ಮರವಂತೆ: ಉಪಯುಕ್ತ ಚರ್ಚೆಗೆ ವೇದಿಕೆಯಾದ ಗ್ರಾಮಸಭೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹಿಂದಿನ ಸಾಲಿನ ಸಾಧನೆಗಳ ವರದಿ, ಇಲಾಖೆಗಳ ಕಾರ್ಯಕ್ರಮಗಳ ಮಾಹಿತಿ ಜತೆಗೆ ಸಾರ್ವಜನಿಕರು ಎತ್ತಿದ ವಿಷಯಗಳ ಕುರಿತು ಉಪಯುಕ್ತ ಚರ್ಚೆಗೆ ನಡೆದ ಮರವಂತೆ ಗ್ರಾಮಸಭೆ ವೇದಿಕೆಯಾಯಿತು.

Call us

Click Here

ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಅನಧಿಕೃತವಾಗಿ ತೆರೆಯಲಾಗುತ್ತಿರುವ ಎಲ್‌ಕೆಜಿ, ಯುಕೆಜಿ ತರಗತಿಗಳಿಗೆ ಅಂಗನವಾಡಿ ಪ್ರಾಯದ ಮಕ್ಕಳನ್ನು ಸೇರಿಸಿಕೊಂಡು ಅವರಿಗೆ ಇಂಗ್ಲಿಷ್ ಕಲಿಸುತ್ತಿರುವುದನ್ನು ನಾಗರಾಜ್ ಬಲವಾಗಿ ವಿರೋಧಿಸಿ, ಮಕ್ಕಳ ಆರಂಭಿಕ ಶಿಕ್ಷಣ ಕನ್ನಡದಲ್ಲೇ ಆಗಬೇಕು ಎಂದು ಪ್ರತಿಪಾದಿಸಿದರು. ಉತ್ತರಿಸಿದ ಅಂಗನವಾಡಿ ಮೇಲ್ವಿಚಾರಕಿ ಈ ಬಗ್ಗೆ ಸವಿತಾ ಶೆಟ್ಟಿ ತಮಗೂ ಈ ಬಗ್ಗೆ ಆತಂಕವಿದೆ ಎಂದು ಹೇಳಿ ಈ ಮಕ್ಕಳು ಸರಕಾರದ ಮಹತ್ವಾಕಾಂಕ್ಷೆಯ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಸೌಲಭ್ಯಗಳಿಂದ ವಂಚಿರಾಗುತ್ತಿದ್ದಾರೆ. ಆದರೆ ತಾವು ಈ ವಿಷಯದಲ್ಲಿ ಅಸಹಾಯಕರು ಎಂದರು.

ಜನಾರ್ದನ ಖಾರ್ವಿ, ರಾಮಕೃಷ್ಣ ಖಾರ್ವಿ, ಮೋಹನ ಖಾರ್ವಿ ಸೋಲಾರ್ ಬೀದಿದೀಪ ಅಳವಡಿಸುವಾಗ ಎಲ್ಲ ವಾರ್ಡ್‌ಗಳಿಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು. ಹಲವೆಡೆ ಬೀದಿದೀಪಗಳು ಬೆಳಗದಿರುವುದನ್ನು ಪ್ರಸ್ತಾಪಿಸಿದ ಚಂದ್ರ ಖಾರ್ವಿ, ಎಂ. ವಿನಾಯಕ ರಾವ್ ಗ್ರಾಪಂ ಸದಸ್ಯರು ಈ ವಿಷಯದಲ್ಲಿ ಮುತುವರ್ಜಿ ವಹಿಸಬೇಕು ಎಂದರು. ಎಸ್. ಜನಾರ್ದನ ಮಾತನಾಡಿ ಫಿಲಿಫ್ಸ್ ಇಂಡಿಯ ಸಹಯೋಗದಲ್ಲಿ ಅಳವಡಿಸಿದ ವಿಶಿಷ್ಟ ಕೇಂದ್ರೀಕೃತ ಬೀದೀಪ ವ್ಯವಸ್ಥೆಯ ನಿಯತಕಾಲಿಕ ನಿರ್ವಹಣೆ ನಡೆಸಬೇಕು ಎಂದರು. ಹಿಂದಿನ ಅವಧಿಯಲ್ಲಿ ಪಂಚಾಯತ್ ಗಳಿಸಿದ್ದ ಬಹುಮಾನಗಳ ಮೊತ್ತದ ಬಳಕೆಯ ಬಗ್ಗೆ ಮಾಹಿತಿ ಪಡೆದರು. ಉಮೇಶ ಖಾರ್ವಿ, ಲೀನಾ ಕ್ರಾಸ್ತಾ, ಅಣ್ಣಯ್ಯ ಪೂಜಾರಿ, ಸರೋಜಾ ಶ್ಯಾನುಭಾಗ್, ಪ್ರಭಾಕರ ಪೂಜಾರಿ, ಗಣಪತಿ ಖಾರ್ವಿ, ದಯಾನಂದ ಬಳೆಗಾರ್ ವಿವಿಧ ವಿಷಯಗಳನ್ನು ಪ್ರಸ್ತಾಪಿಸಿ ಉತ್ತರ ಪಡೆದರು.

ಮಾರ್ಗದರ್ಶಿ ಅಧಿಕಾರಿ ಸೀತಾರಾಮ ಶೆಟ್ಟಿ, ಮೆಸ್ಕಾಂ ನಾವುಂದ ಶಾಖಾಧಿಕಾರಿ ಸುಧಾಕರ, ಕೃಷಿ ಸಹಾಯಕ ಪರಶುರಾಮ್, ಪಶು ವೈದ್ಯಾಧಿಕಾರಿ ಡಾ. ಅರುಣ್, ಆರೋಗ್ಯ ಸಹಾಯಕ ವಿನಯ್, ಅರಣ್ಯ ಇಲಾಖೆಯ ರಾಜೀವ ಬಿರ್ತಿ, ಶಿಕ್ಷಣ ಇಲಾಖೆಯ ಸುನಿಲ್‌ಕುಮಾರ ಶೆಟ್ಟಿ, ಗಂಗೊಳ್ಳಿ ಠಾಣೆಯ ಸಿಬ್ಬಂದಿ ಅಶೋಕಕುಮಾರ್, ಗ್ರಾಮ ಕರಣಿಕ ವೆಂಕಟೇಶ್ ಇಲಾಖೆಗಳ ಕಾರ್ಯಕ್ರಮಗಳ ಮಾಹಿತಿ ನೀಡಿದರು.

ಅಧ್ಯಕ್ಷೀಯ ನುಡಿಗಳನ್ನಾಡಿದ ಅನಿತಾ ಆರ್. ಕೆ. ವಿವಿಧ ಇಲಾಖೆಗಳು ಪಂಚಾಯತ್ ವ್ಯಾಪ್ತಿಯಲ್ಲಿ ಅನುಷ್ಠಾನಿಸಲು ಉದ್ದೇಶಿಸುವ ಫಲಾನುಭವಿ ಆಧರಿತ ಮತ್ತು ಅನ್ಯ ಅಭಿವೃದ್ಧಿ ಯೋಜನೆಗಳ ವಿವರವನ್ನು ಗ್ರಾಮ ಪಂಚಾಯತ್‌ಗೆ ತಿಳಿಸಬೇಕು. ಗ್ರಾಮ ಪಂಚಾಯತ್ ರಸ್ತೆಗಳು ಕೆಡಲು ಅಕ್ಕಪಕ್ಕದ ಖಾಸಗಿ ಜಮೀನಿನ ಮರಗಳಿಂದ ಮಳೆಗಾಲದಲ್ಲಿ ಬೀಳುವ ನೀರು ಕಾರಣವಾಗುವುದರಿಂದ ಅಂತಹ ಮರಗಳ ಗೆಲ್ಲುಗಳನ್ನು ಕಡಿಯಬೇಕು. ಗ್ರಾಮ ಪಂಚಾಯತ್ ಎದುರಿಸುತ್ತಿರುವ ಪ್ರಮುಖ ಸವಾಲಾಗಿರುವ ಬೀದಿದೀಪ ನಿರ್ವಹಣೆಯ ವಿಚಾರದಲ್ಲಿ ಮೆಸ್ಕಾಂ ಗರಿಷ್ಠ ಸಾಧ್ಯ ನೆರವು ನೀಡಬೇಕು ಎಂದು ವಿನಂತಿಸಿದರು. ….೨

Click here

Click here

Click here

Click Here

Call us

Call us

ಅಭಿವೃದ್ಧಿ ಅಧಿಕಾರಿ ಹರಿಶ್ಚಂದ್ರ ಆಚಾರ್ ಸ್ವಾಗತಿಸಿ, ನಿರೂಪಿಸಿದರು. ಕರ ಸಂಗ್ರಾಹಕ ಶೇಖರ ಮರವಂತೆ ವಂದಿಸಿದರು. ತಾಲೂಕು ಪಂಚಾಯತ್ ಸದಸ್ಯ ಜಗದೀಶ ಪೂಜಾರಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಣೇಶ ಪೂಜಾರಿ, ಸದಸ್ಯರು, ಶಾಲೆಗಳ ಮುಖ್ಯೋಪಾಧ್ಯಾಯರು, ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply