ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್‌ನ ಆಶ್ರಯದಲ್ಲಿ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಕೃಷಿಕ ಸಂಘ, ಅರಣ್ಯ ಇಕೋ ಕ್ಲಬ್ ಸಹಭಾಗಿತ್ವದೊಂದಿಗೆ ಶಾಲಾ ವಠಾರದಲ್ಲಿ ವನಮಹೋತ್ಸವ ಆಚರಿಸಲಾಯಿತು
ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ಅಧ್ಯಕ್ಷ ಕೆ. ನರಸಿಂಹ ಹೊಳ ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಭಾರ ಮುಖ್ಯೋಪಧ್ಯಾಯರಾದ ವಿ. ಶ್ರೀಕಾಂತ್, ಉಡುಪಿಯ ಭಾರತೀಯ ವಿಕಾಸ ಟ್ರಸ್ಟ್ ಅನಂತ ಶೆಣೈ, ಬಸ್ರೂರು ಶಾರದ ಕಾಲೇಜ್ ಉಪನ್ಯಾಸಕ ದಿನಕರ ಶೆಟ್ಟಿ, ರೋಟರಿ ಜೋನಲ್ ಲೆಪ್ಟಿನೆಂಟ್ ಅಬುಶೇಖ್ ಸಾಹೇಬ್, ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್‌ನ ನಿಕಟ ಪೂರ್ವಾಧ್ಯಕ್ಷ ಕೆ. ನರಸಿಂಹ ಹೊಳ್ಳ, ಸದಸ್ಯರಾದ ಬಿ. ಎಮ್. ಚಂದ್ರಶೇಖರ, ಜಗದೀಶ ಚಂದ್ರನ್, ರಾಜು ಪೂಜಾರಿ,ಮನೋಹರ, ಡುಂಡಿರಾಜ್ ಶಿಕ್ಷಕರಾದ ಪ್ರಕಾಶ್, ಪಿಯುಸ್ ಡಿಸೋಜಾ, ಕುಸುಮ ಉಪಸ್ಥಿತರಿದ್ದರು.