ಕಸಾಪ ವಂಡ್ಸೆ ಹೋಬಳಿ ಘಟಕ ಉದ್ಘಾಟನೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಮಾತೃಭಾಷೆಯು ಹೃದಯದ ಭಾಷೆ. ನಿರಂತರವಾಗಿ ಬಳಸುವುದರಿಂದ ಭಾಷೆ ಉಳಿಯಬಲ್ಲುದು. ನಾಡು-ನುಡಿ, ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಒಲವು ಮತ್ತು ಅಭಿಮಾನವನ್ನು ಹೆಚ್ಚಿಸುವ ಕಾರ್ಯ ಇಂದಿನ ಅಗತ್ಯವಾಗಿದೆ ಎಂದು ಉಡುಪಿ ತಾಲೂಕು ಕಸಾಪ ಮಾಜಿ ಅಧ್ಯಕ್ಷ ಪ್ರೊ. ಸಿ. ಉಪೇಂದ್ರ ಸೋಮಯಾಜಿ ಅವರು ಹೇಳಿದರು.

Call us

Click Here

ವಂಡ್ಸೆ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಮಧ್ಯಾಹ್ನ ಜರಗಿದ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನೂತನ ವಂಡ್ಸೆ ಹೋಬಳಿ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಣ, ಸಾಹಿತ್ಯದಿಂದ ಮಾನವೀಯ ಮನಸ್ಸುಗಳು ಹೆಚ್ಚಬೇಕು. ಅಂತರಂಗದ ಪ್ರೇರಣೆಯಿಂದ ಪ್ರತಿಭೆ ಹೊರಬರುತ್ತದೆ. ಪ್ರತಿಭೆಯನ್ನು ಉತ್ತೇಜಿಸಲು ಓದು, ಉಪನ್ಯಾಸ, ಸಾಹಿತ್ಯ ಮತ್ತು ಕಲಾ ಚಟುವಟಿಕೆಗಳ ನೆರವು ಪಡೆಯಬೇಕು. ಅಂದಿನ ಜಾನಪದ ಇಂದಿಗೂ ತನ್ನದೇ ಆದ ಸತ್ವಯುತವಾದ ಸಂತೋಷವನ್ನು ಕೊಡುವಂತೆ ಯಾಂತ್ರಿಕತೆಯನ್ನು ಬಿಟ್ಟು ಪ್ರಕೃತಿದತ್ತ ಪ್ರೀತಿಯನ್ನು ಪಡೆಯಲು ಸಾಹಿತ್ಯ, ಸಂಸ್ಕ್ರತಿಯನ್ನು ಆಶ್ರಯಿಸಬೇಕು ಎಂದರು.

ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರು ನೂತನ ಹೋಬಳಿ ಘಟಕದ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಿ ಪ್ರತೀಜ್ಞಾವಿಧಿಯನ್ನು ಬೋಧಿಸಿ ಆಶಯದ ಮಾತುಗಳನ್ನಾಡಿ, ಕನ್ನಡಕ್ಕಾಗಿ ಪ್ರಜ್ಞಾವಂತರಾಗಬೇಕು. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಳಕಳಿ ನಮ್ಮೆಲ್ಲರ ಹೃದಯದಿಂದ ಹುಟ್ಟಿಬರಬೇಕು ಎಂದರು. ಕಸಾಪ ವಂಡ್ಸೆ ಹೋಬಳಿ ಘಟಕದ ಅಧ್ಯಕ್ಷ ಚಂದ್ರ ಕೆ. ಹೆಮ್ಮಾಡಿ ಅಧ್ಯಕ್ಷತೆ ವಹಿಸಿದ್ದರು.

ಕಸಾಪ ಕುಂದಾಪುರ ತಾಲೂಕು ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್ ಅವರು ಹೋಬಳಿ ಘಟಕದ ಅಧ್ಯಕ್ಷರಿಗೆ ಧ್ವಜವನ್ನು ಹಸ್ತಾಂತರಿಸಿದರು. ಮುಖ್ಯ ಅತಿಥಿ ವಂಡ್ಸೆ ಕಾಲೇಜು ಹಿರಿಯ ಉಪನ್ಯಾಸಕ ಜಿ. ಕೆ. ಹಾಲಪ್ಪ, ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕ ರಾಜೀವ ಶೆಟ್ಟಿ, ಕುಂದಾಪುರ ತಾಲೂಕು ಆಯುಷ್ ಘಟಕದ ಅಧ್ಯಕ್ಷ ಡಾ. ರಾಜೇಶ್ ಬಾಯಿರಿ ಶುಭಹಾರೈಸಿದರು.

ಹೋಬಳಿ ಘಟಕದ ಗೌರವ ಕಾರ್ಯದರ್ಶಿ ಕೆ. ಗೋಪಾಲಕೃಷ್ಣ ನಾಡ ಸ್ವಾಗತಿಸಿದರು. ಉಪನ್ಯಾಸಕ ಮಂಜುನಾಥ ಎಂ. ಚಂದನ್ ನೆಂಪು ಕಾರ್ಯಕ್ರಮ ನಿರ್ವಹಿಸಿದರು. ಎಚ್. ಮಂಜುನಾಥ ಭಟ್ ಹರೆಗೋಡು ವಂದಿಸಿದರು.

Click here

Click here

Click here

Click Here

Call us

Call us

news kasapa vandse hobali udghatanae 1 news kasapa vandse hobali udghatanae

Leave a Reply