ಆಟೋ ರಿಕ್ಷಾ ಮತ್ತು ವಾಹನ ಚಾಲಕರ ಸಂಘದ ವಾರ್ಷಿಕ ಮಹಾಸಭೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಕೇಂದ್ರ ಸರಕಾರ ಜಾರಿಗೆ ತರಲು ಹೊರಟಿರುವ ರಸ್ತೆ ಸಾರಿಗೆ ಸುರಕ್ಷತಾ ಮಸೂದೆ ೨೦೧೫, ಚಾಲಕರ ವಿರೋಧಿ ಜನ ಸಾಮಾನ್ಯರ ಸಾರಿಗೆ ವ್ಯವಸ್ಥೆಯನ್ನು ರದ್ದು ಮಾಡುವ, ಜನ ಸಾಮಾನ್ಯರಿಗೆ ಸಾರಿಗೆ ವ್ಯವಸ್ಥೆಯನ್ನು ನಾಶ ಮಾಡುವುದು ಎಂದು ಫೆಡರೇಶನ್ ಆಫ್ ಕರ್ನಾಟಕ ಆಟೋ ರಿಕ್ಷಾ ಡ್ರೈವರ‍್ಸ್ ಯೂನಿಯನ್ ರಾಜ್ಯ ಸಮಿತಿಯ ಕೋಶಾಧಿಕಾರಿ ಸಿ.ಎನ್.ಶ್ರೀನಿವಾಸ ಬೆಂಗಳೂರು ಹೇಳಿದರು.

Call us

Click Here

ಕುಂದಾಪುರ ತಾಲೂಕು ಆಟೋ ರಿಕ್ಷಾ ಮತ್ತು ವಾಹನ ಚಾಲಕರ ಸಂಘ (ಸಿಐಟಿಯು) ಇದರ ೪೦ನೇ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಅವರು ಮುಂದುವರಿದು ಮಾತನಾಡುತ್ತಾ ಈಗಿರುವ ಈಗಿರುವ ಮೋಟಾರು ವಾಹನ ಕಾಯಿದೆ ೧೯೮೮ ರ ಬದಲಿಗೆ ಕೇಂದ್ರ ಸರಕಾರ ತರುತ್ತಿರುವ ಈ ಹೊಸ ರಸ್ತೆ ಸಾರಿಗೆ ಮತ್ತು ಸುರಕ್ಷತಾ ಮಸೂದೆ -೨೦೧೫ ರ ಬದಲಿಗೆ ಎಲ್ಲಾ ರಸ್ತೆ ಸಾರಿಗೆ ವಲಯಗಳಿಗೆ ಆತ್ಮಹತ್ಯೆಕಾರಿಯಾಗದೇ ಮತ್ತು ಕಾರ್ಪೋರೇಟ್ ವಲಯದವರಿಗೆ ಉತ್ತೇಜನಕಾರಿಯಾಗಿದೆ ಎಂದು ಶ್ರೀನಿವಾಸ ಅಭಿಪ್ರಾಯ ಪಟ್ಟರು. ಇದು ಕಾನೂನಾದರೆ ಪ್ರತಿಯೊಬ್ಬ ಚಾಲಕ, ಅಂದರೆ ಆಟೋ ಟ್ಯಾಕ್ಸಿ, ಬಸ್ಸ್, ಟ್ರಕ್ ಗೂಡ್ಸ್, ಇತ್ಯಾದಿ ಎಲ್ಲಾ ಚಾಲಕ ರೂ. ೧,೧೦೦/- ದಿಂದ ೩ ಲಕ್ಷ ರೂಪಾಯಿವರೆಗೆ ದಂಡ ಅಥವಾ ಜೈಲು ವಾಸ ಅಥವಾ ಎರಡನ್ನೂ ಅನುಭವಿಸಬೇಕಾಗಿ ಬರಬಹುದು.

ದಿನಬಳಕೆ ಆಹಾರ ವಸ್ತುಗಳ ಬೆಲೆ ಏರಿಕೆ ತಡೆಗಟ್ಟಲು ಒತ್ತಾಯಿಸಿ ಹಾಗೂ ಸೆಪ್ಟಂಬರ್ ೨ ಅಖಿಲ ಭಾರತ ಮುಷ್ಕರ ಯಶಸ್ವಿಗೊಳಿಸುವುದಕ್ಕೆ ಸಮಾವೇಶದಲ್ಲೂ ನಿರ್ಣಯವನ್ನು ಅಂಗೀಕರಿಸಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ ಚಟುವಟಿಕೆಯ ವರದಿ ಮಂಡಿಸಿದರು. ಸಂಘದ ಗೌರವ ಅಧ್ಯಕ್ಷ ಎಚ್. ಕರುಣಾಕರ ಸಭೆಯನ್ನುದ್ದೇಶಿಸಿ ಮಾತನಾಡಿದರು. ಸಿಐಟಿಯು ಕುಂದಾಪುರ ತಾಲೂಕು ಅಧ್ಯಕ್ಷ ಎಚ್. ನರಸಿಂಹ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ ಶುಭಾಶಯ ಕೋರಿ ಮಾತನಾಡಿದರು.

ಸಂಘದ ಅಧ್ಯಕ್ಷ ಲಕ್ಷ್ಮಣ ಬರೆಕಟ್ಟು ಅಧ್ಯಕ್ಷತೆ ವಹಿಸಿದ್ದರು. ಸಂಘದ ಪದಾಧಿಕಾರಿಗಳಾದ ಗೋವಿಂದ ಗುಡಾರ ಹಕ್ಲು, ಎನ್. ಉಮೇಶ, ವಿ. ನಾರಾಯಣ ಮಲ್ಲಿಕಾರ್ಜುನ, ಅರುಣಕುಮಾರ, ರವೀಂದ್ರ ಶೆಟ್ಟಿ, ಶೀನ ಕಟ್ಕೇರಿ, ವಿ. ಚಂದ್ರ ಕೃಷ್ಣ ದೇವಾಡಿಗ, ಶೇಖರ ಪೂಜಾರಿ, ರಮೇಶ ನಾಯ್ಕ, ಅರೆಹೊಳೆ, ರಮೇಶ ಮಕ್ಕಿ, ರಮೇಶ ಕುಂಭಾಶಿ, ರಾಜೇಶ ಪಡುಕೋಣೆ, ಕೃಷ್ಣ ತಲ್ಲೂರು, ಸಂತೋಷ ಕಲ್ಲಾಗರ, ರಾಘವೇಂದ್ರ ಉಪಸ್ಥಿತರಿದ್ದರು. ಸಂಘಟನಾ ಕಾರ್ಯದರ್ಶಿ ಕಾರ್ಯಕ್ರಮ ನಿರೂಪಿಸಿದರು.

Leave a Reply