ರೋಟರಿಗೆ ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ವಿಶ್ವದಾದ್ಯಂತ ಅಗ್ರಸ್ಥಾನ : ಡಾ. ದೇವದಾಸ ರೈ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಾನವೀಯತೆಗೆ ಒತ್ತುಕೊಟ್ಟು ಮನುಕುಲದ ಕಲ್ಯಾಣಕ್ಕಾಗಿ ದುಡಿಯುತ್ತಿರುವ ರೋಟರಿ ಕ್ಲಬ್ ಜಗತ್ತಿನಾದ್ಯಂತ ನೀಡುತ್ತಿರುವ ಸೇವೆ ಅನನ್ಯವಾದುದು. ಸಾಮಾಜಿಕ ಪರಿಸ್ಥಿತಿಯನ್ನು ಅವಲೋಕಿಸಿ ಅವಶ್ಯಕತೆಯಿರುವ ಸೇವೆಯನ್ನು ಗುರುತಿಸಿ ಅದನ್ನು ಯಶಸ್ವಿಯಾಗಿ ಕಾರ್ಯರೂಪಕ್ಕಿಳಿಸಿದೆ. ವಿಶ್ವದಾದ್ಯಂತ ನಡೆಸಿದ ಪಲ್ಸ್ ಪೋಲಿಯೋ ಆಂದೋಲನದಿಂದಾಗಿ ಇಂದು ಜಗತ್ತು ಪೋಲಿಯೋ ಮುಕ್ತವಾಗಿದೆ. ಇಂತಹ ಸಮಾಜಮುಖಿ ಕಾರ್ಯಕ್ರಮಗಳಿಂದ ರೋಟರಿ ಜನಸ್ನೇಹಿಯಾಗಿದೆ ಎಂದು ಮಾಜಿ ರೋಟರಿ ಜಿಲ್ಲಾ ಗವರ್ನರ್ ಡಾ. ದೇವದಾಸ ರೈ ಹೇಳಿದರು.

Call us

Click Here

ಅವರು ರೋಟರಿ ಕ್ಲಬ್ ಕುಂದಾಪುರದ ಆಶ್ರಯದಲ್ಲಿ ಕೋಟೇಶ್ವರದ ಸಹನಾ ಕನ್‌ವೆನ್ಶನ್ ಸೆಂಟರ್‌ನಲ್ಲಿ ನಡೆದ ಪದಪ್ರದಾನ ಸಮಾರಂಭದಲ್ಲಿ ನೂತನ ಅಧ್ಯಕ್ಷ, ಕಾರ್ಯದರ್ಶಿಗಳಿಗೆ ಪದಪ್ರದಾನ ನೆರವೇರಿಸಿ ಮಾತನಾಡಿದರು. ರೋಟರಿಯು ಯುವಜನರಿಗಾಗಿ ರೋಟರ‍್ಯಾಕ್ಟ್, ಶಾಲಾ ಮಕ್ಕಳಿಗೆ ಇಂಟರ‍್ಯಾಕ್ಟ್‌ನಂತಹ ಸಹ ಸಂಸ್ಥೆಗಳನ್ನು ಆರಂಭಿಸಿ ನಾಯಕತ್ವ, ಸೇವಾಗುಣಗಳನ್ನು ಪ್ರೇರೆಪಿಸುವ ಕಾರ್ಯದಲ್ಲಿ ತೊಡಗಿದೆ. ಪಲ್ಸ್ ಪೋಲಿಯೋದ ಯಶಸ್ಸಿನ ಬಳಿಕ ಜಗತ್ತಿನಾದ್ಯಂದ ಸಾಕ್ಷರತೆಗೆ ಆಧ್ಯತೆ ನೀಡಿದೆ. ತನ್ಮೂಲಕ ಸೇವೆಗೆ ನೂತನ ಭಾಷ್ಯ ಬರೆದು ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ವಿಶ್ವದಾದ್ಯಂತ ಅಗ್ರಸ್ಥಾನವನ್ನು ಹೊಂದಿದೆ ಎಂದರು.

ರೋಟರಿ ನೂತನ ಅಧ್ಯಕ್ಷರಾಗಿ ಉದಯಕುಮಾರ್ ಶೆಟ್ಟಿ, ಕಾರ್ಯದರ್ಶಿಯಾಗಿ ಶಶಿಧರ ಶೆಟ್ಟಿ ಸಾಲಗದ್ದೆ ಅವರು ಅಧಿಕಾರ ಸ್ವೀಕರಿಸಿದರು. ಪದಾಧಿಕಾರಿಗಳಿಗೆ ಪ್ರಮಾಣ ವಚನ ಭೋದಿಸಲಾಯಿತು. ರೋಟರಿ ವಲಯ ೧ರ ಅಸಿಸ್ಟೆಂಟ್ ಗವರ್ನರ್ ಮಧುಕರ ಹೆಗ್ಡೆ ಅವರು ಅಕಾರ್ಡ್ ಬುಲೆಟಿನ್ ಬಿಡುಗಡೆಗೊಳಿಸಿ, ಶುಭಹಾರೈಸಿದರು. ಜೋನಲ್ ಲೆಫ್ಟಿನೆಂಟ್ ಡಾ. ರವಿಕಿರಣ್, ನಿಕಟಪೂರ್ವಾಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಹಿರಿಯ ರೋಟರಿ ಸದಸ್ಯರನ್ನು ಗೌರವಿಸಲಾಯಿತು. ನೂತನ ಸದಸ್ಯರಾಗಿ ವಂಡಬಳ್ಳಿ ಜಯರಾಮ ಶೆಟ್ಟಿ, ತೊಂಭತ್ತು ಸೀತಾರಾಮ ಶೆಟ್ಟಿ, ಕೊಂಕಣ ರೈಲ್ವೆಯ ಅಧಿಕಾರಿ ರಾಜೇಶ್ ಶೆಟ್ಟಿ, ಕಾರ್ಪೂರೇಶನ್ ಬ್ಯಾಂಕ್ ಕುಂದಾಪುರ ಶಾಖೆ ಚೀಫ್ ಮೆನೇಜರ್ ವಸಂತ ಶೆಟ್ಟಿ, ಕರ್ನಾಟಕ ಬ್ಯಾಂಕ್ ಕುಂದಾಪುರ ಶಾಖೆಯ ಚೀಫ್ ಮೆನೇಜರ್ ರಮೇಶ್ ವೈದ್ಯ, ನ್ಯಾಯವಾದಿ ಕುಸುಮಾಕರ ಶೆಟ್ಟಿ ಚಿತ್ತೂರು, ಉದ್ಯಮಿ ಪ್ರಕಾಶ್ ಕೆ. ಆರ್. ಸೇರ್ಪಡೆಗೊಂಡರು. ನಿಕಟಪೂರ್ವ ಕಾರ್ಯದರ್ಶಿ ಸಂತೋಷ ಕೋಣಿ ವರದಿ ವಾಚಿಸಿದರು. ರೋಟರಿ ಸದಸ್ಯರಾದ ಎ.ಪಿ.ಮಿತಂತಾಯ, ಗೋಪಾಲ ಶೆಟ್ಟಿ, ಡಾ. ರಾಜರಾಮ ಶೆಟ್ಟಿ, ಎಚ್. ಎಸ್. ಹತ್ವಾರ್ ಪರಿಚಯಿಸಿದರು. ಪರಮೇಶ್ವರ ಹೆಗಡೆ, ಪ್ರವೀಣಕುಮಾರ್ ಟಿ, ಮನೋಜ್ ನಾಯರ್, ಉಷಾ ಕೆ.ಸಿ. ಶೆಟ್ಟಿ ಸಹಕರಿಸಿದರು. ಕಾರ್ಯದರ್ಶಿ ಶಶಿಧರ ಶೆಟ್ಟಿ ಸಾಲಗದ್ದೆ ವಂದಿಸಿದರು.

????????????????????????????????????
????????????????????????????????????

Leave a Reply