ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ಉಪ ವಿಭಾಗದ ನೂತನ ಡಿವೈಎಸ್‌ಪಿ ಆಗಿ ಪ್ರವೀಣ ಎಚ್. ನಾಯಕ್ ಮಂಗಳವಾರ ಸಂಜೆ ಅಧಿಕಾರ ಸ್ವೀಕರಿಸಿದರು. ಕುಂದಾಪುರದಲ್ಲಿ ಡಿವೈಎಸ್‌ಪಿಯಾಗಿ ಸೇವೆ ಸಲ್ಲಿಸಿ ಶಿವಮೊಗ್ಗಕ್ಕೆ ವರ್ಗಾವಣೆಗೊಂಡಿರುವ ಮಂಜುನಾಥ ಶೆಟ್ಟಿ ಅಧಿಕಾರ ಹಸ್ತಾಂತರಿಸಿ ಶುಭಕೋರಿದರು.
ನೂತನ ಡಿವೈಎಸ್‌ಪಿ ಯಾಗಿ ಅಧಿಕಾರ ಸ್ವೀಕರಿಸಿರುವ ಪ್ರವೀಣ್ ಎಚ್ ನಾಯಕ್ ಅವರ ಮೂಲತಃ ಕೊಪ್ಪದವರಾಗಿದ್ದು ಬಿಕಾಂ, ಎಲ್.ಎಲ್,ಬಿ, ಎಂಎ ಪದವಿಧರರು. ಕೋಲಾರ ಜಿಲ್ಲೆಯ ಮುಳಬಾಗಿಲುವಿನಲ್ಲಿ ಎಸ್.ಐ ಆಗಿ ವೃತ್ತಿ ಜೀವನ ಆರಂಭಿಸಿ, ಬೆಂಗಳೂರು ಜಿಲ್ಲೆಯ ರಾಮನಗರ, ಮಂಗಳೂರು ಟೌನ್, ಮಂಗಳೂರು ಸಂಚಾರ ಪೊಲೀಸ್ ಠಾಣೆ, ಬಜ್ಪೆ, ಪಣಂಬೂರು, ಸುಳ್ಯ, ಉಡುಪಿ ಟೌನ್, ಉಡುಪಿ ವೃತ್ತ, ಕಾಪು, ಮಣಿಪಾಲಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇಂಟೆಲಿಜೆನ್ಸ್, ಸ್ಪೇಷಲ್ ಬ್ರಾಂಚ್‌ಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಶಾಂತಿ ಸುವ್ಯವಸ್ಥೆಗೆ ಪ್ರಥಮ ಆದ್ಯತೆ ನೀಡುವುದಲ್ಲದೇ ಕಳ್ಳತನ, ಅಪರಾಧ ಕೃತ್ಯಗಳನ್ನು ತಡೆಯುವುಲ್ಲಿ ಶೃದ್ದಾಪೂರ್ವಕ ಕರ್ತವ್ಯ ನಿರ್ವಹಿಸುತ್ತೇನೆ ಎಂದಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ಈ ಸಂದರ್ಭದಲ್ಲಿ ಬೈಂದೂರು ಠಾಣಾಧಿಕಾರಿ ಸಂತೋಷ್ ಕಾಯ್ಕಿಣಿ, ಗಂಗೊಳ್ಳಿ ಠಾಣಾಧಿಕಾರಿ ಸುಬ್ಬಣ್ಣ, ಕುಂದಾಪುರ ಠಾಣಧಿಕಾರಿ ನಾಸಿರ್ ಹುಸೇನ್, ಅಮಾಸೆಬೈಲು ಠಾಣಾಧಿಕಾರಿ ಸುನಿಲ್ ಕುಮಾರ್, ಟ್ರಾಫಿಕ್ ಎಸೈ ದೇವೇಂದ್ರ ಮೊದಲಾದವರು ಉಪಸ್ಥಿತರಿದ್ದರು/ಕುಂದಾಪ್ರ ಡಾಟ್ ಕಾಂ ಸುದ್ದಿ/