ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಪಾರಂಪಳ್ಳಿ ಪಡುಕರೆ ವಾರ್ಡ್‌ಗೆ ಸಂಬಂಧಿಸಿದ ನಾಯ್ಕನಬೈಲು ಹೊಳೆಯಲ್ಲಿ ತೋಡ್ಕಟ್ಟು ಮತ್ತು ಪಾರಂಪಳ್ಳಿ ಪಡುಕರೆಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಹಲವು ಹಿಂದೆ ನಿರ್ಮಿಸಲಾಗಿದ್ದ ಮರದ ಕಾಲು ಸಂಕದ ದುರಸ್ಥಿಗೆ ಪಟ್ಟಣ ಪಂಚಾಯಿತಿ ನಿಯೋಜಿಸಿದ ಕೆಲಸಗಾರರು ಆಗಮಿಸಿದ ಸಾರ್ವಜನಿಕರು ಘೇರಾವ್ ಹಾಕಿದ ಘಟನೆ ನಡೆಯಿತು. ಶಾಶ್ವತ ಸೇತುವೆ ಮಂಜೂರಾಗದ ಹೊರತು ಪ್ರಸ್ತುತ ರಸ್ತೆ ದುರಸ್ಥಿ ನಡೆಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದ ಗ್ರಾಮಸ್ಥರು ಪಟ್ಟಣ ಪಂಚಾಯತಿ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದರು.
1952ರಲ್ಲಿ ಕೋ.ಲ. ಕಾರಂತರಿಂದ ಶಂಕು ಸ್ಥಾಪನೆಗೊಂಡ ಈ ಮರದ ಸೇತುವೆ ಇದುವರೆಗೆ ಅಭಿವೃದ್ಧಿ ಕಾಣದೆ ಹಾಗೇ ಉಳಿದಿದೆ. ಪ್ರತಿ ವರ್ಷ ಮಳೆಗಾಲ ಬಂದಾಗ ಸ್ಥಳೀಯ ಪಟ್ಟಣ ಪಂಚಾಯತಿ ನಿದ್ದೆಯಿಂದ ಎಚ್ಚರವಾಗಿ ದುರಸ್ಥಿ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಿನಿಯೋಗಿಸುತ್ತಿದೆ. ಈ ಬಗ್ಗೆ ಸ್ಥಳೀಯರು ಸಾಕಷ್ಟು ಬಾರಿ ಮನವಿ ಮಾಡಿದರೂ ಕೂಡ ಪಟ್ಟಣ ಪಂಚಾಯಿತಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಚುನಾವಣೆ ಬಂದಾಗ ರಾಜಕೀಯ ನಾಯಕರು ಸೇತುವೆಯನ್ನು ನೋಡಿ ಮೊಸಳೆ ಕಣ್ಣಿರು ಹಾಕಿ, ಸೂಕ್ತ ವ್ಯವಸ್ಥೆಯ ಭರವಸೆ ನೀಡಿ, ಮತ ಪಡೆದು ಕಣ್ಮೇರೆಯಾಗುತ್ತಾರೆ. ಸ್ಥಳೀಯ ಜನಪ್ರತಿನಿಧಿಗಳು ಕೂಡ ಸಂಬಂಧಪಟ್ಟವರನ್ನು ಸಂಪರ್ಕಿಸಿ ಶಾಶ್ವತ ಸೇತುವೆ ವ್ಯವಸ್ಥೆಯ ಬಗ್ಗೆ ಯಾವುದೇ ಮನಸ್ಸು ಮಾಡುತ್ತಿಲ್ಲ. ರೈತರು ದೇಶದ ಬೆನ್ನೆಲುಬು ಎನ್ನುವ ನಮ್ಮ ಜನನಾಯಕರು ನಮ್ಮ ಕೃಷಿಗೆ ಭೂಮಿಗೆ ಸಂಪರ್ಕ ಕಲ್ಪಿಸುವ ಮರದ ಸೇತುವೆಯನ್ನು ಶಾಶ್ವತ ಸೇತುವೆ ಮಾಡುವ ಬಗ್ಗೆ ಶೀಘ್ರದಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಸ್ಥಳೀಯ ಹಿರಿಯರಾದ ಶೀನ ಮರಕಾಲ ತಿಳಿಸಿದರು.
ಈ ಭಾದ ತೋಡ್ಕಟ್ಟು ಶಾಲೆಗೆ ನಮ್ಮ ಮಕ್ಕಳು ತೆರಳುತ್ತಿದ್ದಾರೆ. ನಿತ್ಯವು ಕೂಡ ನಮ್ಮ ಹೊಟ್ಟೆಪಾಡಿದ ಕೂಲಿ ಬಿಟ್ಟು ಮಕ್ಕಳ ಜೀವದ ರಕ್ಷಣೆಗಾಗಿ ಸೇತುವೆ ಮೂಲಕ ಶಾಲೆಗೆ ದಾಟಿಸು ಕೆಲಸ ಮಾಡುತ್ತಿದ್ದೇವೆ. ಪಟ್ಟಣ ಪಂಚಾಯಿತಿ ನೀಡಿದ ಅರ್ಜಿಗಳು ಲೆಕ್ಕವಿಲ್ಲದಷ್ಟು, ನಾವು ಚಿಕ್ಕಂದಿನಿಂದ ದಿನ ನಿತ್ಯದ ಕೆಲಸಗಳಿಗಾಗಿ ಇದೇ ಸೇತುವೆಯ ಮೂಲಕ ಭಯ ಪಡುತ್ತಾ ದಾಟುತ್ತಿದ್ದೇವು ಆದರೆ ಮುಂದೆ ನಮ್ಮ ಮಕ್ಕಳು ಕೂಡ ಇದೇ ಭಯದಲ್ಲಿ ಸೇತುವೆ ದಾಟುವುದು ನಮಗೆ ಇಷ್ಟವಿಲ್ಲ. ಪಟ್ಟಣ ಪಂಚಾಯಿತಿ ಅವರು ಹತ್ತಿರ ಹತ್ತಿರದಲ್ಲಿ ಸೇತುವೆ ನಿರ್ಮಾಣಕ್ಕೆ ಅವಕಾಶವಿಲ್ಲ ಮತ್ತು ನಮ್ಮಲ್ಲಿ ಅನುದಾನವಿಲ್ಲ ಎಂದು ಸಮಾಧಾನ ಮಾಡುತ್ತಿದ್ದಾರೆ ಹೊರತು ಯಾವುದೇ ನೆರವು ನೀಡುತ್ತಿಲ್ಲ. ಈ ಬಾರಿ ಇಲ್ಲಿ ಶಾಸ್ವತ ಸೇತುವೆಗೆ ಮಂಜೂರಾತಿಯಾಗದೆ ಇದ್ದರೆ ನಾವು ಸೇತುವೆ ದುರಸ್ಥಿಗೆ ಖಂಡಿತ ಅವಕಾಶ ನೀಡುವುದಿಲ್ಲ ಎಂದು ಸ್ಥಳೀಯ ಗೃಹಿಣಿ ಶ್ರೀಮತಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಪಟ್ಟಣ ಪಂಚಾಯಿತಿ ಪಾರಂಪಳ್ಳಿ ಪಡುಕರೆ ಸದಸ್ಯ ರಾಘವೇಂದ್ರ ಗಾಣಿಗ ಅಪುಸ್ಥಿತರಿದ್ದರು ಸ್ಥಳೀಯರಿಗೆ ಸೇತುವೆಯ ವಿಚಾರವಾಗಿ ಪಟ್ಟಣ ಪಂಚಾಯಿತಿ ಸಭೆಯಲ್ಲಿ ಚರ್ಚಿಸಿದ ಕುರಿತು ಮತ್ತು ಜನಪ್ರತಿನಿಧಿಗಳಿಗೆ ಮನವಿ ನೀಡಿದ ವಿಚಾರವನ್ನು ತಿಳಿಸಿ ಮನವೊಲಿಸಲು ಪ್ರಯತ್ನಿಸಿದರು. ಆದರೆ ಗ್ರಾಮಸ್ಥರು ಪಟ್ಟಣ ಪಂಚಾಯಿತಿ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿ ಸ್ಥಳಕ್ಕೆ ಬರಲಿ ಎಂದು ಪಟ್ಟು ಹಿಡಿದರು. ಬ್ರಹ್ಮಾವರದಲ್ಲಿ ಸಭೆಯಲ್ಲಿ ಭಾಗವಹಿಸಿದ್ದ ಮುಖ್ಯಾಧಿಕಾರಿಯವರು ತಕ್ಷಣ ಸ್ಥಳಕ್ಕೆ ಭೇಟಿ ಸೇತುವೆಯನ್ನು ಪರಿಶೀಲಿಸಿ ಸ್ಥಳೀಯರ ಸಮಸ್ಯೆಯಾಲಿಸಿದರು. ಅಲ್ಲದೇ ಈ ಬಗ್ಗೆ ಪಟ್ಟಣ ಪಂಚಾಯಿತಿ ಇದುವರೆಗೆ ಮಾಡಿದ ಪ್ರಯತ್ನವನ್ನು ತಿಳಿಸಿದರು. ಮುಂದೆ ಸ್ಥಳೀಯರೊಂದಿಗೆ ಶಾಸಕರು ಮತ್ತು ಸಚಿವರ ಬಳಿ ನಿಯೋಗ ತೆರಳಿ ಸಮಸ್ಯೆಯನ್ನು ಅವರ ಮುಂದಿಟ್ಟು ಪರಿಹಾರ ಪಡೆಯೋಣ ಎಂದು ತಿಳಿಸಿದರು.
ಸದ್ಯ ಸೇತುವೆಯ ದುರಸ್ಥಿಗೆ ನಾವು ಅವಕಾಶ ನೀಡುವುದಿಲ್ಲ. ನಮ್ಮ ಶಾಸ್ವತ ಸೇತುವೆಯ ಬೇಡಿಕೆಯ ಕುರಿತು ಲಿಖಿತ ಮಂಜೂರಾತಿ ಸಿಕ್ಕ ಮೇಲೆ ನೀವು ದುರಸ್ಥಿ ಮಾಡಿ ಎಂದು ಸ್ಥಳೀಯರು ಈ ಸಂದರ್ಭ ತಿಳಿಸಿದರು.