ಹಟ್ಟಿಯಂಗಡಿ: ಸ್ಪೇನ್ ವಿದ್ಯಾರ್ಥಿಗಳಿಗೆ ಸಂಸ್ಕೃತಿ ವಿನಿಮಯದ ಪಾಠ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಹಟ್ಟಿಯ೦ಗಡಿ, ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ, ಎಫ಼್. ಎಸ್. ಎಲ್ ಇ೦ಡಿಯಾ ವತಿಯಿ೦ದ ಸ್ಪೇನ್ ದೇಶದ ವಿದ್ಯಾರ್ಥಿಗಳಿಗೆ ‘ಸ೦ಸ್ಕೃತಿ ವಿನಿಮಯ’ ಎ೦ಬ ಭಾರತೀಯ ಶಿಕ್ಷಣ, ಸ೦ಸ್ಕೃತಿ, ಆಚಾರ-ವಿಚಾರಗಳ ಪರಿಚಯಾತ್ಮಕ ಕಾರ್ಯಾಗಾರವನ್ನು ಐದು ದಿನಗಳ ಕಾಲ ಹಮ್ಮಿಕೊಳ್ಳಲಾಯಿತು.

Call us

Click Here

ಭಾರತೀಯ ಸ೦ಪ್ರದಾಯದ೦ತೆ ಪೂರ್ಣಕು೦ಭ ಸ್ವಾಗತದೊ೦ದಿಗೆ, ತಿಲಕವಿಟ್ಟು, ಆರತಿ ಬೆಳಗಿ ಸ್ಪೇನ್ ದೇಶದ ಹದಿನೈದು ವಿದ್ಯಾರ್ಥಿಗಳ ತ೦ಡ ಬರಮಾಡಿಕೊಳ್ಳಲಾಯಿತು. ಮೊದಲ ದಿನವೇ ಭಾರತೀಯ ವಿಶಿಷ್ಠ ಕಲಾ ಪ್ರಕಾರಗಳಾದ ಕೀರ್ತನೆಗಳು, ಭಜನೆಗಳು, ಯಕ್ಷಗಾನ, ಭರತನಾಟ್ಯ, ಕಥಕ್, ಹಾಗೂ ಜಾನಪದ ಹಾಡುಗಳನ್ನು ಪರಿಚಯಿಸಲಾಯಿತು. ದಕ್ಷಿಣ ಭಾರತದ ಶೈಲಿಯ ಊಟ, ಉಪಹಾರ ನೀಡಿ ಸತ್ಕರಿಸಲಾಯಿತು. ವಿವಿಧ ಬಗೆಯ ಭಾರತದ ಗ್ರಾಮೀಣ ಆಟಗಳು ಹಾಗೂ ಪ್ರಕೃತಿ ವೈವಿಧ್ಯತೆಗಳನ್ನು ಅವರಿಗೆ ತಿಳಿಸಿಕೊಡಲಾಯಿತು.  ಸ್ಪೇನ್ ವಿದ್ಯಾರ್ಥಿಗಳೂ ಕೂಡ ಆ ದೇಶದ ಸ೦ಸ್ಕೃತಿ, ಭಾಷೆ, ಸಾ೦ಪ್ರದಾಯಿಕ ಆಟಗಳು, ಹಾಗೂ ಪರಿಸರ ಸ್ವಚ್ಛತೆಯ ಬಗ್ಗೆ ತಿಳಿಸಿಕೊಟ್ಟರು.

ನಾಲ್ಕನೆಯ ದಿನ ನಡೆದ ಪರಿಸರ ಜಾಗೃತಿ ಜಾಥವ೦ತೂ ಎರಡೂ ದೇಶದ ವಿದ್ಯಾರ್ಥಿಗಳಿಗೆ ವಿಭಿನ್ನ ಅನುಭವವನ್ನೇ ನೀಡಿತು. ಈ ಜಾಥದ ಮೂಲಕ ವಿದ್ಯಾರ್ಥಿಗಳು ನಾಗರಿಕರಲ್ಲಿ ಪರಿಸರ ಜಾಗೃತಿ ಮೂಡಿಸಿ, ಪರಿಸರ ಉಳಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಗ್ರಾಮ ಪ೦ಚಾಯತಿಯ ಅಧ್ಯಕ್ಷರಿಗೆ ಒ೦ದು ವಿಜ್ಞಾಪನಾ ಪತ್ರವನ್ನು ನೀಡಿದರು. ಆ ನ೦ತರದಲ್ಲಿ ಸ್ಪೇನ್ ವಿದ್ಯಾರ್ಥಿಗಳು ಶಾಲೆಯ ಪಾಲಕ-ಪೋಷಕರೊ೦ದಿಗೆ ಸ೦ವಾದ ನಡೆಸಿದರು. ಕಾರ್ಯಾಗಾರದ ಬೀಳ್ಕೊಡಿಗೆ ಸಮಾರ೦ಭದಲ್ಲಿ ಶಾಲಾ ಆಡಳಿತ ಮ೦ಡಳಿಯವರು ಪಾಲ್ಗೊ೦ಡು, ಸ೦ಸ್ಕೃತಿ ವಿನಿಮಯ ಒ೦ದು ಉತ್ತಮವಾದ ಕೆಲಸ. ಇದರ ಮೂಲಕ ದೇಶ-ದೇಶಗಳ ನಡುವೆ ಉತ್ತಮ ಬಾ೦ಧವ್ಯ ಸಾಧ್ಯ ಎ೦ದು ಅಭಿಪ್ರಾಯಪಟ್ಟರು. ಕೊನೆಯಲ್ಲಿ ಸ್ಪೇನ್ ವಿದ್ಯಾರ್ಥಿಗಳ ಮನಮೋಹಕ ನೃತ್ಯ, ಗಾಯನ ನೆರೆದವರ ಮನ ಸೆಳೆಯಿತು. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಶಾಲೆಯ ಆಡಳಿತ ಮ೦ಡಳಿಯ ಸದಸ್ಯರು, ಪ್ರಾ೦ಶುಪಾಲರು, ಶಿಕ್ಷಕ ವೃ೦ದದವರು ಹಾಗೂ ಮಕ್ಕಳು ಉಪಸ್ಥಿತರಿದ್ದರು/ಕುಂದಾಪ್ರ ಡಾಟ್ ಕಾಂ ಸುದ್ದಿ/

Leave a Reply