ಶ್ರೀ ಯಾದವೇಂದ್ರ ಆಯುರ್ವೇದ ವೈದ್ಯಶಾಲಾ ಲೋಕಾರ್ಪಣೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಾನವ ಜನ್ಮದಲ್ಲಿ ಶರೀರಕ್ಕೆ ಬಹಳ ಮಹತ್ವವಿದೆ. ಶರೀರ ಆರೋಗ್ಯವಾಗಿ, ಸದೃಡವಾಗಿದ್ದರೆ ಉತ್ಸಾಹದಿಂದ ಸರ್ವ ಕೆಲಸ ಸಾಂಗವಾಗಿ ನಡೆದು ಉನ್ನತಿ ಪಡೆಯಲು ಸಾಧ್ಯ. ಗೌಡ ಸಾರಸ್ವತ ಸಮಾಜ ಭಾಂದವರು ಹಲವು ಕಾರಣದಿಂದ ಗೋವಾದಿಂದ ದಕ್ಷಿಣಾಭಿಮುಖವಾಗಿ ಬಂದು ನೆಲೆಸಿ ವ್ಯಾಪಾರ ವಹಿವಾಟಿನ ಜೊತೆಗೆ ವಿವಿಧ ಕ್ಷೇತ್ರದಲ್ಲಿ ಸಮೃದ್ದಿ ಹೊಂದಿದ್ದೇವೆ. ಇಲ್ಲಿನ ಜನ,ಸಮಾಜದಿಂದ ಕೇವಲ ಪಡೆದರಷ್ಟೇ ಸಾಲದು ಸೇವಾ ರೂಪದಲ್ಲಿ ಒಳಿತು ಮಾಡುವ ದಿಶೆಯಲ್ಲಿ ಮುಂದಿನ ಜನಾಂಗದವರಿಗೂ ಶಾಶ್ವತವಾಗಿ ಸೇವೆ ನೀಡುವ ಕಾರ್ಯ ನಡೆಯಬೇಕು. ದೇವಳದಲ್ಲಿ ವೇದಾಂಗ,ಧರ್ಮ ಪರಿಪಾಲನೆಯ ಜೊತೆಯಲ್ಲಿ ಸಮಾಜ ಮುಖಿ ಕಾರ್ಯಗಳೂ ನಡೆಯಬೇಕು. ಈ ವೈದ್ಯಾಶಾಲಾ ಕೇಂದ್ರದಿಂದ ಸಮಾಜದ ಎಲ್ಲಾ ವರ್ಗದ ಜನರಿಗೆ ಸೇವೆ ಸಲ್ಲಬೇಕು ಎಂದು ಕಾಶೀ ಮಠಾಧೀಶ ಶ್ರೀಮದ್ ಸಮ್ಯಮೀಂದ್ರ ತೀರ್ಥ ಸ್ವಾಮೀಜಿಯವರು ಕೋಟೇಶ್ವರ ಶ್ರೀ ರಾಮ ಸೇವಾ ಸಂಘದ ಸುವರ್ಣ ಮಹೋತ್ಸವ ಸೌಧದ ಶ್ರೀ ಯಾದವೇಂದ್ರ ಆಯುರ್ವೇದ ವೈದ್ಯಶಾಲಾ, ಶ್ರೀ ಭುವನೇಂದ್ರ ಪಂಚಕರ್ಮ ಸೆಂಟರ್‌ನ ಪ್ರಥಮ ಅಂತಸ್ತಿನ ಉಧ್ಘಾಟನೆಯನ್ನು ಅಮೃತ ಹಸ್ತಗಳಿಂದ ನೇರವೇರಿಸಿ ಆಶೀರ್ವಚಿಸಿದರು.

Call us

Click Here

ಶ್ರೀ ಪಟ್ಟಾಭಿ ರಾಮಚಂದ್ರ ದೇವಳದ ಆಡಳಿತ ಮೊಕ್ತೇಸರರಾದ ಶ್ರೀಧರ್ ವಿ ಕಾಮತ್ ಸ್ವಾಗತಿಸಿದರು. ಶ್ರೀ ರಾಮ ಸೇವಾ ಸಂಘದ ಅಧ್ಯಕ್ಷರಾದ ಶಂಕರ್ ವಿ ಕಾಮತ್ ಪ್ರಸ್ತಾವನೆಗೈದರು. ನರಸಿಂಹಮೂರ್ತಿ ಕಾಮತ್ ವಂದಿಸಿದರು. ದಿನೇಶ್ ಜಿ ಕಾಮತ್ ಕಾರ್ಯಕ್ರಮವನ್ನು ನಿರೂಪಿಸಿದರು. ವೇದ ಮೂರ್ತಿ ಬಸ್ರೂರು ದಾಮೋದರ ಆಚಾರ್ಯ ಇವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ಜರಗಿದವು.

ಇದೇ ಸಂಧರ್ಭದಲ್ಲಿ ಕಟ್ಟಡದ ನಿರ್ಮಾಣಕ್ಕೆ ದೇಣಿಗೆ ನೀಡಿದ ಸಮಾಜದ ದಾನಿಗಳನ್ನು, ಕೇಂದ್ರದ ವೈದ್ಯರಾದ ಎಮ್.ವಿ.ಕಾಮತ್,ರಾಜೀವ್ ಶೆಣೈಯವರನ್ನು ಸ್ವಾಮೀಜಿಯವರು ಶಾಲು ಹೊದೆಸಿ ಸನ್ಮಾನಿಸಿದರು.

Leave a Reply