ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ತಾಲೂಕಿನ ಮಾವಿನಕಟ್ಟೆ ಶ್ರೀ ಮೂಕಾಂಬಿಕಾ ದೇವಳದ ಪೌಢ ಶಾಲೆಯಲ್ಲಿ ಹದಿನಾಲ್ಕು ವರ್ಷಗಳ ಕಾಲ ಹಿಂದಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿಗೊಂಡ ಮಂಗಳಾ ಅವರನ್ನು ಸನ್ಮಾನಿಸಲಾಯಿತು.
ಕೊಲ್ಲೂರು ದೇವಳದ ಕಾರ್ಯನಿರ್ವಹಣಾಧಿಕಾರಿ ಟಿಆರ್ ಉಮಾ ಇವರು ಶುಭಹಾರೈಸಿದರು. ಶಾಲಾ ಮುಖ್ಯ ಶಿಕ್ಷಕ ಎಚ್. ಕುಶಲ್ ಶೆಟ್ಟಿ, ಸಹಶಿಕ್ಷಕರುಗಳಾದ ಸುಚೇತ, ರೀತಾ, ಕಾಂತಿ, ಸಂತೋಷ ಶೆಟ್ಟಿ, ಮಲ್ಲಿಕಾ, ಸರಸ್ವತಿ, ದಿನಕರ ನಾಯಕ್, ರೇಖಾ, ಜಯಶೀಲ್, ಹರೀಶ್, ಹಾಗೂ ಭೋದಕೇತರ ಸಿಬ್ಬಂದಿಗಳಾದ ಸುಭೋದ , ಗಣೇಶ್ ಉಪಸ್ಥಿತರಿದ್ಧರು.