ಕೋಟ: ಕೋಡಿ ಪಂಚಾಯತ್‌ನ ರಂಜನಿ, ಉಡುಪಿ ಜಿಲ್ಲೆಯ ಕಿರಿಯ ಗ್ರಾ.ಪಂ ಅಧ್ಯಕ್ಷೆ

Click Here

Call us

Call us

Call us

ಒಂದು ವರ್ಷದ ಬಳಿಕ ಕೋಡಿ ಪಂಚಾಯಿತ್ ಅಧ್ಯಕ್ಷರ ಆಯ್ಕೆ

Call us

Click Here

ಕುಂದಾಪ್ರ ಡಾಟ್ ಕಾಂ ವರದಿ.
ಕೋಟ: ಎಲ್ಲೆಡೆ ಗ್ರಾಮ ಪಂಚಾಯತ್ ಚುನಾವಣೆಯ ಬಳಿಕ, ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದು ವರ್ಷ ಕಳೆದರೂ ಸ್ಥಾನ ಒಂದು ವರ್ಷ ಒಂದು ತಿಂಗಳಿನಿಂದ ಖಾಲಿ ಉಳಿದಿದ್ದ ಕೋಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರದಂದು ಮತದಾನ ನಡೆದಿದೆ. ಮೀಸಲಾತಿಯ ಗೊಂದಲ ಇದ್ದ ಉಡುಪಿ ತಾಲೂಕಿನ ಕೋಡಿ ಗ್ರಾಪಂನಲ್ಲಿ ಕೊನೆಗೂ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ರಂಜನಿ(21) ಆಯ್ಕೆಯಾಗಿದ್ದು, ಜಿಲ್ಲೆಯ ಅತ್ಯಂತ ಕಿರಿಯ ಅಧ್ಯಕ್ಷೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಕೋಡಿ ಪಂಚಾಯಿತಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಪಂಗಡದವರು ಇಲ್ಲದಿದ್ದರು ಚುನಾವಣಾ ಆಯೋಗದ ಎಡವಟ್ಟು ನಿರ್ಧಾರದಿಂದ ಕೆಲವೊಂದು ವಾರ್ಡ್‌ಗಳಿಗೆ ಪರಿಶಿಷ್ಟ ಪಂಗಡ ಮಿಸಲಾತಿ ಬಂದಿತ್ತು. ಈ ಬಗ್ಗೆ ಮರು ಪರಿಶೀಲನೆ ನಡೆದ ಬಳಿಕ ಪರಿಶಿಷ್ಟ ಪಂಗಡದವರ ಬದಲಿಗೆ ಪರಿಶಿಷ್ಟ ಜಾತಿಗೆ ಮಿಸಲಾತಿ ಬದಲಾಯಿಸಲಾಗಿತ್ತು. ಆದರೆ ಚುನಾವಣೆ ನಡೆದ ಬಳಿಕ ಮತ್ತೆ ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಪಂಗಡ ಮಿಸಲಾತಿ ಬಂದ ಹಿನ್ನಲೆಯಲ್ಲಿ, ಯಾರೋಬ್ಬರು ಪರಿಶಿಷ್ಟ ಪಂಗಡದ ಚುನಾಯಿತಿ ಅಭ್ಯರ್ಥಿಗಳು ಇಲ್ಲದ ಹಿನ್ನಲೆಯಲ್ಲಿ ಪಂಚಾಯತ್ ರಾಜ್ ನಿಯಮದಂತೆ ಒಂದು ವರ್ಷ ಒಂದು ತಿಂಗಳುಗಳ ಕಾಲ ಉಪಾಧ್ಯಕ್ಷರಾದ ಯಶೋಧ ಖಾರ್ವಿ ಅವರೆ ಪ್ರಭಾರ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಕುಂದಾಪ್ರ ಡಾಟ್ ಕಾಂ ವರದಿ.

ಮಂಗಳವಾರದಂದು ಅಧ್ಯಕ್ಷರ ಆಯ್ಕೆಗೆ ಮಹೂರ್ತ ಕೂಡಿ ಬಂದ ಹಿನ್ನಲೆಯಲ್ಲಿ ಉಡುಪಿ ತಹಶೀಲ್ದಾರ್ ಗುರುಪ್ರಸಾದ್ ನೇತೃತ್ವದಲ್ಲಿ ಮತದಾನ ನಡೆದಿದೆ. 12 ಸದಸ್ಯರ ಕೋಡಿ ಪಂಚಾಯಿತಿಯಲ್ಲಿ 6 ಜನ ಬಿಜೆಪಿ ಮತ್ತು 6 ಕಾಂಗ್ರೆಸ್ ಬೆಂಬಲಿತ ಸದಸ್ಯರು ಇರುವ ಹಿನ್ನಲೆಯಲ್ಲಿ ಲಕ್ಕಿಡಿಪ್ ಮೂಲಕ ಚೀಟಿ ಹಾಕಿ ಅದೃಷ್ಟರ ಆಯ್ಕೆ ಮಾಡಿದಾಗ, ಬಿಜೆಪಿ ಬೆಂಬಲಿತ ಪರಿಶಿಷ್ಟ ಜಾತಿಯ ರಂಜನಿ ಅವರು ಅಧ್ಯಕ್ಷರಾಗಿ ಆಯ್ಕೆಯಾದರು. ಕಾಂಗ್ರೆಸ್ ಬೆಂಬಲಿತ ಯಶೋಧ ಖಾರ್ವಿ ಉಪಾಧ್ಯಕ್ಷೆಯಾಗಿ ಮುಂದುವರಿಯಲಿದ್ದು, ಕೋಡಿ ಪಂಚಾಯಿತಿ ಬಿಜೆಪಿ ಅಧ್ಯಕ್ಷರ ಪಾಲಾಗಿದೆ/ಕುಂದಾಪ್ರ ಡಾಟ್ ಕಾಂ ವರದಿ/

Leave a Reply