ಜಾನಪದ ಕಲೆ ಉಳಿಯಬೇಕಾದರೇ ದಾಖಲೀಕರಣಗೊಳಿಸುವ ಅಗತ್ಯವಿದೆ: ಬಿ.ಎಂ. ರವಿಕುಮಾರ್

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ನಮ್ಮ ಸಂಸ್ಕೃತಿ, ಸಂಪ್ರದಾಯಗಳು ಮುಂದಿನ ಪೀಳಿಗೆಗೆ ತಲುಪಬೇಕಾದರೇ ಯುವ ಜನತೆಗೆ ಈಗಿನಿಂದಲೇ ಆ ಬಗೆಗೆ ಒಲುವು ಮೂಡಿಸುವುದಲ್ಲದೇ ಕಲೆಯ ಮೂಲ ಸ್ವರೂಪವನ್ನು ಹಾಗೇಯೇ ಉಳಿಸಿಕೊಳ್ಳಬೇಕಾದರೇ ಕಲಾವಿದರು ಅನುಭವ ಹಾಗೂ ಕಲಾ ಪ್ರಕಾರಗಳನ್ನು ದಾಖಲೀಕರಣಗೊಳಿಸುವ ಕಾರ್ಯ ತುರ್ತಾಗಿ ಆಗಬೇಕಿದೆ ಎಂದು ಉಡುಪಿ ಜಿಲ್ಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ಎಂ. ರವಿಕುಮಾರ್ ಹೇಳಿದರು.

Call us

Click Here

ಪರಿಶಿಷ್ಟ ಪಂಗಡ, ಬುಡಕಟ್ಟು ಜನಾಂಗದ ರಂಗತಂಡ ’ಸಮ್ಮಿಲನ(ರಿ) ಯಳಜಿತ’ ಇದರ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಕಾರದೊಂದಿಗೆ ಯಳಜಿತದ ನಾಟ್ಯ ಗಣೇಶ ರಂಗಮಂದಿರದಲ್ಲಿ ಆಯೋಜಿಸಲಾದ ವನಸಿರಿಯಲ್ಲೊಂದು ರಂಗತರಂಗ-2016 ಎರಡನೇ ದಿನದ ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದ ಅವರು ಮಾತನಾಡಿದರು.

ಕನ್ನಡ ಭಾಷೆ, ಸಂಸ್ಕೃತಿಯನ್ನು ಕಲೆ, ಸಾಹಿತ್ಯ, ಜನಪದ ಮುಂದಾದವುಗಳ ಮೂಲಕ ಜೀವಂತವಾಗಿರಿಸಲು ನಿರಂತರವಾಗಿ ಶ್ರಮಿಸುತ್ತಿರುವ ಸಂಘಟನೆಗಳಿಗೆ, ಕಲಾವಿದರುಗಳಿಗೆ ಇಲಾಖೆಯಿಂದ ಅಗತ್ಯ ನೆರವು ನೀಡಲಾಗುತ್ತಿದೆ. ಅದನ್ನು ಸದ್ಭಳಕೆ ಮಾಡಿಕೊಳ್ಳುವ ಕಾರ್ಯ ಮಾತ್ರ ನಡೆಯಬೇಕಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಂಕರ ಪೂಜಾರಿ ಮಾತನಾಡಿ ಗ್ರಾಮೀಣ ಭಾಗಗಳ ಜನರ ಸಾಂಸ್ಕೃತಿಕ ಆಸಕ್ತಿ ಹಾಗೂ ಒಲವು ವಿಶೇಷವಾದುದು. ಇತ್ತಿಚಿನ ದಿನಗಳಲ್ಲಿ ಅವರಲ್ಲಿನ ಪ್ರತಿಭೆಯನ್ನು ಗುರುತಿಸುವ ಕೆಲಸವಾಗುತ್ತಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಎಲ್ಲರನ್ನೂ ಒಗ್ಗೂಡಿಸಿ ಮುನ್ನಡೆಸುವ ವಾತಾವರಣ ನಿರ್ಮಿಸಿರುವುದು ಶ್ಲಾಘನೀಯದುದು. ಅಗತ್ಯವಿದ್ದರೇ, ಜಿಲ್ಲಾ ಪಂಚಾಯತ್‌ನಿಂದ ಸಂಸ್ಥೆಗೆ ನೆರವು ಒದಗಿಸಲಾಗುವುದು ಎಂದು ಭರವಸೆಯಿತ್ತರು.

ಲಾವಣ್ಯ ಬೈಂದೂರಿನ ಹಿರಿಯ ಕಲಾವಿದ ಗಿರೀಶ್ ಬೈಂದೂರು ಆಶಯ ನುಡಿಗಳನ್ನಾಡಿದರು. ಗೋಳಿಹೊಳೆ ಗ್ರಾಪಂ ಸದಸ್ಯರಾದ ಮಹಾಬಲ ಕೊಠಾರಿ, ಗಣಪತಿ ಗೌಡ, ಯಳಜಿತ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಮಂಜಯ್ಯ ಪೂಜಾರಿ, ನಿವೃತ್ತ ಅಧ್ಯಾಪಕ ಗೋವಿಂದ ಬಿಲ್ಲವ, ಯಳಜಿತ ಧ.ಗ್ರಾ.ಯೋ. ಒಕ್ಕೂಟದ ಅಧ್ಯಕ್ಷೆ ಜ್ಯೋತಿ ಕೊಠಾರಿ, ಸುರಭಿ ಬೈಂದೂರು ವ್ಯವಸ್ಥಾಪಕ ಸುಧಾಕರ ಪಿ ಮೊದಲಾದವರು ವೇದಿಕೆಯಲ್ಲಿದ್ದರು.

Click here

Click here

Click here

Click Here

Call us

Call us

ಕಾರ್ಯಕ್ರಮದಲ್ಲಿ ಜನಪದ ಹಾಡುಗಾರ್ತಿ ಮೂಕಾಂಬಿಕಾ, ಗ್ರಾಮೀಣ ನಾಟಿ ವೈದ್ಯ ಬುದ್ಧಿವಂತ ಮರಾಠಿ, ಯಳಜಿತ, ಹಿರಿಯ ಯಕ್ಷಗಾನ ಚಂಡೆವಾದಕ ಸದಾನಂದ ಪ್ರಭು, ಶಾಲಾ ಮುಖ್ಯೋಪಧ್ಯಾಯ ನಾರಾಯಣ ಹೋಬಳಿದಾರ್ ಹಾಗೂ ಚಿತ್ರಕಲಾವಿದ ಗಿರೀಶ ಗಾಣಿಗ ಅವರನ್ನು ಸನ್ಮಾನಿಸಲಾಯಿತು.

ಸಮ್ಮಿಲನ ರಿ. ಯಳಜಿತದ ಸಂಚಾಲಕ ಗಣಪತಿ ಹೋಬಳಿದಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಧ್ಯಕ್ಷ ರಂಗು ಮರಾಠಿ ಸ್ವಾಗತಿಸಿದರು. ಕಾರ್ಯದರ್ಶಿ ವೆಂಕಟರಮಣ ವಂದಿಸಿದರು. ಶಿಕ್ಷಕ ಕೆ.ಎಂ. ಹೊಸೇರಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಂಚಲನ ರಿ. ಹೊಸೂರು ಕಲಾವಿದರಿಂದ ’ಸತ್ರೂ ಅಂದ್ರೆ ಸಾಯ್ತಾರಾ’ ನಾಟಕ ಪ್ರದರ್ಶನಗೊಂಡಿತು.

Sammilana R Yeljitha (1) Sammilana R Yeljitha (2) Sammilana R Yeljitha (7)Sammilana R Yeljitha (5)

Leave a Reply