಡಿಸಿ ಅನುಮೋದನೆ ಪಡೆದರು. ಪ್ರಸನ್ನ ಕುಮಾರ್ ಸನ್ಮನಿತರ ಪಟ್ಟಿಯನ್ನು ವಾಚಿಸಿದರು. ಉಪಾಧ್ಯಕ್ಷ ಕೊಡೇರಿ ಕೇಶವ ಖಾರ್ವಿ, ಜೊತೆ ಕಾರ್ಯದರ್ಶಿ ಗಣೇಶ ಎಂ.ಕೆ. ಅಳಿವೆಕೋಡಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಮರವಂತೆ ಚಂದ್ರಶೇಖರ ಖಾರ್ವಿ, ಸುಬ್ರಹ್ಮಣ್ಯ ನಾವುಂದ, ಮಹೇಶ ನಾವುಂದ, ಮಂಜುನಾಥ ಜಿ.ಕೊಡೇರಿ, ಮಂಜುನಾಥ ಪಿ. ಗಂಗೇಬೈಲು, ಕುಮಾರ್ ಬಿಎಚ್‌ಕೆ ಉಪ್ಪುಂ, ಸುಬ್ರಹ್ಮಣ್ಯ ಎನ್., ಬಾಬು ಎಂ. ಮಡಿಕಲ್ ಉಪಸ್ಥಿತರಿದ್ದರು. ಮುರಳೀಧರ ಮಡಿಕಲ್ ಸ್ವಾಗತಿಸಿ, ಸುಭಾಷ್ ನಿರೂಪಿಸಿದರು.